ದಸರಾ ಹಬ್ಬದಂದು ತೆರೆ ಮೇಲೆ ಧೂಳೆಬ್ಬಿಸಿದ ಮಾರ್ಟಿನ್ ಸಿನಿಮಾ
ಧ್ರುವ ಸರ್ಜಾ ಅಭಿನಯಕ್ಕೆ ಫಿದಾ ಆದ ಫ್ಯಾನ್ಸ್, ಸಿನಿಮಾ ಬಗ್ಗೆ ಏನಂದ್ರು?
ಪ್ರೇಕ್ಷಕರ ನಡುವೆ ಕುಳಿತು ಸಿನಿಮಾ ನೋಡಿದ ಧ್ರುವ, ಅರ್ಜುನ್ ಹೇಳಿದ್ದೇನು?
ಧ್ರುವಾ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್ ಆಗಿದ್ದು, ಎಲ್ಲೆಡೆ ಭರ್ಜರಿ ಓಪನಿಂಗ್ ಗಳಿಸಿದೆ.. ಆ್ಯಕ್ಷನ್ ಪ್ರಿನ್ಸ್ ಬಿರುದಿಗೆ ತಕ್ಕ ಸಿನಿಮಾ ಇದಾಗಿದ್ದು, ಬಾಕ್ಸ್ ಆಫೀಸ್ ಧೂಳೆಬ್ಬಿಸಲಿದೆ ಅನ್ನೋದು ಗಾಂಧಿನಗರದ ರಿಪೋರ್ಟ್.. ಅಂದ್ಹಾಗೆ, ಇವತ್ತಿನ ಮಾರ್ಟಿನ್ ಹಬ್ಬದ ಸೆಲೆಬ್ರೇಷನ್ ಹೇಗಿತ್ತು ಅನ್ನೋದ್ರ ಝಲಕ್ ಇಲ್ಲಿದೆ ನೋಡಿ.
ಇದೊಂದು ದಿನಕ್ಕಾಗಿ ಮಾರ್ಟಿನ್ ಟೀಂ ವರ್ಷಗಳಿಂದ ಕಾದಿತ್ತು. ಧ್ರುವಾ ಅಭಿಮಾನಿಗಳಂತು ಈ ಕ್ಷಣ ಕಣ್ತುಂಬಿಕೊಳ್ಳಲು ಚಾತಕ ಪಕ್ಷಿಯಂತೆ ಕಾಯ್ತಿದ್ರು. ಮಾರ್ಟಿನ್ ಮೇಲೆ ನಿರೀಕ್ಷೆಯ ಭಾರ ತುಂಬಾನೆ ದೊಡ್ಡದಿತ್ತು. ಸಿನಿಮಾದ ರಿಸಲ್ಟ್ ಏನಾಗುತ್ತೋ ಅಂತಾ ಎಲ್ಲರೂ ಕಾಯುತ್ತಿದ್ದರು. ಅದೆಲ್ಲದಕ್ಕೂ ಈಗ ಉತ್ತರ ಸಿಕ್ಕಿದ್ದು, ಮಾರ್ಟಿನ್ ಜಯಭೇರಿ ಭಾರಿಸಿದೆ.
ಇದನ್ನೂ ಓದಿ: Vettaiyan review: ಪಕ್ಕಾ ಮಾಸ್ & ಕ್ಲಾಸ್.. ರಜನಿಕಾಂತ್ ವೆಟ್ಟಯ್ಯನ್ ಸಿನಿಮಾ ಹೇಗಿದೆ ಗೊತ್ತಾ?
ಬೆಳಗ್ಗೆ ಮನೆಯಿಂದ ಅಮ್ಮನ ಪ್ರೀತಿಯ ಅಪ್ಪುಗೆ ಪಡೆದು ಥಿಯೇಟರ್ ಕಡೆ ಹೊರಟ ಧ್ರುವ, ಮಾರ್ಗ ಮಧ್ಯದಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದ್ರು. ಬಳಿಕ ನೇರವಾಗಿ ಥಿಯೇಟರ್ಗೆ ಬಂದ ಧ್ರುವ, ಅಭಿಮಾನಿಗಳ ಅಭಿಮಾನಕ್ಕೆ ಧನ್ಯವಾದ ಹೇಳ್ತಾ, ಕಾರಿನ ಟಾಪ್ ಮೇಲೆ ಹತ್ತಿ ಸ್ಟೆಪ್ ಹಾಕಿದ್ರು. ಮೂರು ವರ್ಷದ ನಂತ್ರ ತಮ್ಮ ಸಿನಿಮಾ ರಿಲೀಸ್ ಆಗ್ತಿರೋದ್ರಿಂದ, ಜನರೊಟ್ಟಿಗೆ ಸಿನಿಮಾ ನೋಡ್ಬೇಕು ಅನ್ನೋದು ಧ್ರುವ ಆಸೆ ಆಗಿತ್ತು. ಅದರಂತೆ ಜನರೊಟ್ಟಿಗೆ ಸಿನಿಮಾ ವೀಕ್ಷಿಸಿದ್ರು.
ಸಿನಿಮಾ ಶುರುವಾಗ್ತಿದ್ದಂತೆ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತ್ತು. ಧ್ರುವ ಎಂಟ್ರಿ, ಮ್ಯಾನರಿಸಂಗೆ ಶಿಳ್ಳೆ ಚಪ್ಪಾಳೆಯ ಸ್ವಾಗತ ಕೊಟ್ರು ಫ್ಯಾನ್ಸ್. ಒಂದೊಳ್ಳೆಯ ಆ್ಯಕ್ಷನ್ ಎಂಟರ್ಟೈನರ್ ಪ್ಯಾಕೇಜ್ ಆಗಿರೋದ್ರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ, ಭರ್ಜರಿ ಓಪನಿಂಗ್ ಮಾರ್ಟಿನ್ ಸಿಕ್ಕಿದ್ದು, ಧ್ರುವ ಜನರ ರಿಯಾಕ್ಷನ್ ಖುಷಿ ವ್ಯಕ್ತಪಡಿಸಿದ್ರು. ಚಿಕ್ಕಮಕ್ಕಳು, ಹೆಣ್ಣು ಮಕ್ಕಳು ಎಲ್ಲರೂ ಬಂದು ಸಿನಿಮಾ ನೋಡ್ತಿರೋದು ತುಂಬಾ ಸಂತೋಷವಾಗಿದೆ. ಇಡೀ ರಾಜ್ಯಾದ್ಯಂತ ಹಬ್ಬದ ದಿನದಂದು ಕೂಡ ಹೌಸ್ಫುಲ್ ಹೋಗ್ತಿದೆ ಅನ್ನೋದು ಕೇಳಿ ನಿಜಕ್ಕೂ ಖುಷಿಯಾಯ್ತು ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ಇದನ್ನೂ ಓದಿ: ಶೋಭಿತಾ ಧೂಳಿಪಾಲ ನಟನೆಯ ಸಿನಿಮಾ ಇವೆಂಟ್ನಲ್ಲಿ ಸಮಂತಾ ಭಾಗಿ! ಆಲಿಯಾ ಭಟ್ ಮಾತಿಗೆ ಕಣ್ಣೀರು ಹಾಕಿದ ಸ್ಯಾಮ್!
ಉಳಿದಂತೆ 12 ವರ್ಷದ ನಂತ್ರ ಧ್ರುವಾ – ಎ.ಪಿ.ಅರ್ಜುನ್ ಒಟ್ಟಿಗೆ ಸಿನಿಮಾ ಮಾಡ್ತಿರೋದರಿಂದ, ಇಬ್ಬರಿಗೂ ಇದು ಕನಸಿನ ಪ್ರಾಜೆಕ್ಟ್ ಆಗಿತ್ತು. ಕುಟುಂಬದ ಜೊತೆ ಥಿಯೇಟರ್ಗೆ ಆಗಮಿಸಿದ್ದ ಎ.ಪಿ.ಅರ್ಜುನ್, ಜನರ ಪ್ರತಿಕ್ರಿಯೆ ನೋಡಿ ಸಂಭ್ರಮಿಸಿದರು. ಎಲ್ಲರೂ ಒಂದು ಇಂಗ್ಲಿಷ್ ಆ್ಯಕ್ಷನ್ ಸಿನಿಮಾ ನೋಡಿದಂತೆ ಫೀಲ್ ಆಗ್ತಿದೆ ಎಂದು ಹೇಳುತ್ತಿದ್ದಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಚೆನ್ನೈ, ಹೈದ್ರಾಬಾದ್ ಮುಂಬೈನಲ್ಲಿಯೂ ಸಹ ತುಂಬಾ ಒಳ್ಳೆಯ ಪ್ರತಿಕ್ರಿಯೆ ಇದೆ. ಈ ಒಂದು ಗೆಲುವು ನಮಗೆ ತುಂಬಾ ಸಂತೋಷ ನೀಡಿದೆ ಎಂದು ನಿರ್ದೇಶಕ ಎ.ಪಿ.ಅರ್ಜುನ್ ಹೇಳಿದ್ರು.
ಒಟ್ಟಾರೆ ಜನರ ನಿರೀಕ್ಷೆಯನ್ನ ಮಾರ್ಟಿನ್ ತಲುಪಿದ್ದು, ಬ್ಯಾಕ್ ಟು ಬ್ಯಾಕ್ ರಜೆ ಇರೋದ್ರಿಂದ ಮಾರ್ಟಿನ್ಗೆ ಮತ್ತಷ್ಟು ಬಿಗ್ ರೆಸ್ಪಾನ್ಸ್ ಸಿಗಲಿದೆ, ಗಲ್ಲಾಪೆಟ್ಟಿಗೆಯಲ್ಲೂ ಭರ್ಜರಿ ಕಲೆಕ್ಷನ್ ಕಾಣಲಿದೆ ಅಂತಾ ಹೇಳಲಾಗುತ್ತಿದೆ. ಸಿನಿಮಾ ನೋಡಿ ಆಚೆ ಬಂದ ಪ್ರೇಕ್ಷಕರು ಧ್ರುವ ಸರ್ಜಾ ಅಭಿನಯ ಚಿಂದಿ. ಸಿನಿಮಾ ಬೇರೆಯದ್ದೇ ಲೇವಲ್ ಸಿನಿಮಾ ಎಂದು ಹಾಡಿ ಹೊಗಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ