ಎರಡು ದಿನಗಳ ಮಣಿಪುರ ಪ್ರವಾಸದಲ್ಲಿರುವ ರಾಹುಲ್
ಸಂತ್ರಸ್ತರ ಕ್ಯಾಂಪ್ಗೆ ಭೇಟಿ ನೀಡಲು ಬಂದಿರುವ ಕೈನಾಯಕ
300 ರಿಲೀಫ್ ಕ್ಯಾಂಪ್ಗಳಲ್ಲಿ 50,000 ಜನರ ರಕ್ಷಣೆ
ಎರಡು ದಿನಗಳ ಮಣಿಪುರ ಭೇಟಿಯಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಬಿಗ್ ಶಾಕ್ ಆಗಿದೆ. ಮಣಿಪುರದ ಚುರಚಂಡಪುರ ತಲುಪುತ್ತಿದ್ದಂತೆಯೇ ರಾಹುಲ್ ಗಾಂಧಿ ಮತ್ತು ಬೆಂಗಾವಲು ಪಡೆಯನ್ನು ಪೊಲೀಸರು ತಡೆದಿದ್ದಾರೆ.
ಬಿಷ್ಣುಪುರದ ವಿಮಾನ ನಿಲ್ದಾಣದ ಬಳಿ ರಾಹುಲ್ ಗಾಂಧಿಯನ್ನು ತಡೆದಿದ್ದು, ಇದು ಮಣಿಪುರ ರಾಜಧಾನಿ 20 ಕಿಲೋ ಮೀಟರ್ ದೂರದಲ್ಲಿದೆ. ಮಣಿಪುರದಲ್ಲಿ ಕೆಲವು ತಿಂಗಳಿನಿಂದ ಭಾರೀ ಹಿಂಸಾಚಾರ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ಗಾಯಗೊಂಡಿರುವ ಸಂತ್ರಸ್ತರ ಭೇಟಿಗೆ ರಾಹುಲ್ ಗಾಂಧಿ ಬಂದಿದ್ದಾರೆ.
ಭದ್ರತಾ ದೃಷ್ಟಿಯಿಂದ ರಾಹುಲ್ ಗಾಂಧಿಯ ಬೆಂಗಾವಲು ಪಡೆಯನ್ನು ತಡೆಯಲಾಗಿದೆ. ರಾಹುಲ್ ಮೇಲೆ ದಾಳಿ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಉದ್ದೇಶ ಇರಲಿಲ್ಲ. ರಾಹುಲ್ ಗಾಂಧಿಗೆ ಮುಂದೆ ಹೋಗಲು ನಾವು ಬಿಟ್ಟಿಲ್ಲ ಎಂದು ಬಿಷ್ಣುಪುರದ ಎಸ್ಪಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಜೂನ್ 29 ರಿಂದ 30ರವರೆಗೆ ಮಣಿಪುರದಲ್ಲಿ ಇರಲಿದ್ದಾರೆ. ಮೀಸಲಾತಿ ಹೋರಾಟದಲ್ಲಿ ಉಂಟಾಗಿದ್ದ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಿ ಧೈರ್ಯ ನೀಡಲು ರಾಹುಲ್ ಗಾಂಧಿ ಹೋಗಿದ್ದಾರೆ. ಮೇ 3 ರಂದು ನಡೆದ ಹಿಂಸಾಚಾರದಲ್ಲಿ ಇದುವರೆಗೆ 100 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. 50 ಸಾವಿರಕ್ಕೂ ಹೆಚ್ಚು ಜನರು ಪ್ರಾಣಭಯದಲ್ಲಿದ್ದಾರೆ. ಇವರೆಲ್ಲರ ರಕ್ಷಿಸಿಕೊಳ್ಳುವ ಉದ್ದೇಶದಿಂದ ಕ್ಯಾಂಪ್ಗಳಲ್ಲಿ ಇರಿಸಲಾಗಿದೆ. 300 ರಿಲೀಫ್ ಕ್ಯಾಂಪ್ಗಳನ್ನು ತೆರೆದು ಭದ್ರತೆ ನೀಡಲಾಗಿದೆ. ಈ ಕ್ಯಾಂಪ್ಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಲಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ