newsfirstkannada.com

ಹಣೆಯಲ್ಲಿ ಸಿಂಧೂರ, ಕುತ್ತಿಗೆಯಲ್ಲಿ ತಾಳಿ ಇದ್ರೆ ರಿಜಿಸ್ಟರ್, ಇಲ್ಲದಿದ್ರೆ.. ಬಾಗೇಶ್ವರ ಬಾಬಾ ಮತ್ತೊಂದು ವಿವಾದಾತ್ಮಕ ಹೇಳಿಕೆ

Share :

15-07-2023

  ವಿವಾಹಿತ ಮಹಿಳೆ ರಿಜಿಸ್ಟರ್‌ ಆದ ಮಹಿಳೆ ಎಂದ ವಿವಾದಿತ ಸಂತ

  ಬಾಗೇಶ್ವರ್​ ಧಾಮ್ ಸರ್ಕಾರ್ ಅಂತಾ ಫೇಮಸ್ ಆದ ಬಾಬಾ ಇವ್ರು

  ಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಪವಾಡಗಳ ಮೂಲಕ ಪರಿಹಾರ

ನವದೆಹಲಿ: ಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಪವಾಡಗಳ ಮೂಲಕ ಪರಿಹಾರ ನೀಡುವ ಬಾಗೇಶ್ವರ್ ಬಾಬಾ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಹಿಳೆಯರ ಹಣೆಯಲ್ಲಿ ಸಿಂಧೂರ, ಕುತ್ತಿಗೆಯಲ್ಲಿ ಮಂಗಳ ಸೂತ್ರ ಇದ್ದರೆ ಅವರಿಗೆ ರಿಜಿಸ್ಟರ್‌ ಆಗಿ ಹೋಗಿದೆ ಎಂದರ್ಥ. ಮಹಿಳೆಯರ ಹಣೆಯಲ್ಲಿ ಸಿಂಧೂರ ಇಲ್ಲದಿದ್ದರೆ, ಕುತ್ತಿಗೆಯಲ್ಲಿ ಮಂಗಳ ಸೂತ್ರ ಇಲ್ಲದಿದ್ದರೆ ಈ ಪ್ಲ್ಯಾಟ್ ಖಾಲಿ ಇದೆ ಎಂದರ್ಥ ಎಂದು ಬಾಗೇಶ್ವರ ಧಾಮ ಧೀರೇಂದ್ರ ಶಾಸ್ತ್ರಿ ಬಾಬಾ ಹೇಳಿದ್ದಾರೆ.

ದೆಹಲಿಯ ದಿವ್ಯ ದರ್ಬಾರ್‌ನಲ್ಲಿ ನಡೆದ ಪ್ರವಚನದಲ್ಲಿ ಬಾಗೇಶ್ವರ್ ಬಾಬಾ ಇಂತಹದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳ ಕುತ್ತಿಗೆಯಲ್ಲಿ ಮಂಗಳ ಸೂತ್ರ ಇದ್ದರೆ ರಿಜಿಸ್ಟರ್​​ ಆಗಿದೆ ಎಂದರ್ಥ. ಕುತ್ತಿಗೆಯಲ್ಲಿ ತಾಳಿ ಇಲ್ಲದಿದ್ರೆ ಪ್ಲ್ಯಾಟ್ ಖಾಲಿ ಎಂದರ್ಥ ಎಂದಿದ್ದಾರೆ. ಬಾಗೇಶ್ವರ ಬಾಬಾ ವಿವಾಹಿತ ಮಹಿಳೆ ರಿಜಿಸ್ಟರ್‌ ಆದ ಮಹಿಳೆಯರಂತೆ ಎಂದಿರೋ ಮಾತಿಗೆ ಮಹಿಳೆಯರ ತೀವ್ರ ವಿರೋಧ ವ್ಯಕ್ತವಾಗಿದೆ.

ಯಾರು ಈ ಬಾಗೇಶ್ವರ​ ಬಾಬಾ?
ಬಾಗೇಶ್ವರ ಬಾಬಾ ಅವರು ಬಾಗೇಶ್ವರ್​ ಧಾಮ್ ಸರ್ಕಾರ್ ಅಂತಲೇ ಫೇಮಸ್ ಆಗಿದ್ದಾರೆ. ಬಾಗೇಶ್ವರ್ ಧಾಮ್​ ಆಶ್ರಮ ಮಧ್ಯಪ್ರದೇಶದ ಛತ್ತರ್​ಪುರ್​ನಲ್ಲಿದೆ. ಜುಲೈ, 04, 1996ರಂದು ಜನಿಸಿರುವ ಬಾಗೇಶ್ವರ್​ ಬಾಬಾನ ನಿಜವಾದ ಹೆಸರು ಧೀರೇಂದ್ರ ಕೃಷ್ಣ ಗರ್ಗ್​. ಬಾಗೇಶ್ವರ್ ಬಾಬಾ ತಾತಾ ಭಗವಾನ್ ದಾಸ್​ ಸಿಧ್​ ಸಂತರಾಗಿದ್ದರು. ತಾತನಂತೆಯೇ ತಾನು ಸಂತನಾಗಲು ಬಾಗೇಶ್ವರ್ ಬಾಬಾ ಹೊರಟಿದ್ದಾರೆ. ಕಷ್ಟ ಹೇಳಿಕೊಂಡು ಬರುವ ಭಕ್ತರಿಗೆ ಪವಾಡಗಳ ಮೂಲಕ ಪರಿಹಾರ ನೀಡುವ ಮೂಲಕ ಬಾಗೇಶ್ವರ್ ಬಾಬಾ ಪ್ರಸಿದ್ಧರಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಣೆಯಲ್ಲಿ ಸಿಂಧೂರ, ಕುತ್ತಿಗೆಯಲ್ಲಿ ತಾಳಿ ಇದ್ರೆ ರಿಜಿಸ್ಟರ್, ಇಲ್ಲದಿದ್ರೆ.. ಬಾಗೇಶ್ವರ ಬಾಬಾ ಮತ್ತೊಂದು ವಿವಾದಾತ್ಮಕ ಹೇಳಿಕೆ

https://newsfirstlive.com/wp-content/uploads/2023/07/Bhageswar-Baba.jpg

Load More