ಮಹಿಳೆರನ್ನು ಬೆತ್ತಲೆಗೊಳಿಸಿ ಮೆರವಣಿಗೆ, ಮನುಕುಲ ತಲೆ ತಗ್ಗಿಸೋ ಕೃತ್ಯ
ಉದ್ವಿಗ್ನಗೊಂಡ ಮಣಿಪುರ ಎಲ್ಲೆಡೆ ಪ್ರತಿಭಟನೆ ಕಾವು.. ಬಿಗಿ ಬಂದೋಬಸ್ತ್
ಫೇಕ್ ನ್ಯೂಸ್ನಿಂದಾಗಿ ನಡೆಯಿತಾ ಘನಘೋರ ಕೃತ್ಯ..?
ಮಣಿಪುರದಲ್ಲಿ ನಡೆದ ಘನಘೋರ ಕೃತ್ಯ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಹೆಣ್ಣನ್ನು ದೇವತೆ ಅಂತಾ ಪೂಜಿಸೋ ಭಾರತದಲ್ಲಿ ಇಡೀ ಮನುಕುಲ ತಲೆ ತಗ್ಗಿಸುವ ಕೃತ್ಯ ನಡೆದಿದೆ. ಮಣಿಪುರದಲ್ಲಿ ನರರಕ್ಕಸರ ಗುಂಪೊಂದು ಇಬ್ಬರು ಮಹಿಳೆಯರನ್ನ ಬೆತ್ತಲೆಗೊಳಿಸಿ ವಿಕೃತ ಮೆರೆದಿದ್ದಾರೆ. ಈ ಹೀನಾಯ ಕೃತ್ಯಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ಸ್ಫೋಟಗೊಂಡಿದೆ.
2 ತಿಂಗಳ ಹಿಂದೆ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ವೇಳೆ ನರರಕ್ಕಸರು ನಡೆಸಿದ ದೌರ್ಜನ್ಯವಿದು. ಕುಕಿ ಮತ್ತು ಮೇಥಿ ಸಮುದಾಯದ ಜನರ ನಡುವೆ ಸಂಘರ್ಷ ನಡೆಯುತ್ತಿದ್ದ ವೇಳೆ ಗ್ರಾಮಕ್ಕೆ ನುಗ್ಗಿದ್ದ ಗುಂಪೊಂದು ಇಬ್ಬರು ಮಹಿಳೆಯರನ್ನ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದರು. ಜಮೀನಿನಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. 2 ತಿಂಗಳ ಹಿಂದೆ ನಡೆದ ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ.
ನಾಲ್ವರು ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು
ನಿನ್ನೆ ಇಂಥದ್ದೊಂದು ಅಮಾನವೀಯ ಕೃತ್ಯದ ವಿಡಿಯೋ ವೈರಲ್ ಆಗ್ತಿದ್ದಂತೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ನರರಕ್ಕಸರಿಗಾಗಿ ಬೇಟೆಯಾಡೋಕೆ ಅಖಾಡಕ್ಕೆ ಇಳಿದಿದ್ದಾರೆ. ಮೊದಲು 32 ವರ್ಷದ ಹೆರಾದಾಸ್ ಎಂಬ ದುಷ್ಕರ್ಮಿಯನ್ನ ಬಂಧಿಸಿದ್ದರು. ಬಳಿಕ ಆತನ ಜೊತೆಗಿದ್ದವರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಇನ್ನೂ ಮೂವರು ದುರುಳರನ್ನ ಅರೆಸ್ಟ್ ಮಾಡಿದ್ದಾರೆ. ಈವರೆಗೂ ಒಟ್ಟು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.
ಆರೋಪಿ ಹೆರಾದಾಸ್ ಮನೆ ಸುಟ್ಟು ಹಾಕಿದ ಮಹಿಳೆಯರು
ಇನ್ನು ಈ ಅಮಾನವೀಯ ಕೃತ್ಯದಲ್ಲಿ ಅರೆಸ್ಟ್ ಆಗಿರುವ ಹೆರಾದಾಸ್ ವಿರುದ್ಧ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಹೆರಾದಾಸ್ ಮನೆಗೆ ಮೇಥಿ ಸಮುದಾಯದ ಮಹಿಳೆಯರು ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ.
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಎಲ್ಲೆಡೆ ಆಕ್ರೋಶ
ಮಣಿಪುರದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯವನ್ನ ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದ್ದಾರೆ. ರಸ್ತೆ ಮೇಲೆ ಮಲಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಜೆಪಿ ಬಾವುಟಗಳನ್ನ ಸುಟ್ಟುಹಾಕಿದ್ದಾರೆ. ಮತ್ತೊಂದೆಡೆ ಜನರು ಬೃಹತ್ ಪ್ರತಿಭಟನಾ ಱಲಿ ನಡೆಸಿ ತಪ್ಪಿದಸ್ಥರಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕಾಂಗ್ರೆಸ್ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದಾರೆ. ಇತ್ತ ಹಿಂಸಾಚಾರವನ್ನ ಸರ್ಕಾರ ಕೂಡಲೇ ನಿಯಂತ್ರಣಕ್ಕೆ ತರುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ. ನಿಮ್ಮ ಕೈಯಲ್ಲಿ ಆಗದಿದ್ರೆ ನಾವೇ ಮಾಡ್ತೀವಿ ಅಂತಾ ಚಾಟಿ ಬೀಸಿದೆ.
ಫೇಕ್ ನ್ಯೂಸ್ನಿಂದಾಗಿ ನಡೆದಿತ್ತು ಘನಘೋರ ಕೃತ್ಯ
ಅಂದಹಾಗೆ ಇಬ್ಬರು ಮಹಿಳೆಯರನ್ನ ದುಷ್ಕರ್ಮಿಗಳು ಹೀಗೆ ಬೆತ್ತಲೆಗೊಳಿಸಲು ಅದೊಂದು ಫೇಕ್ ನ್ಯೂಸ್ ಕಾರಣ. ಈ ಬಗ್ಗೆ ಖುದ್ದು ಮಣಿಪುರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. 2 ತಿಂಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ಅತ್ಯಾಚಾರ ಮಣಿಪುರದಲ್ಲಿ ನಡೆದಿದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ಫೇಕ್ ನ್ಯೂಸ್ ಹರಿದಾಡಿದೆ. ಕೂಕಿ ಸಮುದಾಯದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾಗಿ ಸುದ್ದಿ ಹರಿದಾಡಿದೆ. ಇದರಿಂದ ಕಾಂಗ್ಪೋಕ್ಪಿಯಲ್ಲಿ ರೊಚ್ಚಿಗೆದ್ದ ಯುವಕರು ಮೇಟಿ ಸಮುದಾಯದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ವಿಕೃತಿ ಮೆರೆದಿದ್ದಾರೆ ಎನ್ನಲಾಗಿದೆ.
ಮಣಿಪುರದದಲ್ಲಿ ನಡೆದ ಮಹಿಳೆಯರ ಮೇಲಿನ ದೌರ್ಜನ್ಯ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಹೆಣ್ಣನ್ನ ಪೂಜಿಸುವ ನೆಲದಲ್ಲಿ ಇಂಥದ್ದೊಂದು ಹೀನಾಯ ಕೃತ್ಯ ನಡೆದಿರೋದು ನಿಜಕ್ಕೂ ದೇಶದ ಗೌರವಕ್ಕೊಂದು ಕಪ್ಪು ಚಿಕ್ಕೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ