‘ದೇವಸ್ಥಾನಗಳಲ್ಲಿ ಹಿಂದುಗಳಲ್ಲದವರು ವ್ಯಾಪಾರ ಮಾಡಬಾರದು’
‘ಟೆಂಡರ್ನಲ್ಲಿ ಮುಸ್ಲಿಮರು ಭಾಗವಹಿಸದಂತೆ ಕ್ರಮಕ್ಕೆ ಆಗ್ರಹ’
‘ಮಸೀದಿ, ಚರ್ಚ್ಗಳನ್ನೂ ಧಾರ್ಮಿಕ ದತ್ತಿ ಅಧೀನಕ್ಕೆ ತರಬೇಕು’
ಮಂಗಳೂರು: ಕರಾವಳಿ ಭಾಗದ ದೇವಾಲಯಗಳ ಜಾತ್ರಾ ಮಹೋತ್ಸವ ಸಮಾರಂಭದ ವೇಳೆ ಮುಸ್ಲಿಮರು ವ್ಯಾಪಾರ ಮಾಡದಂತೆ ನಿರ್ಬಂಧಿಸಬೇಕು ಎಂಬ ಒತ್ತಡ ಕೇಳಿ ಬಂದ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ‘ಹಿಂದು ಜಾತ್ರಾ ವ್ಯಾಪಾರಸ್ಥರ ಸಂಘ’ ಅಸ್ಥಿತ್ವಕ್ಕೆ ತರಲಾಗಿದೆ.
ಈ ಬಗ್ಗೆ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ ಮಾತನಾಡಿ, ಸಂಘದ ಮುಖ್ಯ ಉದ್ದೇಶ ದೇವಸ್ಥಾನ ಮತ್ತು ದೈವಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ದೇವಸ್ಥಾನದ ಸುತ್ತಲಿನ ಪ್ರದೇಶದಲ್ಲಿ ಹಿಂದೂಗಳಿಗೆ ಮಾತ್ರ ಗುತ್ತಿಗೆ ನೀಡಬೇಕು. ಇತರೆ ಕೋಮಿನವರಿಗೆ ಅಂಗಡಿಗಳನ್ನು ಗುತ್ತಿಗೆ ನೀಡಬಾರದು ಎಂದು ಆಗ್ರಹಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯಲ್ಲಿ ಮುಸ್ಲಿಂ ವ್ಯಾಪಾರಿಗಳು ಭಾಗವಹಿಸದಿರಲು ನಿಯಮದ ಪ್ರಕಾರ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡುವುದಾದರೆ ಮಸೀದಿ ಮತ್ತು ಚರ್ಚ್ಗಳನ್ನು ಧಾರ್ಮಿಕ ದತ್ತಿ ಇಲಾಖೆ ಅಧೀನಕ್ಕೆ ತರಬೇಕು ಎಂದು ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ