Advertisment

ಮಗಳ ಅಡ್ಮಿಷನ್​​ಗೆ ಹೋಗಿದ್ದ ತಂದೆಗೆ ಕಾದಿತ್ತು ಆಘಾತ; 1ನೇ ತರಗತಿ ಪ್ರವೇಶಕ್ಕೆ ಲಕ್ಷ ಲಕ್ಷ ಫೀಸ್..!

author-image
Gopal Kulkarni
Updated On
ಮಗಳ ಅಡ್ಮಿಷನ್​​ಗೆ ಹೋಗಿದ್ದ ತಂದೆಗೆ ಕಾದಿತ್ತು ಆಘಾತ; 1ನೇ ತರಗತಿ ಪ್ರವೇಶಕ್ಕೆ ಲಕ್ಷ ಲಕ್ಷ ಫೀಸ್..!
Advertisment
  • ಮಗಳನ್ನು ಶಾಲೆಗೆ ಸೇರಿಸಬೇಕೆಂದು ಹೋದ ತಂದೆಗೆ ಶಾಕ್​ ಕೊಟ್ಟ ಫೀಸ್
  • 1ನೇ ತರಗತಿಗೆ ಮಕ್ಕಳನ್ನು ಸೇರಿಸಲು ಈಗ ಎಷ್ಟು ಲಕ್ಷ ಫೀಸ್ ಕಟ್ಟಬೇಕು ಗೊತ್ತಾ?
  • ಫೀಸ್ ಸ್ಟ್ರಕ್ಚರ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ ವ್ಯಕ್ತಿ

ದೇಶದ ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದನ್ನು ಧನದಾಹ ಎನ್ನಬೇಕೋ? ಲಂಗು ಲಗಾಮಿಲ್ಲದ ಕುದುರೆಗಳು ಅನ್ನಬೇಕೊ ಗೊತ್ತಾಗುತ್ತಿಲ್ಲ. ಖಾಸಗಿ ಶಾಲೆಗಳಲ್ಲಿ ಮಧ್ಯಮ ವರ್ಗದ ಕುಟುಂಬದ ಮಕ್ಕಳ ಕಲಿಕೆ ಗಗನಕುಸುಮ ಅನ್ನುವಷ್ಟು ಅಲ್ಲಿ ಫೀಸ್​ ಪೀಕಲಾಗುತ್ತಿದೆ. ಇದೇ ವಿಷಯವನ್ನು ರಿಷಬ್ ಜೈನ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Advertisment

ಒಂದು ಶಾಲೆಗೆ ನಾವು ಮಕ್ಕಳನ್ನು ಸೇರಿಸಲು ಹೋದರೆ ಅವರಲ್ಲಿ ಫೀಸ್ ಸ್ಟ್ರಕ್ಚರ್​ನಲ್ಲಿ ದೊಡ್ಡ ಲಿಸ್ಟ್ ಇರುತ್ತದೆ. ಟ್ರಾನ್ಸ್​ಫೋರ್ಟ್​ ಫೀಸ್​ನಿಂದ ಹಿಡಿದು ಪುಸ್ತಕಗಳವರೆಗೆ ದೊಡ್ಡ ಪಟ್ಟಿಯನ್ನೇ ಕೊಟ್ಟು ಲಕ್ಷಕ್ಕೆ ಕಡಿಮೆಯಿಲ್ಲದ ಹಣವನ್ನು ಪೋಷಕರಿಂದ ಕೀಳುತ್ತಾರೆ. ಈಗಾಗಲೇ ಹೇಳಿದಂತೆ ರಿಷಬ್ ಜೈನ್ ಎಂಬುವವರು ತಮ್ಮ ಮಗಳಿಗೆ 1ನೇ ತರಗತಿ ಸೇರಿಸಲು ಅಂತ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಅವರು ನೀಡಿದ ಪ್ರವೇಶ ಶುಲ್ಕದ ಪಟ್ಟಿಯನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಒಂದು ವರ್ಷಕ್ಕೆ 4.27 ಲಕ್ಷ ರೂಪಾಯಿ ಫೀಸ್ ಇರುವುದನ್ನು ಕಂಡು ಒಂದು ಕ್ಷಣ ಅಚ್ಚರಿಗೆ ಒಳಗಾಗಿದ್ದಾರೆ.


">November 17, 2024


ಇದನ್ನೂ ಓದಿ:ಇಲ್ಲಿ ಉಸಿರಾಡುವ ಗಾಳಿಯೂ ವಿಷ; ಶಾಲೆಗಳಿಗಂತೂ ಬೀಗ; ಈ ಸೇವೆಗಳು ಕೂಡ ಬಂದ್​

Advertisment

ಉತ್ತಮ ಶಿಕ್ಷಣ ಎಂದರೆ ಅದು ಐಶಾರಾಮಿ ಶಿಕ್ಷಣವೇ ಎಂದು ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ. ಒಂದು ವೇಳೆ ವರ್ಷಕ್ಕೆ ನಾವು 20 ಲಕ್ಷ ರೂಪಾಯಿ ದುಡಿದರು ಕೂಡ ಈ ಒಂದು ಫೀಸ್​ ಭರಿಸಲು ನಮ್ಮಿಂದ ಸಾಧ್ಯವೇ.ಇದು ಭಾರತದಲ್ಲಿ ಗುಣಮಟ್ಟ ಶಿಕ್ಷಣದ ದರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಫೀಸ್ ಸ್ಟ್ರಕ್ಚರ್​ನಲ್ಲಿ ನೊಂದಣಿ ಶುಲ್ಕ 2 ಸಾವಿರ ರೂಪಾಯಿ, ಪ್ರವೇಶ ಶುಲ್ಕ 40 ಸಾವಿರ ರೂಪಾಯಿ, ವಾರ್ಷಿಕ ಶಾಲಾ ಶುಲ್ಕ 2 ಲಕ್ಷ 52 ಸಾವಿರ ರೂಪಾಯಿ ರಿಫಂಡೆಬಲ್ ಮನಿ 5 ಸಾವಿರ ರೂಪಾಯಿ, ಬಸ್ ಚಾರ್ಜ್​ 1 ಲಕ್ಷ 8 ಸಾವಿರ ರೂಪಾಯಿ ಬುಕ್ ಹಾಗೂ ಸಮವಸ್ತ್ರದ ಶುಲ್ಕ 20 ಸಾವಿರ ರೂಪಾಯಿ. ಇವೆಲ್ಲವೂ ಸೇರಿ ವರ್ಷಕ್ಕೆ ಸುಮಾರು 4 ಲಕ್ಷ 27 ಸಾವಿರ ರೂಪಾಯಿ ಎಂದಿದೆ.

ಇದನ್ನೂ ಓದಿ:ಶೈಕ್ಷಣಿಕ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆ; ಸಹಕಾರದಲ್ಲಿ ಹೊಸ ಎತ್ತರಕ್ಕೇರಿದ ಭಾರತ, ಅಮೇರಿಕ!

Advertisment

ಜೈನ್ ಅವರು ಮಾಡಿರುವ ಈ ಒಂದು ಪೋಸ್ಟ್ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಖಾಸಗಿ ಶಾಲೆಗಳ ಧನದಾಹಕ್ಕೆ ಜನರು ಛೀಮಾರಿ ಹಾಕುತ್ತಿದ್ದಾರೆ. ಇದಷ್ಟೇ ಅಲ್ಲ ಜೈನ್ ಇನ್ನು ಮುಂದುವರೆದು, ನಾವು ವರ್ಷಕ್ಕೆ 20 ಲಕ್ಷ ರೂಪಾಯಿ ದುಡಿದರೆ ಅದರಲ್ಲಿ ಶೇಕಡಾ 50 ರಷ್ಟು ಆದಾಯ ತೆರಿಗೆ ಕಟ್ಟಬೇಕು. ಜಿಎಸ್​ಟಿ, ವ್ಯಾಟ್, ರೋಡ್ ಟ್ಯಾಕ್ಸ್, ಟೋಲ್ ಟ್ಯಾಕ್ಸ್, ಪ್ರೋಫೆಷನಲ್ ಟ್ಯಾಕ್ಸ್​, ಇನ್ಶೂರೆನ್ಸ್ ಹೀಗೆ ನೂರೆಂಟು ತೆರಿಗೆ ಕಟ್ಟಿ ಮಧ್ಯಮ ವರ್ಗದ ಜನರ ಕೈಯಲ್ಲಿ ಕೊನೆಗೆ ಉಳಿಯುವುದೆಷ್ಟು. 10 ಲಕ್ಷ ಆ ಹತ್ತು ಲಕ್ಷದಲ್ಲಿ ಊಟ, ಬಟ್ಟೆ, ಬಾಡಿಗೆ ಇಎಂಐ ಒಂದಿಷ್ಟು ಉಳಿತಾದೊಂದಿಗೆ ಇಬ್ಬರು ಮಕ್ಕಳ ಶಿಕ್ಷಣಕ್ಕೆ ಇಷ್ಟೊಂದು ಫೀಸ್ ಕಟ್ಟಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ.

ಇದು ಕೇವ ರಿಶಬ್ ಜೈನ್ ಅವರ ಪ್ರಶ್ನೆ ಮಾತ್ರವಲ್ಲ, ಇಡೀ ದೇಶದ ಮಧ್ಯಮ ವರ್ಗದ ಕುಟುಂಬಗಳ ಕಥನ. ಖಾಸಗಿ ಶಾಲೆಗಳಿಗೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಈ ದೇಶದಲ್ಲಿ ಯಾವುದೇ ಲಂಗು ಲಗಾಮುಗಳಿಲ್ಲ. ಅವರು ಹೇಳಿದ್ದೇ ಫೀಸು, ಪೀಕಿದ್ದೇ ಹಣ. ಇನ್ನು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸೋಣ ಅಂದ್ರೆ ಅಲ್ಲಿನ ಕಲಿಕೆ ದೇವರಿಗೆ ಪ್ರೀತಿ. ಕಟ್ಟಡದಿಂದ ಹಿಡಿದು ಕಲಿಕಾ ಗುಣಮಟ್ಟದವರೆಗೂ ಎಲ್ಲವೂ ಕಳಪೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment