newsfirstkannada.com

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ.. ಸದನದಲ್ಲಿ ರಾಹುಲ್​ ಗಾಂಧಿಯಿಂದ ಚರ್ಚೆ ಆರಂಭವಾಗುವ ಸಾಧ್ಯತೆ..!

Share :

08-08-2023

    ಪ್ರಧಾನಿ ಮಣಿಪುರ, ಹರಿಯಾಣ ಹಿಂಸಾಚಾರದ ಬಗ್ಗೆ ಮಾತನಾಡಲಿ

    ಆ. 10 ರಂದು ಪ್ರಧಾನಿ ಮೋದಿಯಿಂದ ವಿರೋಧ ಪಕ್ಷಗಳಿಗೆ ಉತ್ತರ

    ಈ ಹಿಂದೆ ಅವಿಶ್ವಾಸ ನಿರ್ಣಯದ ವೇಳೆ ಕಣ್ಣು ಮಿಟುಕಿಸಿದ್ದ ರಾಹುಲ್

ನವದೆಹಲಿ: ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಇಂದಿನಿಂದ 3 ದಿನಗಳ ಕಾಲ ನಡೆಯಲಿದ್ದು ಆಗಸ್ಟ್​ 10 ರಂದು ಪ್ರಧಾನಿ ಮೋದಿ ಇದಕ್ಕೆಲ್ಲ ಉತ್ತರ ನೀಡಲಿದ್ದಾರೆ.

ಇಂಡಿಯಾ ಕೂಟದ ನೇತೃತ್ವ ವಹಿಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸದನದಲ್ಲಿ ಚರ್ಚೆ ಆರಂಭಿಸುವ ಸಾಧ್ಯತೆ ಇದ್ದು ಪ್ರಧಾನಿ ಅನುಪಸ್ಥಿತಿಯಲ್ಲಿ ಸದನ ನಡೆಯಲಿದೆ. ಅಲ್ಲದೇ ಕೇಂದ್ರ ಸರ್ಕಾರದ ಮೇಲೆ ಮುಗಿ ಬೀಳುವ ವಿರೋಧ ಪಕ್ಷಗಳಿಗೆ ಉತ್ತರಿಸಲು ಬಿಜೆಪಿಯಿಂದ ನಿಶಿಕಾಂತ್ ದುಬೆ, ಸ್ಮೃತಿ ಇರಾನಿ, ನಿರ್ಮಲಾ ಸೀತಾರಾಮನ್, ಜ್ಯೋತಿರಾಧಿತ್ಯ ಸಿಂಧಿಯಾ ಸೇರಿ ಇತರ ಸದಸ್ಯರು ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.

ಮಣಿಪುರ, ಹರಿಯಾಣದ ಹಿಂಸಾಚಾರ ಬಗ್ಗೆ ಮೋದಿ ಉತ್ತರಿಸಲಿ..! 

ಮಣಿಪುರದಲ್ಲಿ ಹಲವು ದಿನಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಇದು ಜನಾಂಗೀಯ ದಾಳಿಯಾಗಿ ಮಾರ್ಪಟ್ಟಿದ್ದು, ಇತ್ತೀಚೆಗೆ ಅಲ್ಲಿ ಮಹಿಳೆಯರ ಮೇಲೆ ನಡೆದಂತ ಕ್ರೌರ್ಯವು ಇಡೀ ದೇಶವನ್ನೇ ತಲ್ಲಣ ಮೂಡಿಸಿತ್ತು. ಹೀಗಾಗಿ ಮಣಿಪುರದ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿಯವರು ಕಲಾಪದಲ್ಲಿ ಮಾತನಾಡಬೇಕು ಎಂದು ವಿರೋಧ ಪಕ್ಷಗಳು ಪಟ್ಟು ಹಿಡಿದು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದವು. ಅಲ್ಲದೇ ಮಣಿಪುರದ ಜೊತೆಗೆ ಹರಿಯಾಣದ ಹಿಂಸಾಚಾರ ಹಾಗೂ ಪ್ರಧಾನಿ ಮೋದಿ ಸರ್ಕಾರದ ಹುಸಿ ಭರವಸೆಗಳ ಬಗ್ಗೆ ವಿಪಕ್ಷಗಳು ವಾಗ್ದಾಳಿ ನಡೆಸಲಿವೆ ಎಂದು ಹೇಳಲಾಗಿದೆ.

ಮಣಿಪುರದಲ್ಲಿ ಪ್ರತಿಭಟನೆ

ಇನ್ನು ಎನ್​ಡಿಎಗೆ ಸಂಪೂರ್ಣ ಸ್ಪಷ್ಟ ಬಹುಮತವಿದೆ. ಹೀಗಾಗಿ ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೂಲಕ ಸರ್ಕಾರವನ್ನು ಪತನ‌ ಮಾಡಲು ಸಾಧ್ಯವಿಲ್ಲ. ಆದ್ರೂ ವಿರೋಧ ಪಕ್ಷಗಳು ಮಣಿಪುರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಮೋದಿಯಿಂದ ಮಾತನಾಡಿಸಬೇಕು ಎನ್ನುವುದೊಂದೇ ವಿರೋಧ ವಿಪಕ್ಷಗಳ ಮುಖ್ಯ ಗುರಿಯಾಗಿದೆ ಎನ್ನಲಾಗಿದೆ.

ಪ್ರಧಾನಿಯನ್ನ ತಬ್ಬಿ, ಕಣ್ಣು ಮಿಟುಕಿಸಿದ್ದ ರಾಹುಲ್

ಈ ಹಿಂದೆ ಅಂದರೆ, 2018 ರಲ್ಲೂ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಈ ವೇಳೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕಣ್ಣು ಮಿಟಿಕಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಕಲಾಪದಲ್ಲಿ ಸುದೀರ್ಘವಾಗಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಭಾಷಣ ಮುಗಿದ ಮೇಲೆ ಕಲಾಪದಲ್ಲೇ ಪ್ರಧಾನಿ ಮೋದಿಯವರನ್ನು ತಬ್ಬಿಕೊಂಡು ಬಳಿಕ ತಮ್ಮ ಸ್ಥಾನಕ್ಕೆ ಹೋಗಿ ಕುಳಿತುಕೊಳ್ಳುವಾಗ ಕಣ್ಣು ಮಿಟುಕಿಸಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್​ ಆಗಿತ್ತು. ರಾಹುಲ್​ ಗಾಂಧಿ ಕಣ್ಣು ಮಿಟುಕಿಸಿದ ಬಗ್ಗೆ ಸಂಸತ್​ನಲ್ಲೇ ಪ್ರಸ್ತಾಪಿಸಿ ಮೋದಿ ಕುಟುಕಿದ್ದರು. ನಂತರ ಕೇಂದ್ರ ಸರ್ಕಾರ ತನ್ನ ಬಹುಮತ ಸಾಬೀತು ಪಡಿಸಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ.. ಸದನದಲ್ಲಿ ರಾಹುಲ್​ ಗಾಂಧಿಯಿಂದ ಚರ್ಚೆ ಆರಂಭವಾಗುವ ಸಾಧ್ಯತೆ..!

https://newsfirstlive.com/wp-content/uploads/2023/08/RAHUL_GANDHI_MODI-1.jpg

Load More