ಯುವತಿಯನ್ನ ಓಡಿಸಿಕೊಂಡು ಹೋಗಿದ್ದಾನೆಂದು ಆರೋಪ
19 ವರ್ಷದ ಯುವತಿಯನ್ನ ಪ್ರೀತಿಸಿದನೇ 38 ವಯಸ್ಸಿನ ವ್ಯಕ್ತಿ?
ಕುಟುಂಬಸ್ಥರಿಂದ 5 ಲಕ್ಷ ರೂಪಾಯಿ ಬೇಡಿಕೆಯ ಆರೋಪ
ನಾಗ್ಪುರ್: ಯುವತಿಯ ಕುಟುಂಬಸ್ಥರ ಅತ್ಯಾಚಾರದ ಬೆದರಿಕೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಫೇಸ್ಬುಕ್ನಲ್ಲಿ ಲೈವ್ ಮಾಡುತ್ತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ್ನಲ್ಲಿ ನಡೆದಿದೆ.
ನಾಗ್ಪುರದ ಮನೀಶ್ (38) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಆದರೆ 19 ವರ್ಷದ ಯುವತಿಯನ್ನು ಪ್ರೀತಿ ಮಾಡುತ್ತಿದ್ದನು ಎನ್ನಲಾಗಿದೆ. ಸೆ.6 ರಂದು ಯುವತಿಯು ಮನೆಯಿಂದ ಕಾಣೆಯಾಗಿದ್ದಳು. ಇದರಿಂದ ಆತನೇ ಓಡಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದಾರೆ. ಬಳಿಕ ಅತ್ಯಾಚಾರ ಮಾಡಿದ್ದೀಯಾ ಎಂದು ಸ್ವತಃ ಆ ಯುವತಿ ಹಾಗೂ ಆಕೆಯ ಕುಟುಂಬಸ್ಥರು ವ್ಯಕ್ತಿಗೆ ಬೆದರಿಕೆ ಹಾಕಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಒಂದು ವೇಳೆ ಹಣ ಕೊಡದಿದ್ದರೇ ಪೊಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.
ಇದನ್ನು ಓದಿ: ಇಂಡಿಯನ್ ಏರ್ಫೋರ್ಸ್ಗೆ ಆನೆ ಬಲ.. ಮೊದಲ C-295 ಏರ್ಕ್ರಾಫ್ಟ್ ಭಾರತಕ್ಕೆ ಹಸ್ತಾಂತರ; ಇದರ ಫೀಚರ್ ಏನೇನು?
ಈ ಮೇಲಿನ ಎಲ್ಲ ಹೇಳಿಕೆಗಳನ್ನು ವ್ಯಕ್ತಿಯು ಫೇಸ್ಬುಕ್ ಲೈವ್ನಲ್ಲಿ ಹೇಳಿದ್ದಾನೆ. ಅಲ್ಲದೇ ನಾನು ಆ ಯುವತಿ ಜೊತೆ ದೈಹಿಕ ಸಂಪರ್ಕ ಹೊಂದಿರಲಿಲ್ಲ. ಅವರು ಆರೋಪ ಮಾಡುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದಾನೆ. ನನ್ನ ಸಾವಿಗೆ ಯುವತಿಯ, ಆಕೆಯ ಕುಟುಂಬಸ್ಥರು ಹಾಗೂ ಫೋಟೋ ಸ್ಟುಡಿಯೋದ ವ್ಯಕ್ತಿಯೊಬ್ಬರು ಕಾರಣವೆಂದು ಹೆಸರು ಹೇಳಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ನದಿಯಿಂದ ವ್ಯಕ್ತಿಯ ಮೃತದೇಹ ಹೊರ ತೆಗೆಯಲಾಗಿದ್ದು ಈ ಸಂಬಂಧ ನಾಗ್ಪುರ್ದ ಕಾಳಮಣ ಠಾಣೆಯ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ