newsfirstkannada.com

ವಿದ್ಯಾರ್ಥಿಗಳೇ ಹುಷಾರ್‌! ಮೆಡಿಕಲ್ ಸೀಟ್ ಕೊಡಿಸೋದಾಗಿ ಹೇಳಿ 62 ಲಕ್ಷ ರೂಪಾಯಿ ವಂಚನೆ

Share :

31-10-2023

    ನೀಟ್ ರಿಸಲ್ಟ್ ಬರುವುದನ್ನೇ ಕಾಯುತ್ತಿದ್ದ ಅಂತರ್‌ ರಾಜ್ಯ ಮೋಸಗಾರ

    ಒಳ್ಳೆಯ ಕಾಲೇಜ್‌ನಲ್ಲಿ ಮೆಡಿಕಲ್ ಸೀಟ್ ಕೊಡಿಸೊದಾಗಿ ಹೇಳಿ ವಂಚನೆ

    ಅಭ್ಯರ್ಥಿಗಳಿಂದ ಪಡೆದ 42.80 ಲಕ್ಷ ರೂಪಾಯಿ ಹಣ ಪೊಲೀಸ್ ವಶ

ಬೆಂಗಳೂರು: ನೀಟ್ ರಿಸಲ್ಟ್ ಬರುವುದನ್ನೇ ಕಾಯುತ್ತಿದ್ದ ಖದೀಮರು, ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಸಂಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮೆಡಿಕಲ್‌ ಸೀಟ್‌ ಕೊಡಿಸುವುದಾಗಿ ನಂಬಿಸಿ ಹಲವರಿಂದ 62 ಲಕ್ಷ ರೂ. ಹಣ ಪಡೆದು ವಂಚಿಸಿದ್ದ ಅಂತರ್‌ ರಾಜ್ಯ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ 47.8 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ತೆಲಂಗಾಣ ಮೂಲದ ಶರತ್ ಗೌಡ್ ಬಂಧಿತ ಆರೋಪಿ. ಈತ ಬೆಂಗಳೂರು ಸೇರಿದಂತೆ ವಿವಿಧೆಡೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ಹೇಳಿ ಅಮಾಯಕರನ್ನು ವಂಚಿಸುತ್ತಿದ್ದ ಮಾಸ್ಟರ್ ಮೈಂಡ್. ಆರೋಪಿಯು ನೀಟ್ ರಿಸಲ್ಟ್ ಬಂದ ಕೂಡಲೇ ಕಡಿಮೆ ಱಂಕ್‌ ಪಡೆದವರನ್ನು ಸಂಪರ್ಕಿಸುತ್ತಿದ್ದ. ನಿಮಗೆ ಒಳ್ಳೆಯ ಕಾಲೇಜ್‌ನಲ್ಲಿ ಸೀಟ್ ಕೊಡಿಸೊದಾಗಿ ಹಣ ಪಡೆದು ವಂಚಿಸುತ್ತಿದ್ದ.

ನೀಟ್ ರಿಸಲ್ಟ್ ಮೂಲಕ ಅಭ್ಯರ್ಥಿಗಳಿಗೆ ಗಾಳ ಹಾಕುತಿದ್ದ ಆರೋಪಿ 20ಕ್ಕೂ ಹೆಚ್ಚು ಮಂದಿಗೆ ಇದೇ ರೀತಿ ಮೋಸ ಮಾಡಿರೋದು ಪತ್ತೆಯಾಗಿದೆ. ಹಣ ಕಳೆದುಕೊಂಡವರು ಸಂಜಯನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ಆರೋಪಿಗಾಗಿ ಬಲೆ ಬೀಸಿದ ಸಂಜಯನಗರ ಪೊಲೀಸರು ಮಾಸ್ಟರ್ ಮೈಂಡ್ ಶರತ್ ಗೌಡನನ್ನ ಬಂಧಿಸಲಾಗಿದೆ. ಆರೋಪಿ ಅಭ್ಯರ್ಥಿಗಳಿಂದ ಪಡೆದ 42.80 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗಳೇ ಹುಷಾರ್‌! ಮೆಡಿಕಲ್ ಸೀಟ್ ಕೊಡಿಸೋದಾಗಿ ಹೇಳಿ 62 ಲಕ್ಷ ರೂಪಾಯಿ ವಂಚನೆ

https://newsfirstlive.com/wp-content/uploads/2023/10/Sanjay-Nagar-Police-Station.jpg

Load More