newsfirstkannada.com

ಗೌಪ್ಯವಾಗಿ ವಿಶೇಷ ಯಾಗ ಮಾಡುತ್ತಿರೋ ಬಿಜೆಪಿ ರಾಜ್ಯಾಧ್ಯಕ್ಷ; ಮತ್ತೆ ಬರುತ್ತಾ ಕಟೀಲ್​ಗೆ ರಾಜಯೋಗ?

Share :

17-06-2023

  ಹೊಸದಾಗಿ ಕಟ್ಟಿಸಿದ ತಮ್ಮ ಮನೆಯಲ್ಲಿ 8 ದಿನಗಳ ಕಾಲ ವಿಶೇಷ ಯಾಗ

  ನಳಿನ್​ ಕುಮಾರ್​ ಕಟೀಲ್​ ಮಾಡುತ್ತಿರುವುದು ದುರ್ಗಾಸಪ್ತಶತಿ ಯಾಗವೇ?

  ಗೌಪ್ಯವಾದ ಈ ಯಾಗದ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆ

ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್​ಕುಮಾರ್ ಕಟೀಲ್​ರಿಂದ ವಿಶೇಷ ಯಾಗ ನೆರವೇರಿಸಲಾಗ್ತಿದೆ. ಪುತ್ತೂರು ತಾಲೂಕಿನ ಸವಣೂರು ಬಳಿಯ ಕುಂಜಾಡಿ ಎಂಬಲ್ಲಿನ ತಮ್ಮ ಕುಟುಂಬದ ತರವಾಡು ಮನೆಯಲ್ಲಿ ಈ ವಿಶೇಷ ಯಾಗ ನಡೆಸಲಾಗ್ತಿದೆ. ಇದೇ ಜೂನ್​ 11ರಿಂದ ಯಾಗ ಆರಂಭಗೊಂಡಿದ್ದು ಇದೇ 18ರಂದು ಪೂರ್ಣಗೊಳ್ಳಲಿದೆ. ಈ ಯಾಗದ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ಆರಂಭವಾಗಿದೆ.

ಮೇ 13.. ಕರ್ನಾಟಕ ಕುರುಕ್ಷೇತ್ರದಲ್ಲಿ ಚಂಡಮಾರುತ ಬೀಸಿ ಶಾಂತವಾಗಿದೆ. ಆದ್ರೆ, ಕಮಲಪಡೆ ಪಾಲಿಗೆ ಆ ಚಂಡಮಾರುತ ಬಿಪರ್​​ಜಾಯ್​​​ಗಿಂತಲೂ ರಣಭೀಕರ. ಮತದಾರನ ತೀರ್ಪು, ಅಧಿಕಾರದ ಗದ್ದುಗೆಯನ್ನೇ ಉರುಳಿಸಿತ್ತು. ಗ್ಯಾರಂಟಿಯ ಮೋಡಿಯಿಂದ ಮೋದಿಯತ್ತಲೂ ತಿರುಗಿ ನೋಡದ ಮತದಾರ, ಕಾಂಗ್ರೆಸ್​​ನ ಕೈಹಿಡಿದಿದ್ದ. ಹೀಗೆ ಅಪ್ಪಳಿಸಿ ಮಾಯವಾದ ಪಾಲಿಟಿಕಲ್​ ಸೈಕ್ಲೋನ್​ನಿಂದ ಬಿಜೆಪಿ ಚೇತರಿಕೆ ಕಾಣದೆ ಚಡಪಡಿಸ್ತಿದೆ. ರಾಜ್ಯಾಧ್ಯಕ್ಷರ ಪಟ್ಟದ ಚೇರ್​, ಮೂರು ಕಾಲಲ್ಲಿ ನಿಂತಿದೆ.

ಯಾಗದ ಮೂಲಕ ದೇವಿಯ ಮೊರೆ ಹೋದ ಕಟೀಲ್​!

ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೌಕೆ, ಅರಬ್ಬಿಯಲ್ಲಿ ಅರ್ಧ ಮುಳುಗಿದೆ. ಈ ಹೀನಾಯ ಸೋಲಿನ ಬಳಿಕ ನಳಿನ್​ಕುಮಾರ್ ಕಟೀಲ್‌ ಅವರ ರಾಜ್ಯಾಧ್ಯಕ್ಷ ಸ್ಥಾನಕ್ಕೂ ಕುತ್ತು ಬರುವ ಲಕ್ಷಣಗಳ ಗೋಚರಿಸುತ್ತಿದೆ. ಚುನಾವಣೆ ಸಂದರ್ಭ ಹಾಗು ಫಲಿತಾಂಶದ ಬಳಿಕ ಹಲವರ ಆಕ್ರೋಶಕ್ಕೆ ಕಟೀಲ್ ಗುರಿಯಾಗಿದ್ದಾರೆ.. ಈ ಬಾರಿ ಅವರ ಸಂಸದ ಸ್ಥಾನಕ್ಕೂ ಕುತ್ತು ಬರಲಿದೆ ಎನ್ನುವ ಮಾತುಗಳು ಪಕ್ಷದಲ್ಲೇ ಹಬ್ಬಿದೆ. ಈ ಬೆಳವಣಿಗೆಯಿಂದ ಕಟೀಲ್​ ರಾಜಕೀಯ ಆತಂಕದಲ್ಲಿ ಅಲೆಯಲ್ಲಿ ತೇಲ್ತಿದೆ.

ಭವಿಷ್ಯದ ಆತಂಕ ನಳಿನ್​ಕುಮಾರ್ ಕಟೀಲ್​ರನ್ನ ಹೆಚ್ಚು ಬಾಧಿಸ್ತಿದೆ. ಸೋಲಿನ ಬಳಿಕ ದೇವರ ಅನುಗ್ರಹಕ್ಕಾಗಿ ಪೂಜೆ ನಿರತರಾಗಿದ್ದಾರೆ. ಹೌದು, ತಮ್ಮ ಕುಟುಂಬದ ತರವಾಡು ಮನೆ ಇರುವ ಪುತ್ತೂರಿನ ಸವಣೂರು ಬಳಿಯ ಕುಂಜಾಡಿಯಲ್ಲಿ ವಿಶೇಷ ಯಾಗ ನಡೆಯುತ್ತಿದೆ. ಮತ್ತೆ ರಾಜಯೋಗ ಪಡೆಯುವುದಕ್ಕಾಗಿ ನಳಿನ್​, ಯಾಗದ ಮೊರೆ ಹೋಗಿದ್ದಾರೆ ಎಂಬ‌ ಮಾತು ಕೇಳಿ ಬರುತ್ತಿದೆ. ತಮ್ಮ ತರವಾಡು ಮನೆ ಆವರಣದಲ್ಲಿ ಹೊಸದಾಗಿ ಕಟ್ಟಿಸಿದ ಮನೆಯಲ್ಲಿ ವಿಶೇಷ ಯಾಗ ಮಾಡುತ್ತಿದ್ದಾರೆ. ಈ ಯಾಗದಲ್ಲಿ ಕಟೀಲ್ ಕುಟುಂಬಸ್ಥರು ಮಾತ್ರ ಭಾಗವಹಿಸಿದ್ದಾರೆ. ಈ ಯಾಗ ಶಾಲೆಗೆ ಇತರ ಯಾರಿಗೂ ಪ್ರವೇಶ ನೀಡಲಾಗುತ್ತಿಲ್ಲ ಎಂದು ಹೇಳಲಾಗಿದೆ.

ಕಟೀಲ್​ ವಿಶೇಷ ಯಾಗ!

 • ಜೂನ್ 11ರಿಂದ ಈ ವಿಶೇಷ ಯಾಗ ಆರಂಭ
 • ನಾಳೆ 18ರ ವರೆಗೆ ಒಟ್ಟು 8 ದಿನ ಕಾಲ ಯಾಗ
 • ವಿದ್ವಾನ್ ಬಾಲಕೃಷ್ಣ ಆಚಾರ್ಯರ ನೇತೃತ್ವ

ಕೇರಳದ 20 ಬ್ರಾಹ್ಮಣರು ಯಾಗದಲ್ಲಿ ಭಾಗಿ

ನಳಿನ್ ಕಟೀಲ್ ಮೊದಲ ಬಾರಿಗೆ 2008ರಲ್ಲಿ ಸಂಸದರಾಗಿ ಆಯ್ಕೆಯಾಗೋ ಮೊದಲು ವಿಶೇಷಯಾಗ ನೆರವೇರಿಸಿದ್ದರು ಎಂದು ಹೇಳಲಾಗುತ್ತದೆ. ಆ‌ ಯಾಗದಿಂದಾಗಿ ಕಟೀಲ್​ಗೆ ರಾಜಯೋಗ ಬಂದಿತ್ತು ಎಂಬ ಮಾತು ಕುಟುಂಬಸ್ಥರಲ್ಲಿದೆ. 2008ರಿಂದ ಈವರೆಗೆ ಇದೇ ಯಾಗದ ಪ್ರತಿಫಲದಿಂದಲೇ ಉನ್ನತ ಹುದ್ದೆಯಲ್ಲಿ ಕಂಗೊಳಿಸ್ತಿದ್ದಾರೆ ಎಂದು ಅವರ ಆಪ್ತರ ಅಭಿಪ್ರಾಯವಾಗಿದೆ. ಅಷ್ಟಕ್ಕೂ ಕಟೀಲ್​​ ಈಗ ಮಾಡ್ತಿರೋದು ದುರ್ಗಾಸಪ್ತಶತಿ ಯಾಗ ಅಂತ ಹೇಳಲಾಗಿದೆ.

ದುರ್ಗಾಸಪ್ತಶತಿ ಯಾಗ ಫಲ ಏನೇನು?

ಈ ಯಾಗದ ಉದ್ದೇಶವೇ ಇಷ್ಟಕಾಮ್ಯಾರ್ಥ ಫಲ. ಶತ್ರುಬಾಧೆ, ದುಷ್ಟಪೀಡೆಗಳನ್ನ ನಿವಾರಿಸುವುದು. ಅರಿಷ್ಟ ಮತ್ತು ಗ್ರಹದೋಷಗಳು ಏನಾದ್ರೂ ಇದ್ರೆ, ನಿವಾರಣೆ ಮಾಡುವ ಶಕ್ತಿ ಈ ವಿಶೇಷ ಯಾಗಕ್ಕಿದೆ ಅನ್ನೋ ನಂಬಿಕೆ ಇದೆ. ಅಲ್ಲದೆ, ಆರೋಗ್ಯ, ಸಂಪತ್ತು ಮತ್ತು ಅಭಿವೃದ್ಧಿಗೂ ದುರ್ಗಾಸಪ್ತಶತಿ ಯಾಗವನ್ನ ಮಾಡಿಸಲಾಗುತ್ತದೆ. ಅಲ್ಲದೆ, ಈವರೆಗೆ ತಾನೇನಾದ್ರೂ ತಪ್ಪು ಮಾಡಿದ್ದಲ್ಲಿ ಕ್ಷಮೆ ಇರಲಿ ಅಂತ ದೇವರಲ್ಲಿ ನಿವೇದನೆ ಮಾಡೋದಾಗಿದೆ.

ನಳಿನ್ ಅವರ ರಾಜ್ಯಾಧ್ಯಕ್ಷ ಹುದ್ದೆಯ ಅವಧಿ 2022ರ ಆಗಸ್ಟ್​ನಲ್ಲೇ ಕೊನೆಗೊಂಡಿದೆ. ಆದ್ರೆ, ಆರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಕಾರಣಕ್ಕೆ ಮುಂದುವರಿಸಲಾಗಿತ್ತು. ಈಗ ಕಟೀಲ್​​ ನೇತೃತ್ವದಲ್ಲೇ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಹೀಗಾಗಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ರಾಜೀನಾಮೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಇದರ ನಡುವೆ ಸಂಸದ ಸ್ಥಾನಕ್ಕೂ ಕುತ್ತುಬರಲಿದೆ ಎಂಬ ಚರ್ಚೆ ನಡೆಯುತ್ತಿದೆ.

ಈ ಎಲ್ಲ ಕಾರಣದಿಂದ ಕಟೀಲ್ ಗೌಪ್ಯವಾಗಿ ನೆರವೇರಿಸುತ್ತಿರುವ ಈ ಯಾಗದ ಬಗ್ಗೆ ಈಗ ರಾಜಕೀಯ ಪಡಸಾಲೆಯಲ್ಲಿ ಭಾರೀ ಚರ್ಚೆಗಳು ಆರಂಭವಾಗಿದೆ. ಅಷ್ಟಕ್ಕೂ ಈ ಯಾಗದ ಮೂಲಕ ಮತ್ತೆ​ ಕಟೀಲ್​ಗೆ ರಾಜಯೋಗ ಬರುತ್ತಾ? ಕಾದುನೋಡಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗೌಪ್ಯವಾಗಿ ವಿಶೇಷ ಯಾಗ ಮಾಡುತ್ತಿರೋ ಬಿಜೆಪಿ ರಾಜ್ಯಾಧ್ಯಕ್ಷ; ಮತ್ತೆ ಬರುತ್ತಾ ಕಟೀಲ್​ಗೆ ರಾಜಯೋಗ?

https://newsfirstlive.com/wp-content/uploads/2023/06/NALIN_KUMAR.jpg

Load More