newsfirstkannada.com

‘ಕಾಲ್​ ಶೀಟ್​ ಕೊಡದೆ ಸತಾಯಿಸುತ್ತಿದ್ದಾರೆ’.. ಕಿಚ್ಚನ ವಿರುದ್ಧ ಮಾಣಿಕ್ಯ ನಿರ್ಮಾಪಕ M N​ ಕುಮಾರ್ ಗಂಭೀರ ಆರೋಪ

Share :

03-07-2023

    ‘ಮುತ್ತತ್ತಿ ಸತ್ಯರಾಜ್’ ಕಾಲ್​ ಶೀಟ್​ ವಿಚಾರವಾಗಿ ಸುದ್ದಿಗೋಷ್ಠಿ

    ಕಿಚ್ಚನ ವಿರುದ್ಧ ನಿರ್ಮಾಪಕ ಎಮ್​ ಎನ್​ ಕುಮಾರ್ ಆರೋಪ

    ಮನವಿಗೆ ಸ್ಪಂದಿಸದೇ ಇದ್ದರೆ ಧರಣಿ ಕೂರುತ್ತೇನೆ ಎಂದ ನಿರ್ಮಾಪಕ

ಸ್ಯಾಂಡಲ್​ವುಡ್​ ನಟ ಸುದೀಪ್​ ವಿರುದ್ಧ ನಿರ್ಮಾಪಕ ಎಮ್​ ಎನ್​ ಕುಮಾರ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಾದ್​ಶಾ ಕಿಚ್ಚ ನನಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಿರ್ಮಾಪಕ ಎಮ್​ ಎನ್​ ಕುಮಾರ್ ಕಿಚ್ಚ ಸುದೀಪ್ ಅವರ ಜೊತೆಗೆ ರಂಗ sslc, ಕಾಶಿ , ಮಾಣಿಕ್ಯ ಮತ್ತು ಮುಕುಂದ ಮುರಾರಿ ಸಿನಿಮಾದ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಮಾತ್ರವಲ್ಲದೆ ಸುದೀಪ್ ಅವರ ಹಲವು ಸಿನಿಮಾಗೆ ವಿತರಕರಾಗಿ ಕೆಲಸ ಮಾಡಿದ್ದಾರೆ. ಆದರೆ ಕಿಚ್ಚ ವಿಕ್ರಾಂತ್ ರೋಣ ಸಿನಿಮಾದ ನಂತರ ನನ್ನ ಸಿನಿಮಾಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಇದೀಗ ಆರೋಪಿಸಿದ್ದಾರೆ.

ನಿರ್ಮಾಪಕ ಸಂಘದವರ ಬೆಂಬಲ

ನಿರ್ಮಾಪಕ ಸಂಘದವರು ಬೆಂಬಲ ಪಡೆಯುವ ಮೂಲಕ ಇಂದು ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕ ಎಮ್​ ಎನ್​ ಕುಮಾರ್, ಸುದೀಪ್ ಅವರ ಜೊತೆಗಿದ್ದ ಕಮಿಟ್ ಮೆಂಟ್ ಬಗ್ಗೆ ಸುದೀಪ್ ಪತ್ನಿ ಜೊತೆಗೂ ಮಾತುಕತೆ ನಡೆಸಲಾಗಿತ್ತು. ನಂದಕಿಶೋರ್ ಅವರೊಂದಿಗೂ ಮುಂಗಡ ಹಣ ಕೊಟ್ಟು ಕಥೆ ರೆಡಿಮಾಡಲಾಗಿದೆ ಎಂದು ಹೇಳಿದರು.

ನಂತರ ಮಾತು ಮುಂದುವರಿಸಿದ ನಿರ್ಮಾಪಕ ಎಮ್​ ಎನ್​ ಕುಮಾರ್, ವಾಣಿಜ್ಯ ಮಂಡಳಿಯಿಂದ ಸುದೀಪ್​ಗೆ ಸುಮಾರು ಆರು ಪತ್ರ ಬರೆಯಲಾಗಿದೆ. ಪೂರ್ಣ ಹಣ ಪಾವತಿಸಲಾಗಿದೆ. ‘ಮುತ್ತತ್ತಿ ಸತ್ಯರಾಜು’ ಟೈಟಲ್ ನೋಂದಣಿ ಮಾಡಿ. ಕೆಲಸ ಶುರು ಮಾಡಲಾಗಿತ್ತು ಎಂದು ಹೇಳಿದ್ದಾರೆ.

8 ವರ್ಷದ ಹಿಂದೆ ಮಾತು ಕೊಟ್ಟಿದ್ರು

ಬಳಿಕ ಮಾತನಾಡಿದ ಅವರು, 8 ವರ್ಷದ ಹಿಂದೆ ಮಾತು ಕೊಡಲಾಗಿತ್ತು. ಪೈಲ್ವಾನ್, ಕೋಟಿಗೊಬ್ಬ ಆದಮೇಲೆ ನಮ್ಮ ಸಿನಿಮಾ ಆಗಬೇಕಿತ್ತು. ಅದಾದ ನಂತರ ವಿಕ್ರಾಂತ್ ರೋಣ ಸಿನಿಮಾ ಶುರು ಮಾಡಿದ್ದರು. ಇದೀಗ ಹೈದರಾಬಾದ್ ನಲ್ಲಿ ಬೇರೆ ಸಿನಿಮಾ ಶುರು ಮಾಡಿದ್ದಾರೆ ಎಂದು ನಿರ್ಮಾಪಕ ಎಮ್​ ಎನ್​ ಕುಮಾರ್ ಆರೋಪಿಸಿದ್ದಾರೆ.

ಸುದೀಪ್ ಮನೆಯ ಅಡುಗೆ ಮನೆ ರಿಪೇರಿಗೆ 10 ಲಕ್ಷ.  ಆರ್. ಆರ್ ನಗರ ಮನೆ ತೆಗೆದುಕೊಳ್ಳಲು ಸುದೀಪ್ ಅವರಿಗೆ ಹಣ ಕೊಟಿದ್ದೆ.  ನಂದಕಿಶೋರ್ ಮಾಡುವ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಬಹುತೇಕ ಪೂರ್ಣಗೊಂಡಿದೆ. ಈಗ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಮುತ್ತತ್ತಿ ಸತ್ಯರಾಜ್

ಕೊನೆ ಬಾರಿ ಸಿಕ್ಕಾಗ ‘ಮುತ್ತತ್ತಿ ಸತ್ಯರಾಜ್’ ಸಿನಿಮಾದ ಟೈಟಲ್ ರಿಜಿಸ್ಟ್ರರ್ ಮಾಡಿಸಿ ಎಂದು ಹೇಳಿದರು. ಅದರಂತೆ ಮುಂದುವರಿದೆವು ಆದರೀಗ ಕಾಲ್ ಶೀಟ್ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಎಮ್​ ಎನ್​ ಕುಮಾರ್ ಆರೋಪಿಸಿದ್ದಾರೆ.

ಧರಣಿ ಕೂರುತ್ತೇನೆ

ಸುದೀಪ್ ನನ್ನ ಮನವಿಗೆ ಸ್ಪಂದಿಸದೇ ಇದ್ದರೆ ಎರಡು ದಿನಗಳ ನಂತರ ಧರಣಿ ಕೂರುತ್ತೇನೆ. ಇದನ್ನು ಹೊರತುಪಡಿಸಿ ನನಗೆ ಬೇರೆ ದಾರಿ ಕಾಣುತ್ತಿಲ್ಲ. ಈ ಸಿನಿಮಾಕ್ಕಾಗಿ ಎರಡು ಮನೆ ಮಾರಿದ್ದೇನೆ. ಸುಮಾರು ಒಂಭತ್ತು ಕೋಟಿ ಸಾಲ ತಂದು ಪ್ರತಿ ತಿಂಗಳು ಬಡ್ಡಿ ಕಟ್ಟುತ್ತಿದ್ದೇನೆ. ಸುದೀಪ್ ಅವರಿಂದ ತೊಂದರೆಗೆ ಸಿಲುಕಿದ್ದೇನೆ ಎಂದು ಎಮ್​ ಎನ್​ ಕುಮಾರ್ ಸುದ್ದಿಗೋಷ್ಠಿ ಮೂಲಕ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾಲ್​ ಶೀಟ್​ ಕೊಡದೆ ಸತಾಯಿಸುತ್ತಿದ್ದಾರೆ’.. ಕಿಚ್ಚನ ವಿರುದ್ಧ ಮಾಣಿಕ್ಯ ನಿರ್ಮಾಪಕ M N​ ಕುಮಾರ್ ಗಂಭೀರ ಆರೋಪ

https://newsfirstlive.com/wp-content/uploads/2023/07/Kiccha-Sudeep-2.jpg

Load More