newsfirstkannada.com

ಭಾಗ್ಯಲಕ್ಷ್ಮೀ ಫ್ಯಾನ್ಸ್​​ಗೆ ಹೊಸ ಟೆನ್ಷನ್.. ಗಂಡ, ಹೆಂಡ್ತಿ ಮಧ್ಯೆ ಮತ್ತೆರೆಡು ಕಿರಿಕ್ ಪಾತ್ರಗಳ ಎಂಟ್ರಿ

Share :

17-08-2023

    ಅತ್ತೆ-ಸೊಸೆ ಕಾಂಬಿನೇಷನ್​ಗೆ ಅಭಿಮಾನಿಗಳಿಂದ ಫುಲ್​​​​ ಮಾರ್ಕ್ಸ್

    ಭಾಗ್ಯಳ ಶಾಲಾ ಅಡ್ಮಿಷನ್​ ಕ್ಯಾನ್ಸಲ್ ಮಾಡಿದ್ದು ಯಾರು ಗೊತ್ತಾ?

    ಅಂತರಪಟ ಸೀರಿಯಲ್​ನಿಂದ ಭಾಗ್ಯಲಕ್ಷ್ಮೀಗೆ ವಾಪಸ್ ಬಂದ ಮಹೇಶ

ಅತ್ತೆ-ಸೊಸೆಯರ ಸೀರಿಯಲ್​ ಕತೆಗಳಲ್ಲಿ ಪ್ರತಿ ಭಾರೀ ಜಗಳ, ಮುನಿಸು ಸರ್ವೇ ಸಾಮಾನ್ಯ. ಆದರೆ ಮೊಟ್ಟ ಮೊದಲ ಬಾರಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಅತ್ತೆ ಸೊಸೆಯ ಕಾಂಬಿನೇಷನ್​ನ ಮೈನ್ ಆಗಿ ಫೋಕಸ್ ಮಾಡಲಾಗಿದೆ. ಈ ಸೀರಿಯಲ್​ನಲ್ಲಿ ಅತ್ತೆ ಸೊಸೆನ ತುಂಬಾ ಪಾಸಿಟಿವ್ ಆಗಿ ತೋರಿಸಿದ್ದಾರೆ. ಇದೇ ಕಾರಣದಿಂದಾಗಿ ಈ ಸೀರಿಯಲ್​ಗೆ ಒಂದು ತೂಕ ಬಂದಿದೆ. ಗೃಹಿಣಿ ಬದುಕನ್ನ ವಿಭಿನ್ನ ರೀತಿಯಲ್ಲಿ ಪ್ರೆಸೆಂಟ್​ ಮಾಡುತ್ತಿರುವ ಭಾಗ್ಯಲಕ್ಷ್ಮೀಗೆ ವೀಕ್ಷಕರೂ ಭೇಶ್ ಎನ್ನುತ್ತಿದ್ದಾರೆ. ಅದರಲ್ಲೂ ಅತ್ತೆ-ಸೊಸೆ ಕಾಂಬಿನೇಷನ್​ ಸೂಪರ್​ ಡೂಪರ್​ ಹಿಟ್​ ಆಗಿದೆ. ಸೊಸೆಯನ್ನು ಓದಿಸುವ ಕುಸುಮಾ ನಿರ್ಧಾರಕ್ಕೆ ಪ್ರಶಂಸೆ ಕೇಳಿ ಬರುತ್ತಿದೆ.

ಮತ್ತೆ, ಕರುನಾಡ ವೀಕ್ಷಕರು ಕೂಡ ಇಷ್ಟ ಪಟ್ಟು ನೋಡುತ್ತಿದ್ದಾರೆ. ಅತ್ತೆ ಕುಸುಮಾ ತನ್ನ ಸೊಸೆ ಭಾಗ್ಯ ಓದಿಗೆ ಬೆನ್ನುಲುಬಾಗಿ ನಿಂತಿದ್ದಾರೆ. ತನ್ನ ಮಗಳು ತನ್ವಿ ಜೊತೆನೇ 10ನೇ ತರಗತಿ ಓದೋಕೆ ಹೊರಟಿದ್ದಾಳೆ ಭಾಗ್ಯ. ಇದೇ ಕಾರಣಕ್ಕೆ ಭಾಗ್ಯ ತನ್ನ ಮಗಳ ಶಾಲೆಗೆ ಅಡ್ಮಿಷನ್ ಮಾಡಿದ್ದಾಳೆ. ಆದರೆ ಟ್ವಿಸ್ಟ್ ಅನ್ನೋ ರೀತಿಯಲ್ಲಿ ಆ ಶಾಲೆಯಲ್ಲಿ ಭಾಗ್ಯಗೆ ಅಡ್ಮಿಷನ್ ದಿಢೀರ್ ಎನ್ನುವಂತೆ ಕ್ಯಾನ್ಸಲ್ ಆಗಿದೆ. ಅಷ್ಟಕ್ಕೂ ಅಡ್ಮಿಷನ್ ಕ್ಯಾನ್ಸಲ್ ಮಾಡಿದ್ದು ಯಾರು ಎಂಬುದಕ್ಕೆ ತೆರೆ ಬಿದ್ದಿದೆ.

ಈ ಶಾಲೆಯಲ್ಲಿ ದೊಡ್ಡವರಿಗೆ ಓದೋಕೆ ಅವಕಾಶವಿಲ್ಲ ಅಂತಾ ಶಾಲೆಯ ಪ್ರಿನ್ಸಿಪಾಲ್ ಮಗಳು ಮ್ಯಾನೇಜಿಂಗ್ ಡೈರೆಕ್ಟರ್ ಕನ್ನಿಕಾ ಕಾಮತ್ ಅಡ್ಮಿಷನ್​ನ ಕ್ಯಾನ್ಸಲ್ ಮಾಡಿದ್ದಾಳೆ. ಕನ್ನಿಕಾ ಪಾತ್ರವನ್ನ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನಟಿ ಅಮೃತಾ ನಿಭಾಯಿಸುತ್ತಿದ್ದಾರೆ. ಅಮೃತಾ ಗಿಚ್ಚಿ ಗಿಲಿಗಿಲಿ ಸೀಸನ್ 02ರ ಸ್ಪರ್ಧಿ. ಕಾಮಿಡಿ ಲೋಕದಲ್ಲಿ ಇದ್ದ ಅಮೃತಾ ಈಗ ಕಿರುತೆರೆ ಧಾರಾವಾಹಿಗಳತ್ತ ತಮ್ಮ ಪಯಣ ಬೆಳಸಿದ್ದಾರೆ. ಈ ಸೀರಿಯಲ್​ನಲ್ಲಿ ಅಮೃತಾ ಕಾಮಿಡಿ ರೋಲ್​ನಿಂದ ಆಚೆ ಬಂದು ವಿಲನ್​​​ ಶೇಡ್​ನಲ್ಲಿ ಅಭಿನಯಿಸುತ್ತಿದ್ದಾರೆ. ಒಂದು ಗೆಸ್ಟ್ ಅಪಿಯರೆನ್ಸ್ ರೋಲ್​ನಲ್ಲಿ ಇವರ ಪಾತ್ರ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮೂಡಿ ಬಂದಿದೆ.

ಇತ್ತ ದುರಹಾಂಕರಿ ತಾಂಡವ್ ಶ್ರೇಷ್ಠಾಳನ್ನ ಮದುವೆ ಮಾಡಿಕೊಳ್ಳೋ ನಿರ್ಧಾರಕ್ಕೆ ಬಂದಿದ್ದಾನೆ. ಆ ಕಾರಣ ಶ್ರೇಷ್ಠಾ ತಾಂಡವ್​ಗೆ ಹೇಳದಂತೆ ತನ್ನ ತಂದೆ ತಾಯಿಯನ್ನ ಮೀಟ್ ಮಾಡಿಸಿದ್ದಾಳೆ. ಈಗ ಶ್ರೇಷ್ಠಾ ತಂದೆ ತಾಯಿಗೆ ತಾಂಡವ್ ತಂದೆ ತಾಯಿಯನ್ನ ಭೇಟಿ ಮಾಡಿಸಬೇಕು ಅನ್ನೋ ಕಾರಣಕ್ಕೆ ತಾಂಡವ್ ಶ್ರೇಷ್ಠಾ ಇಬ್ಬರು ಸೇರಿ ಡುಬ್ಲಿಕೇಟ್ ತಂದೆಯನ್ನ ರೆಡಿ ಮಾಡಿದ್ದಾರೆ. ಡುಬ್ಲಿಕೇಟ್ ತಂದೆಯಾಗಿ ಬಿಗ್​ಬಾಸ್​​ ಸೀಸನ್​​​ 8ರ ವಿನ್ನರ್​​, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಮಹೇಶ ಅವರು ಎಂಟ್ರಿ ಕೊಟ್ಟಿದ್ದಾರೆ.

ಅಂತರಪಟ ಧಾರಾವಾಹಿಯಲ್ಲಿ ಆರಾಧಾನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿರೋ ನಟ ಮಹೇಶ ಅವರು ಇದೀಗ ಭಾಗ್ಯಲಕ್ಷ್ಮೀಯಲ್ಲಿ ಗೆಸ್ಟ್ ಅಪಿಯರೆನ್ಸ್ ಪಾತ್ರವನ್ನ ನಿಭಾಯಿಸಲಿದ್ದಾರೆ. ಇಲ್ಲಿಯೂ ತನ್ನ ಅಹಂಕಾರವನ್ನ ಮೆರೆಯಲಿದ್ದಾನೆ ಮಹೇಶ. ಒಟ್ಟಿನಲ್ಲಿ ಗೆಸ್ಟ್​​ ಅಪಿಯರೆನ್ಸ್ ರೋಲ್​ನಲ್ಲಿ ಅಮೃತಾ ಹಾಗೂ ಮಹೇಶ ಇಬ್ಬರು ಕೂಡ ಭಾಗ್ಯಲಕ್ಷ್ಮೀಯಲ್ಲಿ ಖಡಕ್ ಪಾತ್ರಗಳನ್ನ ನಿಭಾಯಿಸಲು ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾಗ್ಯಲಕ್ಷ್ಮೀ ಫ್ಯಾನ್ಸ್​​ಗೆ ಹೊಸ ಟೆನ್ಷನ್.. ಗಂಡ, ಹೆಂಡ್ತಿ ಮಧ್ಯೆ ಮತ್ತೆರೆಡು ಕಿರಿಕ್ ಪಾತ್ರಗಳ ಎಂಟ್ರಿ

https://newsfirstlive.com/wp-content/uploads/2023/08/bhagyalaxmi-1.jpg

Load More