ಮೊದಲ ಹಂತದಲ್ಲಿ ಅಷ್ಟ ಸಚಿವರಷ್ಟೇ ಇಷ್ಟ ಆಗಿದ್ಯಾಕೆ?
ಸಿಗದ ಸಚಿವ ಸ್ಥಾನಕ್ಕೆ ಸಿದ್ದು, ಡಿಕೆ ಮೇಲೆ ಅಸಮಾಧಾನ
ಮಂತ್ರಿಯಾಗೋ ಆಸೆಯಲ್ಲಿದ್ದ 'ಕೈ' ನಾಯಕರಿಗೆ ಶಾಕ್!
ದಕ್ಷಿಣದ ಹೆಬ್ಬಾಗಿಲಲ್ಲಿ ತಾವರೆ ಮುದುಡಿ, ತೆನೆ ಉದುರಿ, ರಾಜ್ಯದಲ್ಲಿ ಕಾಂಗ್ರೆಸ್ಗೆ ಭಾಗ್ಯದ ಬಾಗಿಲು ತೆರೆದಿದಿದೆ.. ಮೊದಲ ಬಾರಿಗೆ ಗ್ಯಾರಂಟಿ ಬಲದ ಮೇಲೆ ರಾಜಸಿಂಹಾಸನವನ್ನ ಕಾಂಗ್ರೆಸ್ ದಕ್ಕಿಸಿಕೊಂಡಿದೆ.. ದೈತ್ಯ ಬಿಜೆಪಿ ಸೆದೆಬಡೆಯಲು ಮತ್ತು ಜನರ ಓಲೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕಾಂಗ್ರೆಸ್ ಗದ್ದುಗೆ ಮೇಲೆ ವಿರಾಜಮಾನವಾಗಿದೆ.. ಟೀಮ್ ಕರ್ನಾಟಕ ರಚನೆ ಆಗಿದ್ದು, ಸಂಪುಟ ರಚನೆ ಬಗ್ಗೆ ಅಸಮಾಧಾನದ ಹೊಗೆ ದಟ್ಟವಾಗಿ ಹಬ್ಬಿದೆ.
ಅಷ್ಟ ಸಚಿವರು ಇಷ್ಟ ಆಗಿದ್ಯಾಕೆ? ಉಳಿದವರಿಗೇನು ಸಂಕಷ್ಟ?
ಹೌದು. ಪ್ರಮಾಣ ವಚನದ ಬೆನ್ನಲ್ಲೇ ಸಿದ್ದರಾಮಯ್ಯಗೆ ಸಂಪುಟ ಸಂಕಟ ಶುರುವಾಗಿದೆ. ಸಿದ್ದು ವಿರುದ್ಧ ಮುನಿಸಿಕೊಂಡು ಸಮಾರಂಭಕ್ಕೆ ಹಲವು ಆಪ್ತರು ಗೈರು ಹಾಜರಿ ಹಾಕಿ ಅಸಮಾಧಾನ ಹೊರ ಹಾಕಿದ್ದಾರೆ.. ಹೊಸ ಸಂಪುಟ ಮಧ್ಯ ಕರ್ನಾಟಕ, ಕರಾವಳಿ ಭಾಗವನ್ನ ಸಂಪೂರ್ಣ ನಿರ್ಲಕ್ಷಿಸಿರೋದು ಕಾಣಿಸಿದೆ. ಸಂಪುಟ ಸಂಪೂರ್ಣ ಬೆಂಗಳೂರು ಕೇಂದ್ರಿತ ರಚನೆ ಆಗಿದೆ ಅನ್ನೋ ಆರೋಪ ಇದೆ. ಕಾರಣ 8 ಪ್ಲಸ್ 2 ಕ್ಯಾಬಿನೆಟ್ನಲ್ಲಿ ಭರ್ತಿ 4 ಜನ ಬೆಂಗಳೂರು ನಗರ, ಗ್ರಾಮಾಂತರ ಪ್ರತಿನಿಧಿಸ್ತಾರೆ.
ಇನ್ನು, ಸಂಪುಟ ಭಾಗ್ಯ ಸಿಗದೆ ಇರೋದಕ್ಕೆ ಹಲವು ನಾಯಕರು ಚಕ್ಕರ್ ಹಾಕಿದ್ರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಯಾಂಪ್ನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ದಿನೇಶ್ ಗುಂಡೂರಾವ್, ಬಸವರಾಜ ರಾಯರೆಡ್ಡಿ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ ಕಾರ್ಯಕ್ರಮದಲ್ಲಿ ಎಲ್ಲೂ ಕಾಣಲಿಲ್ಲ. ಸಿದ್ದು ಆಪ್ತರಾದ ಕೆ.ಎನ್ ರಾಜಣ್ಣ, ಸಿದ್ದು ಶಿಷ್ಯ ಭೈರತಿ ಸುರೇಶ್, ರಾಘವೇಂದ್ರ ಹಿಟ್ನಾಳ್, ತುಕಾರಾಮ್, ರಿಜ್ವಾನ್ ಅರ್ಷದ್ ಸೇರಿ ಹಲವು ಶಾಸಕರು ಕಾರ್ಯಕ್ರಮ ವೇದಿಕೆಯಲ್ಲಿ ಕಂಡಿಲ್ಲ. ಸಂಪುಟದಲ್ಲಿ ಸ್ಥಾನ ಸಿಗದ ಹಿನ್ನೆಲೆ ಬೇಸರಗೊಂಡ ಮಧು ಬಂಗಾರಪ್ಪ ಕೂಡ ಕಾರ್ಯಕ್ರಮದಿಂದ ದೂರ ಉಳಿದ್ರು ಎನ್ನಲಾಗಿದೆ.
ಸಂಪುಟದಲ್ಲಿ ಸಿಗದ ಸ್ಥಾನ, ಸಿದ್ದು ಡಿಕೆ ಮೇಲೆ ಅಸಮಾಧಾನ
ಈ ಮಧ್ಯೆ, ಸಚಿವ ಸಂಪುಟ ರಚನೆಯ ಎಲ್ಲ ಗೊಂದಲಗಳಿಗೂ ಕೆಲ ದಿನಗಳಲ್ಲೇ ತೆರೆ ಎಳೆಯಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಬುಧವಾರದ ಬಳಿಕ ಅಂದ್ರೆ, ಅಧಿವೇಶನದ ನಂತ್ರ ದೆಹಲಿಗೆ ಬರುವಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಬಾಕಿ ಉಳಿದ ಸಚಿವರ ನೇಮಕ ಮಾಡಿ ಖಾತೆ ಹಂಚಿಕೆ ಬಗ್ಗೆ ಚರ್ಚೆ ನಡೆಸಲಿದೆ. ಅಸಲಿಗೆ ಇಲ್ಲೇ ಹೊಸ ಸಂಘರ್ಷ ಹುಟ್ಟಿಕೊಳ್ಳಲಿದೆ. ತಮ್ಮ ಬಣಕ್ಕೆ ಹೆಚ್ಚು ಸ್ಥಾನಗಳ ಜೊತೆಗೆ ಪ್ರಬಲ ಖಾತೆಗಳಿಗೆ ಕಿತ್ತಾಟ ನಡೆಯೋದು ಪಕ್ಕಾ ಅನ್ನೋದು ಮೊನ್ನೆ ರಾತ್ರಿ ಡೆಲ್ಲಿ ಅಂಗಳದಲ್ಲಿನ ಹೈಡ್ರಾಮಾಗಳೇ ಸಾಕ್ಷಿ.
ಕೈ ನಾಯಕರ ಅಸಮಾಧಾನ
ಸಂಪುಟ ರಚನೆಯಾದ್ರೂ ಕಾಂಗ್ರೆಸ್ ನಾಯಕರಿಗೆ ಅತೃಪ್ತಿ ಕಾಡ್ತಿದೆ.. ಮೊದಲ ಸಂಪುಟದಲ್ಲೇ ಸೇರಲು ಆಗಲಿಲ್ಲ ಎಂಬ ಬೇಸರ ಕೂಡ ಹೊರಹಾಕಿದ್ದಾರೆ. ದಿಢೀರ್ ಸಂಪುಟ ಸಂಖ್ಯೆ ಇಳಿದ ಬಗ್ಗೆ ಕೈ ನಾಯಕರ ಅಸಮಾಧಾನ ಹೊಂದಿದ್ದಾರೆ. ಕೈಪಡೆ ಬೆಂಗಾವಲು ಪಡೆ ದಲಿತ ಸಮುದಾಯಕ್ಕೆ ಮೊದಲ ಸಂಪುಟದಲ್ಲಿ ಮೂವರಿಗೆ ಸ್ಥಾನ ನೀಡಿದ್ದಕ್ಕೆ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಅಂತ ಹೇಳಲಾಗಿದೆ. ಇನ್ನು ಲಿಂಗಾಯತ ಸಮುದಾಯಕ್ಕೆ ಅವಕಾಶ ಹೆಚ್ಚು ಅವಕಾಶ ನೀಡಬೇಕು ಅಂತ ಶಾಸಕ ವಿನಯ್ ಕುಲಕರ್ಣಿ ಒತ್ತಾಯಿಸಿದ್ದಾರೆ.
ಒಟ್ಟಾರೆ, ಹಲವರಿಗೆ ಸಚಿವರಾಗಿ ಮಾಡಿಲ್ಲ ಅನ್ನೋ ಅಸಮಾಧಾನವಿದೆ. ಹೀಗಾಗಿ ಶೀಘ್ರವೇ ಕಾಂಗ್ರೆಸ್ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬಂದು ಎಲ್ಲಾ ಖಾತೆಗಳಿಗೆ ಸಚಿವರನ್ನು ಭರ್ತಿ ಮಾಡಿದ್ರೆ ಒಳ್ಳೆಯದು. ಇಲ್ಲದಿದ್ರೆ ಕಾಂಗ್ರೆಸ್ ಬುಡಕ್ಕೆ ಏಟು ಬೀಳೋದು ಗ್ಯಾರಂಟಿ ಅನ್ನೋ ಮಾತು ಕೇಳಿಬರ್ತಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ