newsfirstkannada.com

2ನೇ ಮದುವೆಯಾಗಿ 6 ತಿಂಗಳಿಗೆ ತ್ರಿವಳಿ ತಲಾಖ್ ಹೇಳಿದ ಪತಿ​; ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಪತ್ನಿ

Share :

30-05-2023

    2ನೇ ಮದುವೆಯಾಗಿ 6 ತಿಂಗಳಿಗೆ ಪತ್ನಿಗೆ ತಲಾಖ್​ ಹೇಳಿದ ಪತಿ

    ಪತ್ನಿಯನ್ನು ಮನೆಯಿಂದ ಹೊರದಬ್ಬಿದ ಪತಿ

    ನ್ಯಾಯ ಕೊಡಿಸಿ ಎಂದು ಪೊಲೀಸ್​ ಠಾಣೆ ಮೆಟ್ಟಿಲೇರಿದ ಪತಿ

ಮಂಗಳೂರು: ತ್ರಿಬಲ್ ತಲಾಖ್ ನಿಷೇಧವಾದರೂ ಮಂಗಳೂರಿನಲ್ಲಿ ತಲಾಖ್ ಪ್ರಕರಣವೊಂದು ಮತ್ತೆ ತಲೆ ಎತ್ತಿದೆ. ಮದುವೆಯಾದ ಆರು ತಿಂಗಳಲ್ಲಿ ಮಾರಣಾಂತಿಕ ಹಲ್ಲೆ ನಡೆಸಿ ಪತ್ನಿಗೆ ತಲಾಖ್ ನೀಡಿದ ಘಟನೆ ಮಾರ್ನಮಿಕಟ್ಟೆಯಲ್ಲಿ ನಡೆದಿದೆ. ಮಹಮ್ಮದ್ ಹುಸೇನ್ ಎಂಬಾತ ತನ್ನ ಪತ್ನಿಯನ್ನು ಮನೆಯಿಂದ ಹೊರದಬ್ಬಿದ್ದು, ಅತ್ತ ಪತಿಯ ಹಲ್ಲೆಯಲ್ಲಿ ಗಂಭಿರವಾಗಿ ಗಾಯಗೊಂಡು ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಮಾರ್ನಮಿ ಕಟ್ಟೆಯ ಮಹಮ್ಮದ್ ಹುಸೇನ್ 6 ತಿಂಗಳ ಹಿಂದೆ ಶಬಾನಾನನ್ನು 2ನೇ ಬಾರಿಗೆ ವಿವಾಹವಾಗಿದ್ದನು. ಆದರೆ ಆಕೆಯ ಮೇಲೆ ಹಲ್ಲೆ ಮಾಡಿ ತಲಾಖ್ ಎಂದು ಹೇಳುವ ಮೂಲಕ ಶಬಾನಾನನ್ನು ಮನೆಯಿಂದ ಹೊರದಬ್ಬಿದ್ದಾನೆ.

ಮಹಮ್ಮದ್​ ಹುಸೇನ್ ವೃತ್ತಿಯಲ್ಲಿ​​ ಹಣ್ಣು ತರಕಾರಿ ವ್ಯಾಪಾರಿಯಾಗಿದ್ದು, ಗಂಡನ ಅನ್ಯಾಯಕ್ಕೆ ನೊಂದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.

ಹಣಕ್ಕಾಗಿ ಪೀಡಿಸಿದ ಗಂಡ

ಮಹಮ್ಮದ್​ ಹುಸೇನ್​ ಶಬಾನಾನನ್ನು ಎರಡನೇ ಬಾರಿಗೆ ಮದುವೆಯಾಗಿದ್ದನು. ಮೊದಲ ಪತ್ನಿಯಿಂದ ಮಹಮ್ಮದ್​ ಹುಸೇನ್​ 2 ಮಕ್ಕಳನ್ನು ಹೊಂದಿದ್ದನು. ನಂತರ ಶಬಾನನ್ನು ವಿವಾಹವಾಗಿದ್ದಾನೆ. ಮದುವೆಯಾದ 8 ದಿನದಲ್ಲಿ ಪತ್ನಿಯಿಂದ ಹಣ ಒಡವೆ ಸೇರಿ 10 ಲಕ್ಷ ರೂಪಾಯಿ ಪೀಕಿಸಿದ್ದನು. ಪತ್ನಿ ಗರ್ಭಿಣಿಯಾದ ಬಳಿಕ ಒತ್ತಾಯ ಪೂರ್ವಕವಾಗಿ ಮಾತ್ರೆ ತಿನ್ನಿಸಿ ಅಬಾರ್ಷನ್ ಮಾಡಿಸಿದ್ದಾನೆ. ಬಳಿಕ ಹಣಕ್ಕಾಗಿ ಪೀಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಗಂಡನ ಹಲ್ಲೆಯಿಂದ ಶಬಾನಾ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ತಲಾಖ್, ತಲಾಖ್, ತಲಾಖ್ 

ಹುಸೇನ್​ ಮೊದಲ ಪತ್ನಿಗೂ ಹಣಕ್ಕಾಗಿ ಪೀಡಿಸಿ ಕೊನೆಗೆ ತಲಾಖ್ ನೀಡಿದ್ದನು. ಇದೀಗ ಎರಡನೇ ಪತ್ನಿ ಶಬಾನಾಗೂ ತಲಾಖ್ ನೀಡಿದ್ದಾನೆ. ತಲಾಖ್ ನೀಡಿ ಎರಡು ಮಕ್ಕಳೊಂದಿಗೆ ಶಬಾನಾ ಅವರನ್ನು ಮನೆಯಿಂದ ಹೊರದಬ್ಬಿದ್ದಾನೆ. ಇದೀಗ ಮಹಮ್ಮದ್​ ಹುಸೇನ್ ಮಾಡಿದ ಮೋಸದಿಂದ ನೊಂದು ಶಬಾನಾ ನನಗೆ ನ್ಯಾಯ ಕೊಡಿ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾಳೆ. ಇಂತಹ ಪರಿಸ್ಥಿತಿ ಮತ್ಯಾರಿಗೂ ಬರಬಾರದೆಂದು ಪೊಲೀಸ್ ಠಾಣೆಯ ಮೆಟ್ಡಿಲೇರಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2ನೇ ಮದುವೆಯಾಗಿ 6 ತಿಂಗಳಿಗೆ ತ್ರಿವಳಿ ತಲಾಖ್ ಹೇಳಿದ ಪತಿ​; ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ಪತ್ನಿ

https://newsfirstlive.com/wp-content/uploads/2023/05/Divorce-Case.jpg

Load More