newsfirstkannada.com

ಮೋದಿ-ಬೈಡನ್ ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕ್ತಿದ್ದಂತೆಯೇ ನ್ಯೂಯಾರ್ಕ್​ ಆಗಸದಲ್ಲಿ ಬೃಹತ್ ಬ್ಯಾನರ್ ಹಾರಾಟ.. Video

Share :

24-06-2023

    ಮೋದಿ ಸ್ವಾಗತ.. ತ್ರಿವರ್ಣದಲ್ಲಿ ಬೆಳಗಿದ ಅಮೆರಿಕ ಪ್ರಸಿದ್ಧ ಕಟ್ಟಡ

    ನಯಾಗರ ಫಾಲ್ಸ್​ನಲ್ಲಿ ರಾರಾಜಿಸಿದ ತ್ರಿವರ್ಣ ಬಣ್ಣ -ವಿಡಿಯೋ

    ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದ ಮೋದಿ ಅಮೆರಿಕ ಪ್ರವಾಸ

ಪ್ರಧಾನಿ ನರೇಂದ್ರ ಮೋದಿ ಅವರ ಮೂರು ದಿನಗಳ ಅಮೆರಿಕ ಪ್ರವಾಸವು ಮುಕ್ತಾಯಗೊಂಡಿದೆ. ಅಮೆರಿಕ ಜೊತೆ ಮೋದಿ ಅವರು ಮಾಡಿಕೊಂಡಿರುವ ಇತಿಹಾಸಿಕ ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡರು. ಒಪ್ಪಂದಗಳಿಗೆ ಉಬಯ ನಾಯಕರು ಸಹಿ ಮಾಡುತ್ತಿದ್ದಂತೆಯೇ ಅದನ್ನು ಸ್ಮರಣೀಯಗೊಳಿಸಲು ನ್ಯೂಯಾರ್ಕ್ ಆಕಾಶದಲ್ಲಿ ಮೋದಿ ಮತ್ತು ಬೈಡನ್ ಬೃಹತ್ ಬ್ಯಾನರ್​ ಹಾರಿಸಲಾಗಿದೆ.

ವಿಮಾನದ ಸಹಾಯದಿಂದ ಮೋದಿ ಮತ್ತು ಬೈಡನ್ ಭಾವಚಿತ್ರ ಇರುವ ದೊಡ್ಡ ಬ್ಯಾನರ್ ಒಂದನ್ನು ಆಕಾಶದಲ್ಲಿ ತೇಲಾಡಿಸಿದೆ. ‘‘Historic state visit to the USA’’ ಅಂತಾ ಆ ಬ್ಯಾನರ್​​ನಲ್ಲಿ ಬರೆಯಲಾಗಿದೆ. ಈ ಮೂಲಕ ಮೋದಿ ಅವರ ಅಮೆರಿಕ ಭೇಟಿಯನ್ನು ಐತಿಹಾಸಿಕ ಹೆಗ್ಗುರುತಾಗಿ ಗುರುತಿಸಲಾಗಿದೆ. ಆಕಾಶದಲ್ಲಿ ಬ್ಯಾನರ್​ ಹಾರಾಟವನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಶೇರ್ ಮಾಡಿದ್ದಾರೆ.

ಅಷ್ಟೇ ಅಲ್ಲದೇ ನ್ಯೂಯಾರ್ಕ್ ನಗರದಲ್ಲಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್​ ಮತ್ತು ನಯಾಗರ ಫಾಲ್ಸ್​ನಲ್ಲಿ ಭಾರತದ ಹೆಮ್ಮೆಯ ತ್ರಿವರ್ಣ ಧ್ವಜದ ಬಣ್ಣವನ್ನು ಪ್ರದರ್ಶಿಸಿ ಮೋದಿಗೆ ಸ್ವಾಗತ ನೀಡಲಾಗಿದೆ. ಇನ್ನು ಮೋದಿಗೆ, ಅಮೆರಿಕ ಫಸ್ಟ್​ ಕಪಲ್ ಶ್ವೇತಭವನದಲ್ಲಿ ‘ಸ್ಟೇಟ್ ಡಿನ್ನರ್’ ಕೂಡ ಆಯೋಜನೆ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ-ಬೈಡನ್ ಐತಿಹಾಸಿಕ ಒಪ್ಪಂದಗಳಿಗೆ ಸಹಿ ಹಾಕ್ತಿದ್ದಂತೆಯೇ ನ್ಯೂಯಾರ್ಕ್​ ಆಗಸದಲ್ಲಿ ಬೃಹತ್ ಬ್ಯಾನರ್ ಹಾರಾಟ.. Video

https://newsfirstlive.com/wp-content/uploads/2023/06/New-York.jpg

Load More