newsfirstkannada.com

ಯುವತಿಯರೇ ಹುಷಾರ್​​! ಇನ್​​ಸ್ಟಾದಲ್ಲಿ ಗಾಳ ಹಾಕಿದ; ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟ!

Share :

29-06-2023

    ಆಕೆಯನ್ನ ಬಲೆಗೆ ಬೀಳಿಸಲು ಇನ್​ಸ್ಟಾದ ಮೊರೆ ಹೋಗಿದ್ದ ಆರೋಪಿ

    ಕಡೆಗೆ ಒಂದು ದಿನ ಬಲೆಗೆ ಬಿದ್ದೇ ಬಿಟ್ಟಿದ್ದಳು.. ಆ ನಂತರ ನಡೆದಿದ್ದೇ ಬೇರೆ

    ಈ ಮೊದಲು ಗಾಂಜಾ ಕೇಸ್​ನಡಿ ಆರೋಪಿಯನ್ನ ಬಂಧಿಸಲಾಗಿತ್ತು

ಮಂಗಳೂರು: ಫೇಸ್‌ಬುಕ್, ಇನ್‌ಸ್ಟಾಗ್ರಾಂ ಅನ್ನು ಬಳಸೋ ಹದಿಹರೆಯದ ಯುವತಿಯರು ಓದಲೇಬೇಕಾದ ಸ್ಟೋರಿ ಇದು. ಇನ್​ಸ್ಟಾಗ್ರಾಂ ಮೂಲಕ ಪರಿಚಯವಾದ ಯುವತಿಯನ್ನು ನಿರಂತರವಾಗಿ 20 ದಿನಗಳ ಕಾಲ ದೈಹಿಕವಾಗಿ ಬಳಸಿಕೊಂಡು ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

ಕಡಬ ಮೂಲದ ಅನೀಶ್ ರೆಹಮಾನ್ ಬಂಧಿತ ವ್ಯಕ್ತಿ. ಅನೀಶ್​ಗೆ ಇನ್​ಸ್ಟಾಗ್ರಾಮ್​ ಮೂಲಕ ಯುವತಿಯೊಬ್ಬಳು ಪರಿಚಯವಾಗಿದ್ದಳು. ನಂತರ ಆಕೆಯನ್ನು ಮದುವೆ ಆಗುವುದಾಗಿ ನಂಬಿಸಿದ್ದನು. ಈ ಹಿನ್ನೆಲೆಯಲ್ಲಿ ಹೋಟೆಲ್​ನಲ್ಲಿ ರೂಮ್​ ಮಾಡಿದ್ದ ಆರೋಪಿ ಆಕೆಯ ಜೊತೆ ನಿರಂತರವಾಗಿ 20 ದಿನ ದೈಹಿಕ ಸಂಪರ್ಕ ಬೆಳೆಸಿದ್ದನು.

ಆದರೆ ಆತನಿಗೆ ಮದುವೆಯಾಗಿರುವುದು ತಿಳಿದು ಯುವತಿ ಮಂಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಐಪಿಸಿ 506, 417 ಹಾಗೂ 376 ರ ಸೆಕ್ಷನ್​ ಅಡಿ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಅರೆಸ್ಟ್​ ಮಾಡಿದ್ದಾರೆ. ಈ ಮೊದಲು ​ಗಾಂಜಾ ಕೇಸ್​ನಡಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ  

ಯುವತಿಯರೇ ಹುಷಾರ್​​! ಇನ್​​ಸ್ಟಾದಲ್ಲಿ ಗಾಳ ಹಾಕಿದ; ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟ!

https://newsfirstlive.com/wp-content/uploads/2023/06/INSTAGRAM_MAN_ARREST.jpg

Load More