ಬೆಂಗಳೂರಿನ ದೊಡ್ಡ ಗುಬ್ಬಿ ನಿವಾಸದ ಡಿ ಮ್ಯಾಕ್ಸ್ ಅಪಾರ್ಟ್ಮೆಂಟ್ನಲ್ಲಿ ಘಟನೆ
14 ದಿನಕ್ಕೆ ಫ್ಲ್ಯಾಟ್ ಬಾಡಿಗೆ ಪಡೆದಿದ್ದ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಬಿಡುವಿನ ಸಂದರ್ಭದಲ್ಲಿ ಅಬ್ರಾಹಂ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಸೌಮಿನಿ
ಬೆಂಗಳೂರು: ಬೆಂಕಿ ಹಚ್ಚಿಕೊಂಡು ವಿವಾಹಿತ ಮಹಿಳೆ ಹಾಗೂ ಪ್ರೇಮಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೌಮಿನಿ ದಾಸ್ ಮತ್ತು ಅಭಿಲ್ ಅಬ್ರಾಹಂ ಮೃತ ದುರ್ದೈವಿಗಳು. ಸೌಮಿನಿ ದಾಸ್ ಪಶ್ಚಿಮ ಬಂಗಾಳ ಮೂಲದವಳು. ಅಭಿಲ್ ಅಬ್ರಾಹಂ ಕೇರಳ ನಿವಾಸಿ.
ದೊಡ್ಡ ಗುಬ್ಬಿ ನಿವಾಸದ ಡಿ ಮ್ಯಾಕ್ಸ್ ಅಪಾರ್ಟ್ಮೆಂಟ್ನಲ್ಲಿ ಇಬ್ಬರು ವಾಸವಾಗಿದ್ದರು. ಮೃತ ಸೌಮಿನಿ ಬೆಂಗಳೂರಿನಲ್ಲಿ ಎರಡನೇ ವರ್ಷದ ನರ್ಸಿಂಗ್ ಮಾಡುತ್ತಿದ್ದಳು. ಇತ್ತ ಅಭಿಲ್ ಅಬ್ರಾಹಂ ನರ್ಸಿಂಗ್ ಸರ್ವಿಸ್ ಏಜೆನ್ಸಿ ನಡೆಸುತ್ತಿದ್ದ. ಹೀಗೆ ಬೆಂಗಳೂರಿನಲ್ಲಿ ಇಬ್ಬರಿಗೂ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಇನ್ನು ರಜೆಯಿದ್ದ ಸಂದರ್ಭದಲ್ಲಿ ಅಬ್ರಾಹಂ ಏಜೆನ್ಸಿಯಲ್ಲಿ ಸೌಮಿನಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಇದನ್ನು ಓದಿ: ಡಿಜಿಟಲ್ ಭಿಕ್ಷಾಟನೆ ಇಳಿದ ತೃತೀಯ ಲಿಂಗಿಗಳು! ಸ್ಕ್ಯಾನ್ ಮಾಡಿ ಹಣ ವಸೂಲಿ ಮಾಡ್ತಾರೆ ಇವರು
ಆದರೆ ಸೌಮಿನಿ ದಾಸ್ಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ವಿಚಾರವನ್ನೂ ಪ್ರೇಮಿ ಅಬ್ರಾಹಂಗೆ ತಿಳಿಸಿದ್ದಳು. ಕಳೆದ ಎರಡು ದಿನಗಳ ಹಿಂದೆ ಕೊಲ್ಕತ್ತಾಗೆ ಹೋಗಿದ್ದ ಸೌಮಿನಿ, ಅಲ್ಲಿ ತನ್ನ ಪತಿಗೆ ತಾನು ಬೇರೊಬ್ಬನ ಪ್ರೀತಿ ಮಾಡುತ್ತಿರುವ ಬಗ್ಗೆ ತಿಳಿಸಿದ್ದಾಳೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಆಗಿದೆ ಎನ್ನಲಾಗಿದೆ.
ನಂತರ ಬೆಂಗಳೂರಿಗೆ ಬಂದಿದ್ದ ಸೌಮಿನಿ ಮನೆಯಲ್ಲಿ ನಡೆದ ವಿಚಾರವನ್ನು ಪ್ರೇಮಿ ಅಭಿಲ್ ಅಬ್ರಾಹಂ ಬಳಿ ಹೇಳಿಕೊಂಡಿದ್ದಾಳೆ. ಇದಕ್ಕೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನ ಮಾಡುತ್ತಾರೆ. 14 ದಿನ ಬಾಡಿಗೆ ಪಡೆದಿದ್ದ ಅಪಾರ್ಟ್ಮೆಂಟ್ನಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೊತ್ತನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ