ಬೆಂಗಳೂರಿನ ಮೆಡಿಕಲ್ ಸ್ಟೋರ್ ಮಾಲೀಕರೇ ಎಚ್ಚರ!
ಯಾವ ಟೈಮ್ನಲ್ಲೂ ಬೇಕಾದ್ರೂ ಕಳ್ಳರು ನುಗ್ಗಬಹುದು..!
ಹಾಡಹಗಲೇ ಮೆಡಿಕಲ್ ಸ್ಟೋರ್ಗೆ ಕನ್ನ ಹಾಕಿದ ಖದೀಮರು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳತನ ಮಿತಿಮೀರಿದೆ. ಮೊಬೈಲ್ ಆಯ್ತು, ಲ್ಯಾಪ್ಟಾಪ್ ಆಯ್ತು, ಸರಗಳ್ಳತನ ಆಯ್ತು.. ಈಗ ಮೆಡಿಕಲ್ ಸ್ಟೋರ್ಗಳೇ ಇವರ ಟಾರ್ಗೆಟ್. ಹಾಡಹಗಲೇ ಮೆಡಿಕಲ್ ಸ್ಟೋರ್ಗಳಿಗೆ ನುಗ್ಗಿ ದರೋಡೆ ಮಾಡಲಾಗುತ್ತಿದೆ. ಹೀಗಾಗಿ ಪೊಲೀಸರು ಖದೀಮರಿಗೆ ಬ್ರೇಕ್ ಹಾಕಲು ಹರಸಾಹಸ ಪಡುತ್ತಿದ್ದಾರೆ.
ಹೌದು, ಅಪೋಲೋ ಫಾರ್ಮಸಿಗಳೇ ಖತರ್ನಾಕ್ ಕಳ್ಳರ ಟಾರ್ಗೆಟ್ ಆಗಿದೆ. ಕಳೆದೊಂದು ವಾರದಲ್ಲಿ ಸುಮಾರು ಕಡೆ ಅಪೋಲೋ ಫಾರ್ಮಸಿಗಳಲ್ಲಿ ಕಳ್ಳತನ ನಡೆದಿದೆ. ಕೊತ್ತನೂರು, ಹೆಚ್ಎಸ್ಆರ್ ಲೇಔಟ್, ಮಾರತ್ತಹಳ್ಳಿ, ಗೊಟ್ಟಿಗೆರೆ ಅಪೊಲೋ ಫಾರ್ಮಸಿಗಳಲ್ಲಿ ಖದೀಮರು ಕೈಚಳಕ ತೋರಿಸಿದ್ದಾರೆ.
ಮೆಡಿಕಲ್ ಸ್ಟೋರ್ಗೆ ಹೋದವ್ರು ಮೆಡಿಸಿನ್ ತೆಗೆದುಕೊಂಡು ವಾಪಾಸ್ ಬರ್ಬೇಕು.. ಅದನ್ನ ಬಿಟ್ಟು ಇಲ್ಲೋರ್ವ ಸಿಬ್ಬಂದಿ ಇರೋ ಜಾಗಕ್ಕೆ ಹೋಗಿ ಹೆದರಿಸಿ ಬೆದರಿಸಿ ಹಣ, ಮೆಡಿಸಿನ್ಗಳನ್ನೇ ದರೋಡೆ ಮಾಡೋಕೆ ಮುಂದಾಗಿದ್ದಾನೆ. ಅಷ್ಟೇ ಅಲ್ಲ, ಮೆಡಿಕಲ್ ಶಾಪ್ನವನು ಆಗಲ್ಲ ಅಂದಿದ್ದಕ್ಕೆ ಚಾಕುವಿನಿಂದ ಹಲ್ಲೆ ಮಾಡಿ, ನಗದು ಮತ್ತು ಕೈಗೆ ಸಿಕ್ಕ ಸಿಕ್ಕದನ್ನು ದೋಚಿಕೊಂಡು ಹೋಗಿದ್ದಾನೆ.
ಗ್ರಾಹಕರ ಸೋಗಿನಲ್ಲಿ ಬಂದು ದರೋಡೆ
ಗ್ರಾಹಕರ ಸೋಗಿನಲ್ಲಿ ಬಂದು ದರೋಡೆ ಮಾಡಿರೋದು ಬನ್ನೇರುಘಟ್ಟ ಮುಖ್ಯರಸ್ತೆ ಗೊಟ್ಟಿಗೆರೆಯ ಅಪೋಲೋ ಫಾರ್ಮಸಿಯಲ್ಲಿ. ಕ್ಯಾಶ್ ಕೌಂಟರ್ನಲ್ಲಿದ್ದ 52 ಸಾವಿರ ನಗದು, ಹಾಗೂ ಕೆಲ ಮೆಡಿಸಿನ್ ಗಳನ್ನ ದೋಚಿ ಪರಾರಿಯಾಗಿದ್ದಾನೆ. ಫಾರ್ಮಸಿ ಸಿಬ್ಬಂದಿ ವಿಘ್ನೇಶ್ನ ಎರಡು ಕಾಲಿಗೆ ಚಾಕುವಿನಿಂದ ಚುಚ್ಚಿ ಎಸ್ಕೇಪ್ ಆಗಿದ್ದಾನೆ. ಬಳಿಕ ಸ್ಥಳಕ್ಕೆ ಹುಳಿಮಾವು ಪೋಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ