newsfirstkannada.com

‘ಕಾರ್ಗಿಲ್ ಯುದ್ಧದಲ್ಲಿ ದೇಶ ರಕ್ಷಿಸಿದೆ.. ಆದರೆ ಹೆಂಡತಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ’ -ಪತ್ನಿಯ ವಿವಸ್ತ್ರಗೊಳಿಸಿದ ಕೃತ್ಯ ನೆನೆದು ನಿವೃತ್ತ ಯೋಧ ಕಣ್ಣೀರು

Share :

22-07-2023

    ದೇಶಕ್ಕಾಗಿ ಹೋರಾಡಿದ ಮಣಿಪುರದ ಯೋಧನ ಪತ್ನಿಗೆ ಅವಮಾನ

    ‘ದೇಶ ರಕ್ಷಣೆ ಮಾಡಿದ ನನಗೆ ಪತ್ನಿಯನ್ನ ಕಾಪಾಡಿಕೊಳ್ಳಲಾಗಲಿಲ್ಲ’

    ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಕಠೋರ ಘಟನೆ ಬಿಚ್ಚಿಟ್ಟಿದ್ದಾರೆ​

ಎರಡು ಸಮುದಾಯಗಳ ನಡುವಿನ ಗಲಾಟೆ ಮಣಿಪುರದ ಎಲ್ಲೆಡೆ ವ್ಯಾಪಿಸಿ ಹಲವು ಹಿಂಸಾಚಾರಕ್ಕೆ ಕಾರಣವಾಗಿದೆ. ಗುಂಪು ಗುಂಪಾಗಿ ಜನ ಸೇರಿ ಘೋಷಣೆ ಕೂಗುವುದು, ಕಂಡ ಕಂಡ ಮನೆಗಳಿಗೆ, ಎಲ್ಲೆಂದರಲ್ಲಿ ಬೆಂಕಿ ಹಚ್ಚಿ, ಸಿಕ್ಕ, ಸಿಕ್ಕವರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಈ ಎಲ್ಲ ಘಟನೆಗಳು 70ಕ್ಕೂ ಹೆಚ್ಚು ದಿನಗಳಿಂದ ಮಣಿಪುರದಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಇದರ ಮಧ್ಯಯೇ ಮೇ ತಿಂಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದೊಂದು ಇಡೀ ಮಾನವ ಕುಲವೇ ತಲೆ ತಗ್ಗಿಸುವಂತಹ ಕೃತ್ಯವಾಗಿದೆ.

ಇದನ್ನೂ ಓದಿ: ಇಬ್ಬರು ಮಹಿಳೆಯರ ವಿವಸ್ತ್ರಗೊಳಿಸಿ ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದ ಮುಖ್ಯ ಆರೋಪಿಯ ಮನೆಗೆ ಬೆಂಕಿಯಿಟ್ಟು ಧ್ವಂಸ..

ಸದ್ಯ ಇಲ್ಲಿ ಬೆತ್ತಲೆಗೊಳಿಸಲಾದ ಇಬ್ಬರು ಮಹಿಳೆಯರ ಪೈಕಿ ಒಬ್ಬ ಮಹಿಳೆ ವೀರ ಯೋಧನ ಹೆಂಡತಿಯಾಗಿದ್ದಾರೆ. ಅಂದರೆ ಆ ವೀರ ಯೋಧ 1999ರಲ್ಲಿ ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿದ ಧೀರ. ಇವರು ಅಸ್ಸಾಂನ ರೆಜಿಮೆಂಟ್​ನಲ್ಲಿ ಸುಬೇದಾರ್​ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಇವರು ಮಾಧ್ಯಮವೊಂದಕ್ಕೆ ಸಂದರ್ಶನ ಕೊಟ್ಟಿದ್ದು, ಈ ಬಗ್ಗೆ ತಮ್ಮ ವೇದನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಕರುಳು ಹಿಂಡುವಂತಿದೆ.

‘ನನ್ನೂರು, ನನ್ನ ಮನೆ, ನನ್ನ ಪತ್ನಿಯನ್ನು ಕಾಪಾಡಿಕೊಳ್ಳಲಾಗಲಿಲ್ಲ’

ನಾನು ಕಾರ್ಗಿಲ್​ ಯುದ್ಧದಲ್ಲಿ ಹೋರಾಡಿ ನನ್ನ ರಾಷ್ಟ್ರದ ರಕ್ಷಣೆ ಮಾಡಿದೆ. ಆದರೆ ನನ್ನ ಪತ್ನಿಯನ್ನು ಅವಮಾನದಿಂದ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಶ್ರೀಲಂಕಾದಲ್ಲಿ ಶಾಂತಿಪಾಲನ ಪಡೆಯಲ್ಲಿ ಕಾರ್ಯನಿರ್ವಹಿಸಿದೆ. ನಾನು ಸೇನೆಯಿಂದ ನಿವೃತ್ತಿ ಪಡೆದ ಬಳಿಕ ಮನೆಗೆ ಬಂದೆ. ಆದರೆ ನನ್ನ ಮನೆ ಇರುವ ಪ್ರದೇಶವು ಅತ್ಯಂತ ಘೋರ ಯುದ್ಧಭೂಮಿಯಂತೆ ಕಂಡಿತು. ನನ್ನ ಊರು, ನನ್ನ ಮನೆ, ನನ್ನ ಪತ್ನಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ. ಇದು ನನಗೆ ತೀವ್ರ ನೋವನ್ನುಂಟು ಮಾಡಿದೆ.

ಮೇ 4 ರಂದು ದುಷ್ಕರ್ಮಿಗಳ ಗುಂಪುಗಳು ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ನಮ್ಮ ಊರಿಗೆ ನುಗ್ಗಿ ಬಿಟ್ಟರು. ಇಡೀ ಊರನ್ನು ಆವರಿಸಿಕೊಂಡರು. ಎಲ್ಲಿಯೂ ಓಡಿ ಹೋಗಲು ಆಗಲಿಲ್ಲ. ಪ್ರಾಣಿಗಳಂತೆ ನಮ್ಮ ಜನರ ಮೇಲೆ ಹಲ್ಲೆ ಮಾಡಲು ಮುಂದಾದರು. ಮನೆಗಳಿಗೆಲ್ಲ ಬೆಂಕಿ ಹಚ್ಚಿ, ಮಹಿಳೆಯರು, ಮಕ್ಕಳ ಮೇಲೆ ದಾಳಿ ಮಾಡಿದರು. ಇದೇ ವೇಳೆಯೇ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಊರಿನ ತುಂಬಾ ಆ ಬೆತ್ತಲೆ ಮಹಿಳೆಯರನ್ನು ಮೆರವಣಿಗೆ ಮಾಡಿದರು. ಅವರು ನನ್ನ ಹೆಂಡತಿ ಮತ್ತು ಇತರರನ್ನು ಕರೆದೊಯ್ಯುವುದನ್ನು ನಾನು ನೋಡಿದೆ.

ವಿವಸ್ತ್ರಗೊಳಿಸುವಾಗ ಪೊಲೀಸರು ಅದೇ ಸ್ಥಳದಲ್ಲಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಮನೆಗಳಿಗೆ ಬೆಂಕಿ ಹಚ್ಚಿದ, ಮಹಿಳೆಯರನ್ನು ಅವಮಾನ ಮಾಡಿ, ಮೆರವಣಿಗೆ ಮಾಡಿದ ಹಾಗೂ ಹಲ್ಲೆ ಮಾಡಿದಂತಹ  ದುಷ್ಟರಿಗೆ  ಕಠಿಣ ಶಿಕ್ಷೆಯಾಗಬೇಕು.

ಕಾರ್ಗಿಲ್​ ಯುದ್ಧದ ಯೋಧ

ಇದನ್ನೂ ಓದಿ:  ಮಣಿಪುರದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯದ ವಿಡಿಯೋ; ವ್ಯಕ್ತಿಯ ತಲೆ ಕತ್ತರಿಸಿ ಕೋಲಿಗೆ ನೇತು ಹಾಕಿ ವಿಕೃತಿಉ

ಈ ಘಟನೆ ನಡೆದ ಒಂದು ತಿಂಗಳು ಬಳಿಕ ಅದರೆ ಜೂನ್ 21 ರಂದು ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮೂವರು ಮಹಿಳೆಯರನ್ನು ವಿವಸ್ತ್ರಗೊಳಿಸಲಾಗಿದ್ದು, ಇದರಲ್ಲಿ ಓರ್ವ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಈ ವೇಳೆ ಇದನ್ನು ತಡೆಯಲು ಯತ್ನಿಸಿದ ಅವಳ ಸಹೋದರನನ್ನೂ ಹತ್ಯೆ ಮಾಡಲಾಗಿದೆ ಎಂದು ಎಫ್​ಐಆರ್​ನಲ್ಲಿ ದಾಖಲು ಮಾಡಲಾಗಿದೆ. ಮಣಿಪುರದ ಹಿಂಸಾಚಾರದಲ್ಲಿ ಸರ್ಕಾರದ ದಾಖಲೆ ಪ್ರಕಾರ ಇಲ್ಲಿವರೆಗೆ 161ಕ್ಕೂ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾರ್ಗಿಲ್ ಯುದ್ಧದಲ್ಲಿ ದೇಶ ರಕ್ಷಿಸಿದೆ.. ಆದರೆ ಹೆಂಡತಿಯನ್ನು ಕಾಪಾಡಿಕೊಳ್ಳಲು ಆಗಲಿಲ್ಲ’ -ಪತ್ನಿಯ ವಿವಸ್ತ್ರಗೊಳಿಸಿದ ಕೃತ್ಯ ನೆನೆದು ನಿವೃತ್ತ ಯೋಧ ಕಣ್ಣೀರು

https://newsfirstlive.com/wp-content/uploads/2023/07/MANIPUR-1-2.jpg

Load More