newsfirstkannada.com

ರಾಗಿ ಮುದ್ದೆ ತಿಂದು ಗಟ್ಟಿ ಮುಟ್ಟಾಗಿ ಇದ್ದ ಅಪ್ಪ.. ಆಸ್ತಿಗಾಗಿ ಸುಫಾರಿ ಕೊಟ್ಟು ಕೊಲ್ಲಿಸಿದ ಪಾಪಿ ಮಗ!

Share :

21-05-2023

  ಮಗನೇ ತನ್ನ ತಂದೆಯ ಹತ್ಯೆಗೆ ಸುಫಾರಿ ಕೊಟ್ಟ

  ಲೈಫ್ ಎಂಜಾಯ್ ಮಾಡಲು ಹೀಗೆ ಮಾಡಿದ್ನಾ?

  ನಡವತ್ತಿ ಶಿವು ಗ್ಯಾಂಗ್​​ಗೆ ಸುಫಾರಿ ಕೊಟ್ಟ 

ಬೆಂಗಳೂರು: ಆಸ್ತಿ ವಿಚಾರಕ್ಕೆ ಮಗನೇ ತನ್ನ ತಂದೆಯ ಹತ್ಯೆಗೆ ಸುಫಾರಿ ಕೊಟ್ಟ ಪ್ರಕರಣ ಮಾರತಹಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಆರೋಪಿ ಮಣಿಕಂಠ ತನ್ನ ತಂದೆ ನಾರಾಯಣ ಸ್ವಾಮಿಯನ್ನ ಕೊಲ್ಲಿಸಿದ್ದಾನೆ. ಆದರೆ ಪೊಲೀಸ್​​ ತನಿಖೆಯಲ್ಲಿ ಮಣಿಕಂಠ ತಂದೆಯನ್ನು ಕೊಲ್ಲಲು ಕಾರಣವನ್ನ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

ಲೈಫ್ ಎಂಜಾಯ್ ಮಾಡಲು ಹೀಗೆ ಮಾಡಿದ್ನಾ?
ಆರೋಪಿ ಮಣಿಕಂಠನನ್ನು ವಿಚಾರಣೆ ನಡೆಸುವ ವೇಳೆ ನಿಜ ಸಂಗತಿಯನ್ನ ಬಾಯಿ ಬಿಟ್ಟಿದ್ದಾನೆ. ನನ್ನ ತಂದೆ ರಾಗಿ ಮುದ್ದೆ ತಿಂದು ಇನ್ನೂ ಗಟ್ಟಿ ಮುಟ್ಟಾಗಿ ಇದ್ದಾನೆ. ಇನ್ನೂ ಇಪ್ಪತ್ತು ವರ್ಷ ಆತ ಸಾಯುತ್ತಿರಲಿಲ್ಲ. ಖರ್ಚಿಗೆ ಹಣವೂ ಕೊಡ್ತಿರಲಿಲ್ಲ. 20 ವರ್ಷದ ನಂತರ ನನ್ನ ಜೀವನದಲ್ಲಿ ಎಂಜಾಯ್ ಮಾಡೋಕೆ ಏನಿರುತ್ತೆ. ಹಾಗಾಗಿ ಕೊಲೆ ಮಾಡಿದ್ರೆ ನಾನೇ ಆರಾಮವಾಗಿ ಲೈಫ್ ಎಂಜಾಯ್ ಮಾಡ್ಬಹುದು ಎಂದು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ನಡವತ್ತಿ ಶಿವು ಗ್ಯಾಂಗ್​​ಗೆ ಸುಫಾರಿ ಕೊಟ್ಟ 
ಮಣಿಕಂಠ ಫೆಬ್ರವರಿ 13 ರಂದು ತಂದೆ ನಾರಾಯಣ ಸ್ವಾಮಿಯನ್ನ ಹತ್ಯೆ ಮಾಡಿಸಿದ್ದಾನೆ. ತಂದೆ ಹತ್ಯೆಗೆ ಸುಫಾರಿ ಕೊಡುವಾಗಲೂ ಮಣಿಕಂಠ 2 ಹಂತದ ಪ್ಲಾನ್ ಮಾಡಿದ್ದನು. ಮಣಿಕಂಠ ಮೊದಲನೇ ಹೆಂಡತಿಯನ್ನ ಕೊಲೆ ಮಾಡಿ ಜೈಲು ಸೇರಿದ್ದನು. ಜೈಲಿನಲ್ಲಿ ಮಣಿಕಂಠನಿಗೆ ನಡವತ್ತಿ ಶಿವು ಗ್ಯಾಂಗ್ ಪರಿಚಯವಾಯಿತು. ಆದರೆ ನಡವತ್ತಿ ಶಿವು ಗ್ಯಾಂಗ್ ನಾವು ಕೊಲೆ ಮಾಡಲ್ಲ ಆದ್ರೆ ಸರೆಂಡರ್ ಆಗ್ತೀವಿ ನಮಗೆ ಜೈಲಿನಲ್ಲಿದ್ದು ಅಭ್ಯಾಸವಿದೆ. ನೀನು ಬೇರೆಯವರ ಬಳಿ ಕೊಲೆ ಮಾಡಿಸು ಎಂದಿದ್ದ. ಅದರಂತೆ ಮಣಿಕಂಠ ಚಿಟ್ಟಿ ಬಾಬುಗೆ ಕೊಲೆಯ ಸುಫಾರಿ ಕೊಟ್ಟಿದ್ದ.

ಚಿಟ್ಟಿ ಬಾಬು ಕೊಲೆ ಮಾಡ್ತಿದ್ದಂತೆ ನಡುವತ್ತಿ ಶಿವು ಗ್ಯಾಂಗ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ಅದರೆ ಚಿಟ್ಟಿಬಾಬು ಜೊತೆ ಬೈಕ್‌ನಲ್ಲಿ ಬಂದಿದ್ದವನಿಗೆ ಈ ಸರೆಂಡರ್ ಪ್ಲಾನ್ ಗೊತ್ತಿರಲಿಲ್ಲ. ತನಿಖೆ ವೇಳೆ ಈತ ಕೊಟ್ಟ ಮಾಹಿತಿ ಆಧಾರದ ಮೇಲೆ ಅಸಲಿ ಸತ್ಯ ಹೊರಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಗಿ ಮುದ್ದೆ ತಿಂದು ಗಟ್ಟಿ ಮುಟ್ಟಾಗಿ ಇದ್ದ ಅಪ್ಪ.. ಆಸ್ತಿಗಾಗಿ ಸುಫಾರಿ ಕೊಟ್ಟು ಕೊಲ್ಲಿಸಿದ ಪಾಪಿ ಮಗ!

https://newsfirstlive.com/wp-content/uploads/2023/05/Murder.jpg

Load More