newsfirstkannada.com

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಕಿಂಗ್​ಪಿನ್ ಬೆಳಗಾವಿ ಜೈಲಿನಲ್ಲಿರುವ ಉಗ್ರ -NIA ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ

Share :

Published July 31, 2023 at 12:36pm

Update July 31, 2023 at 12:39pm

    ಕೇಂದ್ರ ಸಚಿವ ಗಡ್ಕರಿಗೆ ಬೆದರಿಕೆ ಕೇಸ್​​ ತನಿಖೆಯಲ್ಲಿ ಮಾಹಿತಿ ಬಹಿರಂಗ

    ಬೆಂಗ್ಳೂರು ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿದ್ದ ಉಗ್ರನ ಕುತಂತ್ರ ಇದು

    ಜೈಲಿನಲ್ಲೇ ಇದ್ಕೊಂಡು ಏನೆಲ್ಲ ಕೃತ್ಯಕ್ಕೆ ಸ್ಕೆಚ್ ಹಾಕ್ತಿದ್ದ ಈ ಮಾಸ್ಟರ್​ ಮೈಂಡ್..?

ನವೆಂಬರ್ 19, 2022 ರಂದು ಮಂಗಳೂರಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟವು ಆಕಸ್ಮಿಕ ಅಲ್ಲ, ಉಗ್ರರ ಕೃತ್ಯ ಎಂದು ಎನ್​ಐಎ ತನಿಖೆಯಿಂದ ಬಯಲಾಗಿದೆ. ಮಹಾರಾಷ್ಟ್ರದಲ್ಲಿ ರಾಷ್ಟ್ರೀಯ ತನಿಖಾ ತಂಡವು (NIA) ನಡೆಸಿದ ವಿಚಾರಣೆಯಲ್ಲಿ ‘ಕುಕ್ಕರ್ ಬಾಂಬ್ ಸ್ಫೋಟ’ದ ಹಿಂದಿನ ರೂವಾರಿ ಯಾರೆಂದು ಬಯಲಾಗಿದೆ.

ಏನಿದು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ..?

2022ರ ನವೆಂಬರ್​ನಲ್ಲಿ ಮಂಗಳೂರಿನ ಆಟೋದಲ್ಲಿ ಕುಕ್ಕರ್ ಸ್ಫೋಟಗೊಂಡಿತ್ತು. ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್ ಸ್ಫೋಟಗೊಳ್ಳುತ್ತಿದ್ದಂತೆ, ಕುಕ್ಕರ್ ಬಾಂಬ್ ಹಿಡಿದುಕೊಂಡಿದ್ದ ಶಿವಮೊಗ್ಗ ಮೂಲದ ಮೊಹಮ್ಮದ್ ಶಾರೀಖ್ ಹಾಗೂ ಆಟೋ ಡ್ರೈವರ್ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ, ಘಟನಾ ಸ್ಥಳಕ್ಕೆ ಭದ್ರತಾ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ಆಗ ಪ್ರೆಶರ್ ಕುಕ್ಕರ್ ಒಳಗೆ ಡಿಟೋನೇಟರ್, ವೈರ್ ಹಾಗೂ ಬ್ಯಾಟರಿಗಳನ್ನು ಅಳವಡಿಸಿರೋದು ಪತ್ತೆಯಾಗಿತ್ತು. ಇದೀಗ ಎನ್​ಐಎ ಅಧಿಕಾರಿಗಳು ನಡೆಸಿದ ವಿಚಾರಣೆ ವೇಳೆ ಮಂಗಳೂರು ಕುಕ್ಕರ್ ಬ್ಲಾಸ್ಟ್​ ಆಕಸ್ಮಿಕವಾಗಿ ಸಂಭವಿಸಿಲ್ಲ, ಉಗ್ರರ ಕೃತ್ಯ ಎಂದು ತಿಳಿದುಬಂದಿದೆ.

ಕುಕ್ಕರ್ ಬಾಂಬ್ ಸ್ಫೋಟದ ಕಿಂಗ್​ಪಿನ್ ಉಗ್ರ ಪಾಷಾ

ಕಿಂಗ್​ಪಿನ್ ಯಾರು..?

ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಕಿಂಗ್​ ಪಿನ್ ಮೊಹ್ಮದ್ ಶಾರಿಕ್ ಅಲ್ಲ, ಬದಲಾಗಿ ಬೆಳಗಾವಿಯ ಲಷ್ಕರ್-ಎ-ತೊಯ್ಬಾ (Lashkar-e-Tayiba ) ಸಂಘಟನೆಯ ಉಗ್ರ ಅಫ್ಸರ್ ಪಾಷಾ. ಬೆಳಗಾವಿ ಜೈಲಿನಲ್ಲಿದ್ದ ಉಗ್ರ ಅಫ್ಸರ್ ಪಾಷಾ ಮಂಗಳೂರು ಕುಕ್ಕರ್ ಸ್ಫೋಟದ ಮಾಸ್ಟರ್ ಮೈಂಡ್​​ ಎಂದು ತನಿಖಾಧಿಕಾರಿಗಳು ತಿಳಿದುಕೊಂಡಿದ್ದಾರೆ.

ಹೇಗೆ ಪಾಷಾ ಮಾಸ್ಟರ್​​ ಮೈಂಡ್​..?

2005ರಲ್ಲಿ ಬೆಂಗಳೂರು ಭಾರತೀಯ ವಿಜ್ಞಾನ ಸಂಸ್ಥೆ (AISC) ಮೇಲೆ ನಡೆದ ದಾಳಿ ಕೇಸಲ್ಲಿ ಬಂಧನ ಆಗಿದ್ದ. 2012ರಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಪ್ರಕರಣದಲ್ಲಿಯೂ ಬಂಧನಕ್ಕೆ ಒಳಗಾಗಿ, ಅಪರಾಧಿ ಆಗಿರುವ ಉಗ್ರ ಪಾಷಾಗೆ ಕರ್ನಾಟಕದ ಜೈಲು ಒಂದರಲ್ಲಿ ಶಿವಮೊಗ್ಗ ಮೂಲದ ಶಾರೀಖ್ ಪರಿಚಯ ಆಗಿದ್ದ. ಹೇಗೆಂದರೆ ‘ಮಂಗಳೂರು ಗೋಡೆ’ ಬರಹ ಪ್ರಕರಣದಲ್ಲಿ ಶಾರೀಖ್ ಜೈಲು ಸೇರಿದ್ದ. ಈ ವೇಳೆ ಪಾಷಾನ ಸಂಪರ್ಕ ಶಾರೀಖ್​​ಗೆ ಸಿಕ್ಕಿತ್ತು.

ಉಗ್ರ ಶಾರೀಖ್ ಮತ್ತು ಪಾಷಾ
ಉಗ್ರ ಶಾರೀಖ್ ಮತ್ತು ಪಾಷಾ

ಪರಿಚಯದ ವೇಳೆ ಇಬ್ಬರು ಪರಸ್ಪರ ಸ್ನೇಹಿತರಾಗಿ, ಉಗ್ರ ಚಟುವಟಿಕೆಗಳ ಬಗ್ಗೆ ಪ್ಲಾನ್ ಮಾಡಿದ್ದರಂತೆ. ಬಾಂಬ್ ತಯಾರಿಕೆ ಬಗ್ಗೆಯೂ ಇಬ್ಬರ ಮಧ್ಯೆ ಮಾಹಿತಿ ವಿನಿಮಯ ಆಗಿದೆ.

ಇಷ್ಟೆಲ್ಲ ಗೊತ್ತಾಗಿದ್ದು ಹೇಗೆ..?

ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ವಿಚಾರಣೆಯನ್ನು ಎನ್​ಐಎ ಅಧಿಕಾರಿಗಳು ನಡೆಸುತ್ತಿದ್ದರು. ಬೆಳಗಾವಿ ಹಿಂಡಲಗಾ ಜೈಲಿನಿಂದ ಜಯೇಶ್ ಪೂಜಾರಿ ಎಂಬಾತ ಮಹಾರಾಷ್ಟ್ರ ಪೊಲೀಸರಿಗೆ ಕರೆ ಮಾಡಿ ಗಡ್ಕರಿ ಬೆದರಿಕೆ ಹಾಕಿದ್ದ. ಈ ವಿಚಾರಣೆ ನಡೆಸುವಾಗ, ಬೆಳಗಾವಿ ಜೈಲಿನಲ್ಲಿದ್ದ ಅಫ್ಸಲ್ ಪಾಷಾನ ಲಿಂಕ್ ಸಿಗುತ್ತದೆ. ಅಂತೆಯೇ ಎನ್​ಐಎ ಅಧಿಕಾರಿಗಳು ಬೆಳಗಾವಿ ಜೈಲಿಗೆ ಬಂದು ಅಫ್ಸಲ್ ಪಾಷಾನನ್ನು ಜುಲೈ 14 ರಂದು ತಮ್ಮ ಕಸ್ಟಡಿಗೆ ಪಡೆಯುತ್ತಾರೆ. ನಾಗ್ಪುರದ ತಮ್ಮ ಕಚೇರಿಯಲ್ಲಿ ಉಗ್ರ ಪಾಷಾನನ್ನು ತೀವ್ರ ವಿಚಾರಣೆ ನಡೆಸಿದಾಗ, ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಲಿಂಕ್ ಇರೋದು ಗೊತ್ತಾಗಿದೆ.

ವಿಚಾರಣೆ ವೇಳೆ ಬಾಂಬ್ ತಯಾರಿಕೆಯ ತರಬೇತಿಯಲ್ಲಿ ಭಾಗಿಯಾಗಿರೋದು ಬೆಳಕಿಗೆ ಬಂದಿದೆ. ಬಾಂಗ್ಲದೇಶ ಢಾಕಾಗೆ ಹೋಗಿ ಅಲ್ಲಿ ಬಾಂಬ್​ಗಳನ್ನು ತಯಾರಿಸೋದು ಹೇಗೆ? ಕುಕ್ಕರ್ ಮೂಲಕ ಹೇಗೆ ಸ್ಫೋಟ ಮಾಡಬಹುದು ಅಂತಾ ತರಬೇತಿ ಪಡೆದು ಭಾರತಕ್ಕೆ ವಾಪಸ್ ಆಗಿದ್ದ. ಭಾರತಕ್ಕೆ ವಾಪಸ್ ಆದ ಬೆನ್ನಲ್ಲೇ ಬೆಂಗಳೂರಿನ ಸ್ಫೋಟ ಪ್ರಕರಣದಲ್ಲಿ ಉಗ್ರ ಪಾಷಾ ಬಂಧನಕ್ಕೆ ಒಳಗಾಗಿದ್ದ.

ಗಡ್ಕರಿಗೆ ಬೆದರಿಕೆ ಹಾಕಿದ್ದ ಜಯೇಶ್ ಪೂಜಾರಿ ಅಲಿಯಾಸ್ ಕಾಂತಾ ಅಲಿಯಾಸ್ ಶಾಹೀರ್​ ಮತ್ತು ಪಾಷಾ ಬೆಳಗಾವಿ ಜೈಲಿನಲ್ಲಿದ್ದುಕೊಂಡು ಉಗ್ರ ಚಟುವಟಿಕೆ ಬಗ್ಗೆ ಮಾಸ್ಟರ್ ಪ್ಲಾನ್ ಮಾಡಿದ್ದರು. ತನ್ನ ಸಹ ಕೈದಿಗಳಿಗೂ ತಮ್ಮ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಕಿಂಗ್​ಪಿನ್ ಬೆಳಗಾವಿ ಜೈಲಿನಲ್ಲಿರುವ ಉಗ್ರ -NIA ಅಧಿಕಾರಿಗಳಿಂದ ಸ್ಫೋಟಕ ಮಾಹಿತಿ

https://newsfirstlive.com/wp-content/uploads/2023/07/MNG_-1.jpg

Load More