newsfirstkannada.com

ಹೃದಯ ತುಂಬಿ ಬಂದ ಪ್ರಸಂಗ.. ‘ಬಿಟ್ಟು ಹೋಗಬೇಡಿ’ ಎಂದು ಯೋಧನ ಕಾಲು ಹಿಡಿದು ಬರೋಬ್ಬರಿ 12 ಗಂಟೆ ಕಣ್ಣೀರಿಟ್ಟ ಮಣಿಪುರ ಮಹಿಳೆಯರು..! 

Share :

04-08-2023

    ಸರ್ಕಾರ ಆದೇಶವೆಂದು ಯೋಧ ಕೇಳಿಕೊಂಡರು ಬಿಡಲಿಲ್ಲ

    ಕೊನೆಗೂ ಹೆಣ್ಮಕ್ಕಳ ಕಣ್ಣೀರನ ಧ್ವನಿ ಸರ್ಕಾರಕ್ಕೆ ಕೇಳಿಸಿತು

    ಸತತ 12 ಗಂಟೆಗಳ ರೋದನೆ ಬಳಿಕ ಹ್ಯಾಪಿ ಎಂಡಿಂಗ್

ಇಂಫಾಲ್​: ಅಸ್ಸಾಂ ರೈಫಲ್ಸ್​ ಯೋಧರನ್ನು ಚುರಾಚಂದ್‌ಪುರಕ್ಕೆ ಸ್ಥಳಾಂತರ ಮಾಡಿದ ಸುದ್ದಿ ತಿಳಿದು, ನಮ್ಮನ್ನು ಬಿಟ್ಟು ಹೋಗಬೇಡಿ’ ಎಂದು ಯೋಧನ ಕಾಲುಗಳನ್ನು ಹಿಡಿದು ಕುಕಿ ಸಮುದಾಯದ ಮಹಿಳೆಯರು ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಈ ವಿದ್ರಾವಕ ಘಟನೆಯು ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯ ಗಮಿಗಫೈ ಗ್ರಾಮದಲ್ಲಿ ನಡೆದಿದೆ.

ಕಳೆದ ಹಲವು ದಿನಗಳಿಂದ ಮಣಿಪುರದಲ್ಲಿ ಮೈಥೆಯಿ ಮತ್ತು ಕುಕಿ ಸಮುದಾಯದ ನಡುವೆ ಘರ್ಷಣೆ ನಡೆಯುತ್ತಿದೆ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ದೌರ್ಜನ್ಯ ನಡೆದ ಸ್ಥಳಗಳಲ್ಲಿ ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಅಸ್ಸಾಂ ರೈಫಲ್ಸ್​ ಯೋಧನನ್ನು ಬೇರೆ ಕಡೆ ಸರ್ಕಾರ ಸ್ಥಳಾಂತರ ಮಾಡಿದ್ದರಿಂದ ಗ್ರಾಮದ ಮಹಿಳೆಯರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಅಷ್ಟೇ ಅಲ್ಲ, ಬರೋಬ್ಬರಿ 12 ಗಂಟೆಗಳವರೆಗೆ ಧರಣಿ ಮಾಡಿದ್ದಾರೆ.

ಅಸ್ಸಾಂ ರೈಫಲ್ಸ್​ ಯೋಧನ ಕಾಲುಗಳನ್ನು ಹಿಡಿದ ಕುಕಿ ಸಮುದಾಯದ ಮಹಿಳೆಯರ ಗುಂಪಿನ ರೋದನೆ ಎಂತಹ ಮನವನ್ನೂ ಕದಡುವಂತಿದೆ. ತಮ್ಮ ಗ್ರಾಮದಿಂದ ಯೋಧ ಹೊರ ಹೋಗದಂತೆ ರಸ್ತೆಗೆ ಅಡ್ಡ ಹಾಕಿದರು. ದಯವಿಟ್ಟು ನಮ್ಮನ್ನು ಬಿಟ್ಟು ಹೋಗಬೇಡಿ. ಇಲ್ಲಿಯೇ ಇರಬೇಕೆಂದು ಧರಣಿ ವೇಳೆ ಘೋಷಣೆ ಕೂಗುತ್ತ ಯೋಧನ ಕಾಲನ್ನು ಬಿಡಲಿಲ್ಲ. ಈ ವೇಳೆ ಯೋಧನು ಸರ್ಕಾರದ ಆದೇಶವೆಂದು ಕೇಳಿಕೊಂಡರೂ ಮಹಿಳೆಯರು ಅಳು ನಿಲ್ಲಲಿಲ್ಲ.

ಇದರಿಂದ ತಮ್ಮ ಭದ್ರತಾ ಇಲಾಖೆಗೆ ಈ ಬಗ್ಗೆ ಫೋನ್​ನಲ್ಲಿ ಯೋಧ ವಿವರಿಸಿದ್ದಾರೆ. ಈ ಘಟನೆಯನ್ನು ಗಮನಕ್ಕೆ ತೆಗೆದುಕೊಂಡ ಭದ್ರತಾ ಇಲಾಖೆ ಯೋಧನ ಸ್ಥಳಾಂತರ ಮಾಡುವುದನ್ನು ಕ್ಯಾನ್ಸಲ್ ಮಾಡಿದೆ. ನಾನು ಎಲ್ಲಿಗೂ ಹೋಗಲ್ಲ. ಸರ್ಕಾರ ಚುರಾಚಂದ್‌ಪುರಕ್ಕೆ ಸ್ಥಳಾಂತರ ಮಾಡಿರುವುದನ್ನು ಕ್ಯಾನ್ಸಲ್ ಮಾಡಿದೆ ಎಂದು ಮಹಿಳೆಯರಿಗೆ ಹೇಳಿದ್ದಾರೆ. ಇದರಿಂದ ನಿಟ್ಟುಸಿರು ಬಿಟ್ಟ ಮಹಿಳೆಯರು ಮಧ್ಯರಾತ್ರಿ 2 ಗಂಟೆಗೆ ಆರಂಭವಾಗಿದ್ದ ಧರಣಿಯನ್ನು ಮಧ್ಯಾಹ್ನ 2:30ಕ್ಕೆ ಕೈಬಿಟ್ಟರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೃದಯ ತುಂಬಿ ಬಂದ ಪ್ರಸಂಗ.. ‘ಬಿಟ್ಟು ಹೋಗಬೇಡಿ’ ಎಂದು ಯೋಧನ ಕಾಲು ಹಿಡಿದು ಬರೋಬ್ಬರಿ 12 ಗಂಟೆ ಕಣ್ಣೀರಿಟ್ಟ ಮಣಿಪುರ ಮಹಿಳೆಯರು..! 

https://newsfirstlive.com/wp-content/uploads/2023/08/MANIPUR-1.jpg

Load More