ಕೇರಳ ಚಿತ್ರೋದ್ಯಮದಲ್ಲಿ ಕಿಚ್ಚು ಹೊತ್ತಿಸಿದ ಹೇಮಾ ಕಮಿಟಿ ವರದಿ
ಮಲಯಾಳಂ ಸಿನಿಮಾ ಕಲಾವಿದರ ಸಂಘದಲ್ಲಿ ರಾಜೀನಾಮೆ ಪರ್ವ
ಅಮ್ಮಾದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ದಿಗ್ಗಜ ನಟ ಮೋಹನಲಾಲ್
ತಿರುವನಂತಪುರಂ: ಕಳೆದ ಒಂದು ವಾರದಿಂದ ಮಲಯಾಳಂ ಚಿತ್ರರಂಗದಲ್ಲಿ ಜಸ್ಟಿಸ್ ಹೇಮಾ ಕಮಿಟಿಯ ವರದಿಯೇ ದೊಡ್ಡ ಚರ್ಚೆಯಾಗುತ್ತಿದೆ. ಕೇರಳ ಸಿನಿರಂಗದ ಹಲವು ದಿಗ್ಗಜರನ್ನು ಅದು ಅನುಮಾನದ ಕನ್ನಡಕದಲ್ಲಿಟ್ಟು ನೋಡುತ್ತಿದೆ. ಈಗಾಗಲೇ ಅನೇಕ ಹಿರಿಯ ಕಲಾವಿದರು ಮಲೆಯಾಳಂ ಚಲನಚಿತ್ರ ಅಕಾಡೆಮಿಯಿಂದ ಆಚೆ ಬಂದಿದ್ರೆ ಈಗ ಮಲೆಯಾಳಂ ಸಿನಿಮಾ ಕಲಾವಿದರ ಸಂಘ (AMMA ವನ್ನೇ ವಿಸರ್ಜನೆಗೊಳಿಸುವ ನಿರ್ಧಾರ ತೆಗದುಕೊಳ್ಳುವ ಮಟ್ಟಕ್ಕೆ ಹೋಗಿದೆ.
ಇದನ್ನೂ ಓದಿ: ಮಂಚದ ಮೇಲೆ ಮಲಗಿದ್ರೆ ಮಾತ್ರ ನಟಿಯರಿಗೆ ಚಾನ್ಸ್; ಸಿನಿಮಾ ಇಂಡಸ್ಟ್ರಿ ಕರಾಳ ಸತ್ಯ ಬಿಚ್ಚಿಟ್ಟ ಕೇಸ್ಗೆ ಟ್ವಿಸ್ಟ್
ಜಸ್ಟಿಸ್ ಹೇಮಾ ಕಮಿಟಿ ವರದಿಯಲ್ಲಿ ಅಮ್ಮಾದ ಹಲವು ಸದಸ್ಯರ ಮೇಲೆ ಗುರುತರ ಆರೋಪ ಬಂದಿವೆ. ಹೀಗಾಗಿ ನೈತಿಕ ಹೊಣೆ ಹೊತ್ತು ಅಮ್ಮಾದ ಅಧ್ಯಕ್ಷ ಸ್ಥಾನದಲ್ಲಿದ್ದ ದಿಗ್ಗಜ ನಟ ಮೋಹನಲಾಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅದು ಮಾತ್ರವಲ್ಲ ಮಲಯಾಳಂ ಸಿನಿಮಾ ಕಲಾವಿದರ ಸಂಘವನ್ನೇ ನೈತಿಕ ಹೊಣೆಗಾರಿಕೆಯ ಮೇಲೆ ವಿಸರ್ಜನೆಗೊಳಿಸಲು ಸಿದ್ಧತೆಗಳು ಕೂಡ ನಡೆದಿವೆ. ಈಗಾಗಲೇ ಈ ನಿರ್ಧಾರಕ್ಕೆ ಸಂಘ ಬಂದಿದ್ದು. ಸಂಘವನ್ನು ವಿಸರ್ಜಿಸಿ, ಎರಡು ತಿಂಗಳಲ್ಲಿ ಇರುವ ವಿಧಾನಸಭಾ ಚುನಾವಣೆಯು ಮುಗಿದ ಬಳಿಕ ಹೊಸ ಕಲಾವಿದರ ಸಂಘವನ್ನು ನಿರ್ಮಿಸಲು ಚಿಂತನೆಗಳು ನಡೆಯುತ್ತಿವೆ.
ಇದನ್ನೂ ಓದಿ: ಯುವ ನಟಿಯರಿಗೆ ಕಿರುಕುಳ.. ಹೇಮಾ ಕಮಿಟಿ ವರದಿ ಬಳಿಕ ಮಲಯಾಳಂ ಚಿತ್ರರಂಗದ ಇಬ್ಬರು ರಾಜೀನಾಮೆ
ಅಮ್ಮಾ ಸಂಘದ ಅಧ್ಯಕ್ಷ ಮೋಹನಲಾಲ್ ಜೊತೆಗೆ ಉಪಾಧ್ಯಕ್ಷ ಜಯನ್ ಚರ್ತಾಲ್ ಮತ್ತು ಜಗದೀಶ್, ಜಂಟಿ ಕಾರ್ಯದರ್ಶಿ ಬಾಬುರಾಜ್, ಖಜಾಂಚಿ ಉನ್ನಿ ಮುಕುಂದನ್, ಕಮಿಟಿ ಮೆಂಬರ್ಗಳಾದ ಅನ್ಸಿಬ್ ಹಸನ್, ಸರಯೂ ಮೋಹನ್, ವಿನು ಮೋಹನ್ ಸೇರಿ ಹಲವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ರವಿವಾರ ಅಮ್ಮಾದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನಟ ಸಿದ್ಧಕಿ ರಾಜೀನಾಮೆ ನೀಡಿದ ಬೆನ್ನಲ್ಲೆ ಈಗ ಸಾಮೂಹಿಕ ರಾಜೀನಾಮೆಯ ಪರ್ವ ಅಮ್ಮಾದಲ್ಲಿ ಶುರುವಾಗಿದೆ. ಇದು ಮುಂದೆ ಯಾವ ಹಂತಕ್ಕೆ ಹೋಗಿ ತಲುಪಲಿದೆ. ಮುಂದೆ ಯಾವ ಯಾವ ನಟರು ಈ ಹೇಮಾ ಕಮಿಟಿಯ ವರದಿಯಿಂದ ಲೈಂಗಿಕ ಕಿರುಕುಳದ ವಿಚಾರದಲ್ಲಿ ಮುನ್ನೆಲೆಗೆ ಬರಲಿದ್ದಾರೆ ಅನ್ನೊ ಕುತೂಹಲ ಹುಟ್ಟು ಹಾಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ