newsfirstkannada.com

ಸಾಮಾನ್ಯರಂತೆ ಬೆಂಗಳೂರು ಸುತ್ತಿದ ನೆದರ್​ಲ್ಯಾಂಡ್ ಪ್ರಧಾನಿ; ಫೋಟೋಸ್​ ನೋಡಿ

Share :

11-09-2023

    2 ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ಪ್ರಧಾನಿ!

    ವಿಧಾನಸೌಧಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಮಾರ್ಕ್ ರುಟ್ಟೆ

    ಸಾಮಾನ್ಯ ವ್ಯಕ್ತಿಯಂತೆ ಓಡಾಡಿದ ನೆದರ್‌ಲ್ಯಾಂಡ್ಸ್ ಪ್ರಧಾನಿ

ಬೆಂಗಳೂರು: ಎರಡು ದಿನಗಳ ಬೆಂಗಳೂರು ಪ್ರವಾಸ ಕೈಗೊಂಡಿರುವ ನೆದರ್‌ಲ್ಯಾಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಅವರನ್ನು ಡಿಸಿಎಂ ಡಿಕೆ ಶಿವಕುಮಾರ್​​ ಅದ್ಧೂರಿಯಾಗಿ ಬರಮಾಡಿಕೊಂಡರು. ಚರ್ಚ್ ಸ್ಟ್ರೀಟ್‌ನಲ್ಲಿ ಚಹಾ ಸವಿದ ಮಾರ್ಕ್ ರುಟ್ಟೆ, ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ಖುಷಿಯಿಂದ ಮಾತಾಡಿದ್ದಾರೆ.

ಬ್ರಿಗೇಡ್ ರಸ್ತೆಯಿಂದ ಕಾಲ್ನಡಿಗೆ ಮೂಲಕ ಚರ್ಚ್ ಸ್ಟ್ರೀಟಿನ ಚಾಯ್‌ ಪಾಯಿಂಟ್‌ಗೆ ಆಗಮಿಸಿದ ಡಚ್ ಪ್ರಧಾನಿ, ಮಸಾಲಾ ಚಹ ಖರೀದಿಸಿ ಸವಿದು, ಯುಪಿಐ ಮೂಲಕ ಹಣ ಪಾವತಿ ಮಾಡಿದರು. ಬಳಿಕ ತಕ್ಷಶಿಲಾ ಇನ್‌ಸ್ಟಿಟ್ಯೂಷನ್ ಗೋಡೆಯ ಮೇಲೆ ಭಾರತ ಹಾಗೂ ನೆದರ್‌ಲ್ಯಾಂಡ್ಸ್ ದ್ಯೋತಕವಾಗಿ ಬರೆಯಲಾಗಿರುವ ಸಿಂಹದ ವರ್ಣಚಿತ್ರ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.

ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾರ್ಕ್ ರುಟ್ಟೆ ಅವರನ್ನು ಅದ್ಧೂರಿಯಾಗಿ ವಿಧಾನಸೌಧಕ್ಕೆ ರೆಡ್ ಕಾರ್ಪೆಟ್ ಮೂಲಕ ಬರಮಾಡಿಕೊಂಡರು. ಇನ್ನು, ಸಚಿವ ಎಂ.ಬಿ.ಪಾಟೀಲ್, ಪ್ರಿಯಾಂಕ್ ಖರ್ಗೆ ಹಾಗೂ ಸಿಎಸ್ ವಂದಿತಾ ಶರ್ಮ ಕೂಡ ಉಪಸ್ಥಿರಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಮಾನ್ಯರಂತೆ ಬೆಂಗಳೂರು ಸುತ್ತಿದ ನೆದರ್​ಲ್ಯಾಂಡ್ ಪ್ರಧಾನಿ; ಫೋಟೋಸ್​ ನೋಡಿ

https://newsfirstlive.com/wp-content/uploads/2023/09/dk-shivakumar-8.jpg

Load More