newsfirstkannada.com

ಮಂಗಳೂರಿನ ಸಿಗ್ನೇಚರ್ ಬ್ರ್ಯಾಂಡ್ ‘ಗಡ್‌ಬಡ್‌ ಐಸ್ ಕ್ರೀಮ್​’​ಗೆ ವಿಶ್ವಮಾನ್ಯತೆ; ಏನಿದರ ವಿಶೇಷತೆ..?

Share :

29-07-2023

    ಟೇಸ್ಟ್ ಅಟ್ಲಾಸ್ ಸಂಸ್ಥೆಯಿಂದ ನೂರು ಐಸ್‌ ಕ್ರೀಮ್‌ಗಳ ಪಟ್ಟಿ

    ಮೈಸೂರು ಪಾಕ್‌ಗೆ 14ನೇ ಸ್ಥಾನ ನೀಡಿದ್ದ ಟೇಸ್ಟ್ ಅಟ್ಲಾಸ್ ಸಂಸ್ಥೆ

    ಪಬ್ಬಾಸ್ ಖ್ಯಾತಿ ಜಗದಗಲ.. ಇದರ ಹೆಜ್ಜೆ ಗುರುತು ಏನು..?

ಮಂಗಳೂರು ಅಂದಕೂಡಲೆ ನೆನಪಿಗೆ ಬರೋದು ಸಮುದ್ರ ಕಿನಾರೆ, ರೋಮಾಂಚನಗೊಳಿಸುವ ಪ್ರಾಕೃತಿಕ ಸುಂದರ ತಾಣಗಳು. ಜೊತೆಗೆ ಪ್ರಸಿದ್ಧ ಐಡಿಯಲ್ ಸಂಸ್ಥೆಯ ಗಡ್ ಬಡ್ ಐಸ್ ಕ್ರೀಮ್. ಹೌದು ಮಂಗಳೂರಿಗೆ ಭೇಟಿ ನೀಡಿದ ಯಾರೇ ಆಗಲಿ ಐಡಿಯಲ್, ಪಬ್ಬಾಸ್ನ ಐಸ್ ಕ್ರೀಮ್ ಸವಿಯದೇ ತೆರಳಲ್ಲ. ಈಗ ಈ ಮಂಗಳೂರಿನ ಐಡಿಯಲ್ ಪಬ್ಬಾಸ್​ನ ಗಡ್‌ಬಡ್‌ ಐಸ್ ಕ್ರೀಮ್​​ಗೆ ವಿಶ್ವಮಾನ್ಯತೆ ದೊರಕಿದೆ. ಜಗತ್ತಿನ ನೂರು ಐಕಾನಿಕ್ ಐಸ್ ಕ್ರೀಮ್‌ಗಳ ಪಟ್ಟಿಗೆ ಸೇರ್ಪಡೆ ಆಗಿದೆ.

ಮಂಗಳೂರು ಅಂದ್ರೆ ಮನಮೋಹಕ ಕಡಲ ಕಿನಾರೆ, ತುಳುನಾಡಿದ ಸಾಂಸ್ಕೃತಿಕ ಶ್ರೀಮಂತಿಕೆ. ದೇವಾಲಯಗಳ ತವರು. ಇದಷ್ಟೇ ಅಲ್ಲ, ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ಐಸ್ಕ್ರೀಮ್​ನ ರಾಜಧಾನಿಯಾಗಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ತಿದೆ. ಇದಕ್ಕೆ ಕಾರಣ ಐಡಿಯಲ್ ಐಸ್ಕ್ರೀಮ್.

ಐಸ್​​ಕ್ರೀಂ ಸರ್ವ್ ಮಾಡ್ತಿರೋದು
ಐಸ್​​ಕ್ರೀಂ ಸರ್ವ್ ಮಾಡ್ತಿರೋದು

ಈಗ ಮಂಗಳೂರು ಅಂದಕೂಡಲೇ ಥಟ್ ಅಂತ ನೆನಪಾಗೋದೇ ಗಡ್ಬಡ್ ಐಸ್ ಕ್ರೀಮ್. ಐಡಿಯಲ್-ಪಬ್ಬಾಸ್‌ನ ಗಡ್‌ಬಡ್ ಮಂಗಳೂರಿನ ಸಿಗ್ನೇಚರ್ ಬ್ರ್ಯಾಂಡ್.. ಮಂಗಳೂರಿಗೆ ಭೇಟಿ ನೀಡುವ ಪ್ರವಾಸಿಗರು ಐಡಿಯಲ್​ನ ಪಬ್ಬಾಸ್ ಐಸ್ ಕ್ರೀಮ್ ಪಾರ್ಲರ್​ಗೆ ತೆರಳಿ ಐಸ್ ಕ್ರೀಮ್ ಸವಿಯದೆ ಹೋದ್ರೆ ಅದೊಂದು ಮಿಸ್ಸಿಂಗ್. ಅಷ್ಟರ ಮಟ್ಟಿಗೆ ಅದರ ಖ್ಯಾತಿ ಜಗದಗಲ ಹಬ್ಬಿದೆ.. ಈಗ ಇದೇ ಐಕಾನಿಕ್ ಪ್ರಾಡಕ್ಟ್, ವಿಶ್ವದ 100 ರುಚಿಕರ ಐಸ್ ಕ್ರೀಮ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಪಬ್ಬಾಸ್‌ನ ಗಡ್‌ಬಡ್‌ಗೆ ವಿಶ್ವಮಾನ್ಯತೆ

  • ಮಂಗಳೂರು ಐಡಿಯಲ್ ಪಬ್ಬಾಸ್‌ ಗಡ್‌ಬಡ್‌ಗೆ ವಿಶ್ವಮಾನ್ಯತೆ
  • ಟೇಸ್ಟ್ ಅಟ್ಲಾಸ್ ಸಂಸ್ಥೆಯಿಂದ ನೂರು ಐಸ್‌ ಕ್ರೀಮ್‌ಗಳ ಪಟ್ಟಿ
  • ಪಟ್ಟಿಯಲ್ಲಿ ಮಂಗಳೂರಿನ ಗಡ್‌ಬಡ್ ಐಸ್ಕ್ರೀಮ್ ಕೂಡ ಸ್ಥಾನ
  • ಮೈಸೂರು ಪಾಕ್‌ಗೆ 14ನೇ ಸ್ಥಾನ ನೀಡಿದ್ದ ಟೇಸ್ಟ್ ಅಟ್ಲಾಸ್ ಸಂಸ್ಥೆ
  • ಇದೀಗ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಮಂಗಳೂರಿನ ಗಡ್‌ಬಡ್

ಪಬ್ಬಾಸ್​ನ ಹೆಜ್ಜೆ ಗುರುತು!

ಮಂಗಳೂರಿನ ಐಡಿಯಲ್ ಸಂಸ್ಥೆಯನ್ನ 1975ರಲ್ಲಿ ಪ್ರಭಾಕರ ಕಾಮತ್ ಆರಂಭಿಸಿದ್ದರು. ಆರಂಭದ ಕೆಲ ತಿಂಗಳಲ್ಲಿ ಗಡ್‌ಬಡ್ ಐಸ್ ಕ್ರೀಂ ತಯಾರಿಸಲಾಯಿತು. ಮಂಗಳೂರಿನ ಐಡಿಯಲ್ ಮತ್ತು ಪಬ್ಬಾಸ್‌ನಲ್ಲಿ ತಯಾರಾಗುವ ಗಡ್ಬಡ್ ಐಸ್‌ಕ್ರೀಂ ಹಣ್ಣುಗಳು, ನಟ್ಸ್ ಮತ್ತು ಸಿರಪ್‌ಗಳ ಮಿಶ್ರಣ, ಕೇಸರಿ, ಐಸ್ ಕ್ರೀಮ್, ಜೆಲ್ಲಿ, ವಿವಿಧ ಬಗೆಯ ನಟ್ಸ್‌ಗಳು, ಸ್ಟ್ರಾಬೆರಿ ಐಸ್ ಕ್ರೀಂ, ವಿವಿಧ ಬಗೆಯ ಹಣ್ಣಿನ ತುಂಡುಗಳು, ವೆನಿಲ್ಲಾ ಐಸ್ ಕ್ರೀಮ್‌ಗಳನ್ನ ಒಳಗೊಂಡಿದೆ. 48 ವರ್ಷಗಳಿಂದ ಗಡ್‌ಬಡ್ ಗುಣಮಟ್ಟವನ್ನ ಜನರ ಅಭಿರುಚಿಗೆ ತಕ್ಕಂತೆ ಉತ್ತಮ ಪಡಿಸಲಾಗಿದೆ.. ಈ ಕಾರಣ, ಇಂದು ಗಡ್‌ಬಡ್ ಐಕಾನಿಕ್ ಪ್ರಾಡಕ್ಟ್ ಆಗಿದೆ.

ಐಸ್​ ಕ್ರೀಂ ಸವಿಯುತ್ತಿರುವ ಹೆಣ್ಮಕ್ಕಳು
ಐಸ್​ ಕ್ರೀಂ ಸವಿಯುತ್ತಿರುವ ಹೆಣ್ಮಕ್ಕಳು

ಮಂಗಳೂರಿನವರಿಗೆ ಐಡಿಯಲ್ ಮತ್ತು ಪಬ್ಬಾಸ್‌ನ ಐಸ್ ಕ್ರೀಂ ರುಚಿ ದೇಶದೆಲ್ಲೆಡೆ ಪರಿಚಿತ ಆಗಿದೆ.. ಮುಂಬೈ, ಗೋವಾ ಸಹಿತ ಇನ್ನಿತರ ಪ್ರದೇಶದಿಂದ ನಿತ್ಯ ಮಂಗಳೂರಿಗೆ ಬರುವ ಪ್ರವಾಸಿಗರು ಆಗಮಿಸಿ ಗಡ್‌ಬಡ್ ರುಚಿಯನ್ನ ಆಸ್ವಾದಿಸುತ್ತಾರೆ..
ಪ್ರಸ್ತುತ ಐಕಾನಿಕ್ ಐಸ್‌ಕ್ರೀಮ್‌ಗಳ ಪಟ್ಟಿಯಲ್ಲಿ ಗಡ್‌ಬಡ್‌ಗೆ ವಿಶ್ವಮಾನ್ಯತೆ ಲಭಿಸಿರುವುದು ಮಂಗಳೂರೀನ ಖ್ಯಾತಿಗೆ ಮತ್ತೊಂದು ಹೆಮ್ಮೆಯ ಗರಿ‌ ಸೇರಿಸಿದೆ.. ಈ ಬಾರಿ ಮಂಗಳೂರಿಗೆ ಭೇಟಿ ನೀಡಿದ್ರೆ ಐಕಾನಿಕ್ ಐಸ್ ಕ್ರೀಮ್ ಸವಿಯದೇ ವಾಪಸ್ ತೆರಳ ಬೇಡಿ.. ಏನಂತಿರಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಂಗಳೂರಿನ ಸಿಗ್ನೇಚರ್ ಬ್ರ್ಯಾಂಡ್ ‘ಗಡ್‌ಬಡ್‌ ಐಸ್ ಕ್ರೀಮ್​’​ಗೆ ವಿಶ್ವಮಾನ್ಯತೆ; ಏನಿದರ ವಿಶೇಷತೆ..?

https://newsfirstlive.com/wp-content/uploads/2023/07/MNG_ICE-5.jpg

Load More