ದೇವಸ್ಥಾನಗಳ ಬಳಿ ಇರೋ ಮನೆಗಳೇ ಟಾರ್ಗೆಟ್
ಹೂವು ಕಾಯಿ ಜೊತೆ ಮತ್ತು ಬರೋ ₹100 ನೋಟು
ಬಯಸದೇ ಬಂದ ಭಾಗ್ಯ ಅಂತ ಹಣ ತಗೊಂಡ್ರೆ ಫಿನಿಷ್
ಬೆಂಗಳೂರು: ಆ ಮನೆಯವರು ತಾವಾಯ್ತು ತಮ್ಮ ಕೆಲಸ ಆಯ್ತು ಅಂತ ಇದ್ದವರು. ಅವರನ್ನ ಭೇಟಿಯಾಗೋಕೆ ಬಂದವ್ರು ಇಬ್ಬರು. ಮನೆಯಲ್ಲಿದ್ದ ಮಹಿಳೆಗೆ ಮಾಂಗಲ್ಯ ಪೂಜೆ ಮಾಡಿಸುವಂತೆ ಕೇಳಿದ್ರು. ಅದಕ್ಕೆ ಒಲ್ಲೆ ಅಂದವಳಿಗೆ ಮಂಕುಬೂದಿ ಎರಚಿದ್ರು.. ಆಮೇಲಾಗಿದ್ದೆಲ್ಲಾ ಅಗೋಚರ.
ಹೂವು, ತೆಂಗಿನಕಾಯಿ, ದೇವಸ್ಥಾನ, ಒಂದಿಷ್ಟು ಜನ. ಇಲ್ಲೇ ಆಗಿರೋದು ಆಗಬಾರದ್ದೊಂದು ಘಟನೆ. ಆನೇಕಲ್ ತಾಲ್ಲೂಕಿನ ಬ್ಯಾಗಡದೇನಹಳ್ಳಿ ಮತ್ತು ಜಂಗಲ್ ಪಾಳ್ಯ ಈ ಭಾಗದಲ್ಲಿ ಬೈಕ್ ಮೇಲೆ ಬಂದ ಇಬ್ಬರು ಭೇಟಿ ಕೊಟ್ಟರು. ಬಂದವ್ರೇ ತೋರಿಸಿದ್ದು ಈ ಹೂವು. ಕಾಯಿ ಮತ್ತು ನೂರು ರುಪಾಯಿ ನೋಟು.
ಮಂಕು ಬೂದಿ ಹಾಕಿದ್ರಾ..?
ಇಬ್ಬರ ಬಳಿ ಚಿನ್ನದ ಮಾಂಗಲ್ಯ ಸರ ಕದ್ದೊಯ್ದ ಕಳ್ಳರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಬ್ಯಾಗಡದೇನಹಳ್ಳಿಯ ಮುನಿರತ್ನಮ್ಮ ಎಂಬುವವರ ಬಳಿ 45 ಗ್ರಾಮ್ನ ಮಾಂಗಲ್ಯ ಸರ ಕದ್ದೊಯ್ದರೆ. ಜಂಗಲ್ಪಾಳ್ಯದ ವಿಜಯಮ್ಮ ಬಳಿ 110 ಗ್ರಾಮ್ನ ಮಾಂಗಲ್ಯ ಸರ ಕದ್ದು ಎಸ್ಕೇಪ್ ಆಗಿದ್ದಾರೆ ಈ ಐನಾತಿಗಳು. ಇವರು ಟಾರ್ಗೆಟ್ ಮಾಡಿದ್ದು ಯಾವ ಊರಲ್ಲಿ ದೇವಸ್ಥಾನಗಳಿದ್ಯೋ ಆ ದೇವಸ್ಥಾನದ ಮುಂದಿನ ಮನೆಯವರನ್ನ. ದೇವಸ್ಥಾನದಲ್ಲಿ ಪೂಜೆ ಮಾಡಿಕೊಡುವಂತೆ ಮೊದಲು ಕೇಳ್ತಾರೆ. ನಾವು ಮಾಡಿಕೊಡೊಲ್ಲ ನೀವೆ ಮಾಡಿಕೊಳ್ಳಿ ಅಂದ್ರೂ ಒತ್ತಾಯ ಮಾಡ್ತಾರೆ.
ನೂತನವಾಗಿ ಬಂಗಾರದ ಅಂಗಡಿಗೆ ಒಳಿತಾಗಲೆಂದು ಪೂಜೆ ಮಾಡಿಕೊಡಿ ಅಂತ ನೆಪ ಹೇಳೋ ಅವರು ಹೂ, ತೆಂಗಿನಕಾಯಿ ಜೊತೆಗೆ ನೂರು ರೂಪಾಯಿ ನೋಟು ಕೊಡ್ತಾರೆ. ಅದನ್ನ ತಗೊಂಡ ಮಹಿಳೆಯರು ಮಂಕು ಕವಿದಂತಾಗಿ ನಿಂತಲ್ಲೇ ನಿಲ್ತಾರೆ . ಆ ವೇಳೆ ಮಹಿಳೆಯರ ಸರಗಳ್ಳತನ ಮಾಡಿ ಬಳಿಕ ನೂರು ರೂಪಾಯಿ ನೋಟು ವಾಪಸ್ ಪಡೆದು ಎಸ್ಕೇಪ್ ಆಗ್ತಾರೆ.
ಘಟನೆ ಸಂಬಂಧ ಆನೇಕಲ್ ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಚಲನವಲನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದನ್ನ ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಮನೆಯಲ್ಲಿ ಒಂಟಿಯಾಗಿರೋ ಮಹಿಳೆಯರೇ ಮತ್ತು ಹಣ ಬಂತು ಅಂತ ತಗೊಳ್ಳೋ ಮಸುಳ್ಳವರೇ.. ಚಿಕ್ಕ ವಸ್ತುವಿನ ಮೇಲೆ ಆಸೆ ಪಟ್ಟು ಬೆಲೆ ಬಾಳೋ ವಸ್ತುಗಳನ್ನ ಕಳ್ಕೊಳ್ಳಬಹುದು ಎಚ್ಚರ ಎಚ್ಚರ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ