newsfirstkannada.com

ಟೀಂ ಇಂಡಿಯಾಗೆ ಸಿಕ್ಕಿದೆ ‘ಸ್ಪೆಷಲ್ ಟ್ರಂಪ್ ಕಾರ್ಡ್’; ವಿಶ್ವಕಪ್​​ನ ಮ್ಯಾಚ್​ ವಿನ್ನರ್ಸ್​ ಆಗೋದು ಇವರೇ..!

Share :

Published September 14, 2023 at 9:31am

    ಟೀಮ್ ಇಂಡಿಯಾಗೆ ಇಲ್ಲ ವಿಶ್ವಕಪ್​ ಚಿಂತೆ..!

    ಇವರೇ ಎಕ್ಸ್​-ಫ್ಯಾಕ್ಟರ್ಸ್​ ಅಂಡ್ ಮ್ಯಾಚ್ ವಿನ್ನರ್ಸ್

    ಏಷ್ಯಾಕಪ್​​ನಲ್ಲಿ ತಂಡದ ಹುರುಪು ಹೆಚ್ಚಿಸಿದ ಇಬ್ಬರು

ಏಷ್ಯಾಕಪ್​ ಟೂರ್ನಿಗೂ ಮುನ್ನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪರಿಸ್ಥಿತಿ ಏನಪ್ಪಾ ಎಂಬಂತಿತ್ತು. ಇದಕ್ಕೆ ಕಾರಣ ಟೀಮ್ ಇಂಡಿಯಾದ ಬೌಲಿಂಗ್ ಡಿಪಾಟ್ಮೆಂಟ್​​ನ ಎಕ್ಸ್​-ಫ್ಯಾಕ್ಟರ್​ ಮತ್ತು ಮ್ಯಾಚ್ ವಿನ್ನರ್ ಯಾರು ಅನ್ನೋದು. ಅದ್ರೀಗ ಈ ಬಗ್ಗೆ ಚಿಂತೆನೇ ಇಲ್ಲ.

ವಿಶ್ವಕಪ್​ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಮುಂದಿರೋ ಟಾರ್ಗೆಟ್​ ಏಷ್ಯಾಕಪ್. ಈ ಏಷ್ಯಾಕಪ್ ಆರಂಭಕ್ಕೂ ಮುನ್ನ ಕ್ರಿಕೆಟ್​ ಅಭಿಮಾನಿಗಳಿಗೆ ಕಾಡ್ತಿದ್ದ ಪ್ರಶ್ನೆ, ಈ ಮಿನಿ ಸಮರಲ್ಲಾದರೂ ಟೀಮ್ ಇಂಡಿಯಾ ಗೆಲ್ಲುತ್ತಾ ಅನ್ನೋದು. ಇದು ಜಸ್ಟ್​ ಅಭಿಮಾನಿಗಳ ಮನದಲ್ಲಿ ಮೂಡಿದ್ದ ಅನುಮಾನವಲ್ಲ. ದಿಗ್ಗಜ ಕ್ರಿಕೆಟಿಗರು, ಮಾಜಿ ಕ್ರಿಕೆಟಿಗರು, ಎಕ್ಸ್​ಪರ್ಟ್​ಗಳೇ ಹೇಳಿದ್ದ ಮಾತು.

ಆದ್ರೀಗ ಚಿಂತೆಯೇನಿಲ್ಲ. ಯಾಕಂದ್ರೆ ಟೀಮ್ ಇಂಡಿಯಾದ ಇಬ್ಬರು ಎಕ್ಸ್​-ಫ್ಯಾಕ್ಟರ್​ಗಳಿದ್ದಾರೆ. ಇಬ್ಬರು ಮ್ಯಾಚ್ ವಿನ್ನರ್​ ಬೌಲರ್​ಗಳಿದ್ದಾರೆ. ಒಂದೇ ಮಾತಲ್ಲೇ ಹೇಳೋದಾದ್ರೆ ಇಬ್ಬರು ಗೇಮ್​ ಚೇಂಜರ್​ಗಳಿದ್ದಾರೆ. ಈ ಇಬ್ಬರ ಪರ್ಫಾಮೆನ್ಸ್​, ಕ್ರಿಕೆಟ್​ ಪ್ರೀಮಿಗಳ ವಿಶ್ವಕಪ್​ ಕನಸನ್ನು ಬೆಟ್ಟದಷ್ಟು ಹೆಚ್ಚಿಸಿದೆ. ಅಂದ್ಹಾಗೆ ಆತ್ಮವಿಶ್ವಾಸ ಹೆಚ್ಚಿಸಿರುವ ಆ ಇಬ್ಬರು ಬೇಱರೂ ಅಲ್ಲ. ಡೆತ್​ ಓವರ್ ಸ್ಪೆಷಲಿಸ್ಟ್​, ಯಾರ್ಕರ್​ ಕಿಂಗ್​​​​​​​​ ಆ್ಯಂಡ್ ಸ್ವಿಂಗ್ ಮಾಸ್ಟರ್ ಬೂಮ್ರಾ ಹಾಗೂ ಮ್ಯಾಜಿಕಲ್ ಚೈನಾಮನ್ ಕುಲ್​ದೀಪ್ ಯಾದವ್.

ಏಕದಿನದಲ್ಲಿ ಬೂಮ್ರಾ ಗ್ರೇಟ್​ ಕಮ್​ಬ್ಯಾಕ್​..!

ಇಂಜುರಿಯಿಂದ ಟೀಮ್ ಇಂಡಿಯಾದಿಂದ ದೂರವಾಗಿದ್ದ ಜಸ್​ಪ್ರೀತ್​ ಬೂಮ್ರಾ, ಏಕದಿನ ಪಂದ್ಯವನ್ನಾಡಿ ಬರೋಬ್ಬರಿ 15 ತಿಂಗಳೇ ಕಳೆದಿತ್ತು. ಕಳೆದ ತಿಂಗಳಷ್ಟೇ ಟಿ20 ಫಾರ್ಮೆಟ್ ಆಡಿದ್ರೂ ಏಕದಿನ ಫಾರ್ಮೆಟ್​​​ಗೆ ಎಷ್ಟರ ಮಟ್ಟಿಗೆ ಫಿಟ್ ಇದ್ದಾರೆ ಎಂಬ ಅನುಮಾನ ಸಹಜವಾಗೇ ಕಾಡಿತ್ತು. ಆ ಅನುಮಾನಕ್ಕೆ ಪಾಕ್ ವಿರುದ್ಧದ ಹೈವೋಲ್ಟೇಜ್​​ ಮ್ಯಾಚ್​ನಲ್ಲೇ ಫೈರಿ ಸ್ಪೆಲ್ ಮೂಲಕ ಅನ್ಸರ್​ ನೀಡಿದ್ದಾರೆ.
ಬೂಮ್ರಾರ ಅಟ್ಯಾಕಿಂಗ್ ಸ್ಪೆಲ್​​ಗೆ ನಿರುತ್ತರಿಗಳಾಗಿದ್ದ ಪಾಕಿಗಳು. ಒಂದೊಂದು ರನ್​ ಗಳಿಸೋಕೆ ತಿಣುಕಾಡಿದ್ರು. ಅದರಲ್ಲೂ ಬೂಮ್ರಾರ ಇನ್ ಸ್ವಿಂಗ್ ಆ್ಯಂಡ್ ಔಟ್ ಸ್ವಿಂಗ್ ಎಸೆತಗಳಿಗೆ ದಿಕ್ಕೆಟ್ಟಿದ್ರು. ಪಾಕ್ ಎದುರಿನ ಪಂದ್ಯದಲ್ಲಿ ಬೂಮ್ರಾ ಜಸ್ಟ್​ ಒಂದೇ ಒಂದು ವಿಕೆಟ್ ಪಡೆದರೂ, ಲಯಬದ್ಧ ದಾಳಿ ನಿಜಕ್ಕೂ ಹೊಸ ಉತ್ಸಾಹವನ್ನೇ ತಂದಿಟ್ಟಿದೆ.

ಪಾಕ್ ಎದುರು ಮಾತ್ರವೇ ಅಲ್ಲ. ಶ್ರೀಲಂಕಾ ಎದುರು ಕೂಡ ಧಮ್​ಧಾರ್​ ಪರ್ಫಾಮೆನ್ಸ್​ ನೀಡಿದ್ರು. ಲಂಕಾ ಎದುರು 7 ಓವರ್ ಬೌಲಿಂಗ್ ಮಾಡಿದ್ದ ಬೂಮ್ರಾ, ಒಂದು ಓವರ್ ಮೇಡನ್ ಸಹಿತ 30 ರನ್ ನೀಡಿ 1 ವಿಕೆಟ್ ಪಡೆದರು.

ಕುಲ್​ದೀಪ್ ಕಮಾಲ್​.. ಪಾಕ್​​​-ಲಂಕಾ ಥಂಡಾ..!

ಸೂಪರ್-4 ಮ್ಯಾಚ್​​​ನಲ್ಲಿ ಚೈನಾಮನ್ ಕುಲ್​ದೀಪ್​​​ ಯಾದವ್​ರ, ಮ್ಯಾಜಿಕಲ್ ಸ್ಪೆಲ್ ಮರೆಯುವಂತಿಲ್ಲ. ಸ್ಪಿನ್ನರ್​ಗಳ ಎದುರು ಅದ್ಭುತವಾಗಿ ಆಡೋ ಪಾಕಿಗಳಿಗೆ ಚಳ್ಳೆಹಣ್ಣು ತಿನ್ನಿಸಿದ ಕಿಲಾಡಿ ಕುಲ್​ದೀಪ್, 25 ರನ್​​ ನೀಡಿ 5 ಪ್ರಮುಖ ವಿಕೆಟ್ ಉರುಳಿಸಿದ್ರೆ. ಆತಿಥೇಯ ಶ್ರೀಲಂಕಾ ಎದುರು 4 ವಿಕೆಟ್ ಉರುಳಿಸಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ರು. ಬರೀ ಸ್ಪಿನ್ನಿಂಗ್ ಟ್ರ್ಯಾಕ್ ಅಷ್ಟೇ ಅಲ್ಲ. ಫ್ಲ್ಯಾಟ್ ಪಿಚ್‌ಗಳಲ್ಲೂ ಚೆಂಡನ್ನು ತಿರುಗಿಸುವ ಕಲೆ ತಮ್ಮಲ್ಲಿ ಇದೆ ಅನ್ನೋದನ್ನು ಪ್ರೂವ್ ಮಾಡಿದ್ರು.

ವಿಶ್ವಕಪ್​ನಲ್ಲಿ ಇವ್ರೇ ಟೀಮ್ ಇಂಡಿಯಾ ಟ್ರಂಪ್ ಕಾರ್ಡ್ಸ್​​​!

ಏಷ್ಯಾಕಪ್​​ನಲ್ಲಿ ಮಿಸೈಲ್​ನಂತ ಎಸೆತಗಳಿಂದ ಜಸ್​ಪ್ರೀತ್ ಬೂಮ್ರಾ ಕೆಂಗಡಿಸಿದ್ರೆ, ಹಲವು ವೇರಿಯೇಷನ್​​ಗಳನ್ನು ಹೊಂದಿರುವ ಅಗ್ರೆಸ್ಸಿವ್​ ಸ್ಪಿನ್ನರ್ ಕುಲ್​​ದೀಪ್, ಟೀಮ್ ಇಂಡಿಯಾಗೆ ಟ್ರಂಪ್ ಕಾರ್ಡ್​ ಆಗೋದ್ರಲ್ಲಿ ಅನುಮಾನವೇ ಇಲ್ಲ. ಅದ್ರಲ್ಲೂ ಇಂಡಿಯನ್ ಕಂಡೀಷನ್ಸ್​​​ನಲ್ಲೇ ವಿಶ್ವಕಪ್​ ನಡೆಯೋ ಕಾರಣ ಈತನ ಫ್ಲೆಟೆಡ್ ಆ್ಯಂಡ್ ಬೌನ್ಸಿ ಎಸೆತಗಳು ಎದುರಾಳಿ ಬ್ಯಾಟ್ಸ್​ಮನ್​ಗಳ ನಿದ್ದೆಗೆಡಿಸಲಿವೆ. ಇಂಡಿಯನ್ ಕಂಡೀಷನ್ಸ್​ ಬಗ್ಗೆ ಚೆನ್ನಾಗಿ ಅರಿತಿರೋ ಇವರು, ವಿಶ್ವಕಪ್​ನಲ್ಲಿ ಮೋಡಿ ಮಾಡೋದು ಕನ್ಫರ್ಮ್

ಪವರ್​ಪ್ಲೇ ಮತ್ತು ಡೆತ್​ಗೆ ಬೂಮ್ರಾ.. ಮಿಡಲ್​​ನಲ್ಲಿ ಕುಲ್​ದೀಪ್

ಹೊಸ ಚೆಂಡಿನಲ್ಲಿ ಸ್ವಿಂಗ್​ನೊಂದಿಗೆ ಎದುರಾಳಿಗೆ ಕಾಡುವ ಬೂಮ್ರಾ, ಡೆತ್​ ಓವರ್​ನಲ್ಲಿ ಯಾರ್ಕರ್​ ಎಸೆತಗಳಿಂದ ವಿಕೆಟ್ ಬೇಟೆಯಾಡ್ತಾರೆ. ಇದು ಸಹಜವಾಗೇ ಟೀಮ್ ಇಂಡಿಯಾಗೆ ಬಿಗ್ ಸ್ಟ್ರೆಂಥ್ ಆಗಲಿದೆ. ಇನ್ನು ಮಿಡಲ್​ ಓವರ್​ಗಳಲ್ಲಿ ಕುಲ್​ದೀಪ್,​​​​​ ಚೆಂಡನ್ನ ಮಾತ್ರವಲ್ಲ. ಪಂದ್ಯವನ್ನೂ ಟರ್ನ್​ ಮಾಡೋದು ಗ್ಯಾರಂಟಿ. ಸ್ಪಿನ್ ಫ್ರೆಂಡ್ಲಿ ಪಿಚ್​ನಲ್ಲಿ ಮತ್ತಷ್ಟು ಅಪಾಯಕಾರಿಯಾಗಲಿರುವ ಕುಲ್​ದೀಪ್, ವಿಕೆಟ್​ ಬೇಟೆಗೆ ಇಳಿಯೋದು ಕನ್ಫರ್ಮ್. ಹೀಗಾಗಿ ಬೂಮ್ರಾ ಆ್ಯಂಡ್ ಕುಲ್​ದೀಪ್, ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಪಾಲಿನ ಮ್ಯಾಚ್ ವಿನ್ನರ್ಸ್ ಆ್ಯಂಡ್ ಟ್ರಂಪ್ ಕಾರ್ಡ್ಸ್​ ಆಗೋದ್ರಲ್ಲಿ ಅನುಮಾನ ಇಲ್ಲ.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾಗೆ ಸಿಕ್ಕಿದೆ ‘ಸ್ಪೆಷಲ್ ಟ್ರಂಪ್ ಕಾರ್ಡ್’; ವಿಶ್ವಕಪ್​​ನ ಮ್ಯಾಚ್​ ವಿನ್ನರ್ಸ್​ ಆಗೋದು ಇವರೇ..!

https://newsfirstlive.com/wp-content/uploads/2023/09/Team_INDIA-3.jpg

Load More