Advertisment

ರಾಜ್ಯದಲ್ಲಿ ಬಾಣಂತಿಯರ ದುರಂತ.. ದಿಢೀರ್‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ; ಅಧಿಕಾರಿಗೆ ಹಿಗ್ಗಾಮುಗ್ಗ ತರಾಟೆ

author-image
Gopal Kulkarni
Updated On
ರಾಜ್ಯದಲ್ಲಿ ಬಾಣಂತಿಯರ ದುರಂತ.. ದಿಢೀರ್‌ ಸಭೆ ಕರೆದ ಸಿಎಂ ಸಿದ್ದರಾಮಯ್ಯ; ಅಧಿಕಾರಿಗೆ ಹಿಗ್ಗಾಮುಗ್ಗ ತರಾಟೆ
Advertisment
  • ಬಳ್ಳಾರಿ ಬಾಣಂತಿಯರ ಸಾವು ಪ್ರಕರಣ ಸಂಬಂಧ ಸಭೆ
  • ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಿಎಂ
  • ಮೃತರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಬಳ್ಳಾರಿಯಲ್ಲಿ ನಡೆದ ಬಾಣಂತಿಯರ ದುರಂತ ಅಂತ್ಯದ ಬಗ್ಗೆ ಸಿಎಂ ಸಿದ್ದರಾಮಯ್ಯ ಖಡಕ್ಕಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವಿಚಾರವಾಗಿ ಇಂದು ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಬೆವರಿಳಿಸಿದ್ದಾರೆ. ಸರಿಯಾಗಿ ವಿವರಣೆ ನೀಡದ ಅಧಿಕಾರಿ ವಿರುದ್ಧ ಗುಡುಗಿದ ಸಿಎಂ ಸಿದ್ದು, ನೀನೇನು ಮಹಾರಾಜಾನ ಎಂದು ಗುಡುಗಿದ್ದಾರೆ. ಕೆಲಸ ನಿರ್ವಹಿಸುವಾಗ ಎಚ್ಚರಿಕೆಯಿಂದ ಇರಬೇಕೆಂಬ ಪರಿಜ್ಞಾನವಿಲ್ಲವಾ ನಿಮಗೆ ಎಂದು ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ ಸಿಎಂ.

Advertisment

publive-image

ಮೊದಲೇ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಿರುಗಿ ಬೀಳುತ್ತಿವೆ. ನಿಮ್ಮನ್ನು ನಾವು ನೇಮಿಸಿರೋದು ಏಕೆ? ಸರಿಯಾಗಿ ಎಲ್ಲವನ್ನು ನಿರ್ವಹಣೆ ಮಾಡಲಿ ಅಂತ ತಾನೆ. ಈ ರೀತಿಯಾದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರೋದಿಲ್ವಾ? ನಮ್ಮ ಸರ್ಕಾರ ಇರೋದು ಬಡವರ, ದೀನ ದಲಿತರ ಪರವಾಗಿ ಬಡವರಿಗಾಗಿ ಉತ್ತಮ ಆರೋಗ್ಯ ಕೊಡಬೇಕು ಅದಕ್ಕೆ ತಾನೇ ನಮ್ಮ ಸರ್ಕಾರ ಅನುದಾನ ಇಟ್ಟಿರೋದು? ಎಂದು ಗುಡುಗಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಿಗೆ ಬರೋದೇ ಬಡವರು, ನಿರ್ಗತಿಕರು, ಕಷ್ಟದಲ್ಲಿರುವವರು. ಅವರ ಆರೋಗ್ಯ ನೋಡಿಕೊಳ್ಳಬೇಕಾಗಿದ್ದು ನಿಮ್ಮ ಕರ್ತವ್ಯ ಉತ್ತಮ ಸೌಲಭ್ಯಕ್ಕಾಗಿ ಹೆಚ್ಚಿನ ಅನುದಾನ ಇಟ್ಟಿದ್ದೇವೆ. ಪ್ರತಿ ಕ್ಯಾಬಿನೆಟ್​ನಲ್ಲೂ ಹಣ ಬಿಡಗಡೆ ಮಾಡ್ತೇವೆ. ನೀವು ತಿಂದುಂಡು ಚೆನ್ನಾಗಿ ಇರಲಿ ಅಂತನಾ? ಎಂದು ವೈದ್ಯಾಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ ಸಿದ್ದರಾಮಯ್ಯ. ಸಿಎಂ ಅವರ ಕಡುಗೋಪ ಕಂಡು ವೈದ್ಯಾಧಿಕಾರಿಗಳೇ ಥಂಡಾ ಹೊಡೆದಿದ್ದಾರೆ.

ಇದನ್ನೂ ಓದಿ:ಇವತ್ತೇ ನನ್ನ ಮದುವೆ ಆ್ಯನಿವರ್ಸರಿ ಸರ್​.. ಬಳ್ಳಾರಿಯಲ್ಲಿ ಬಾಣಂತಿ ದುರಂತಕ್ಕೆ ಪತಿಯ ಕಣ್ಣೀರು; ಆಗಿದ್ದೇನು?

ಕರ್ತವ್ಯಲೋಪವನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ ಡ್ರಗ್ ಕಂಟ್ರೋಲರ್​ನ್ನು ಸಸ್ಪೆಂಡ್ ಮಾಡಿದ್ದಾರೆ. ಇನ್ನು ಸಭೆ ಮುಗಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಲ್ಕು ಜನ ಬಾಣಂತಿಯರು ಸಾವನ್ನಪ್ಪಿದ್ದಾರೆ. ನಾವು ಎಕ್ಸ್​ಫರ್ಟ್​ ಕಮಿಟಿ ಮಾಡಿದ್ದೇವು. ರಾಜೀವ್ ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿಗಳ ಕಮಿಟಿ ಮಾಡಿದ್ದೇವು. ವಿಂಗರ್ ಲ್ಯಾಕ್ಟೇಟ್​ ದ್ರಾವಣ ಬಳಕೆಯಾಗಿದೆ. ಅದನ್ನು ಸರಬರಾಜು ಮಾಡಿದವರು ಪಶ್ಚಿಮ ಬಂಗಾಳದ ಫಾರ್ಮಾಸೆಟಿಕಲ್ಸ್​ನವರು. ಅದನ್ನು ಡ್ರಗ್ ಕಂಟ್ರೊಲರ್ ಸರಬರಾಜು ಮಾಡುತ್ತಾರೆ. ಈ ಕ್ಷಣದಿಂದಲೇ ಡ್ರಂಗ್​​ ಕಂಟ್ರೋಲರ್ ಸಸ್ಪೆಂಡ್​​ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಅದು ಮಾತ್ರವಲ್ಲ ಪಶ್ಚಿಮ ಬಂಗಾಳದ ಫಾರ್ಮಾಸೆಟ್ಯುಕಲ್ ಕಂಪನಿಯ್ನು ಬ್ಲಾಕ್ ಲಿಸ್ಟ್​ಗೆ ಸೇರಿಸುವಂತೆಯೂ ಸೂಚನೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Advertisment

ಇದನ್ನೂ ಓದಿ:ನಾವು ಸತ್ತಿಲ್ಲ, ಸೋತಿದ್ದೀವಿ ಅಷ್ಟೇ.. ಚನ್ನಪಟ್ಟಣದಲ್ಲಿ ಭಾವುಕರಾದ ನಿಖಿಲ್ ಕುಮಾರಸ್ವಾಮಿ; ಹೇಳಿದ್ದೇನು?

ಇನ್ನು ಸಾವನ್ನಪ್ಪಿದ ಬಾಣಂತಿಯರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ಕೊಡಿಸುತ್ತೇವೆ. ಆ ಕಂಪನಿಗಳಿಂದಲೂ ಪರಿಹಾರ ಕೊಡಿಸುತ್ತೇವೆ. ಕರ್ನಾಟಕ ಮೆಡಿಕಲ್ ಸಪ್ಲೈ ನವರಿಗೆ ನೋಟಿಸ್ ಕೊಡೋಕೆ ಹೇಳಿದ್ದೇನೆ. 192 ಕಂಪನಿಗಳು ಔಷಧಿಯನ್ನು ಪೂರೈಕೆಯನ್ನು ಮಾಡುತ್ತವೆ. ಡ್ರಂಗ್ ಕಂಟ್ರೋಲ್ ಬೋರ್ಡ್ ಸ್ಟ್ರಕಚ್ಚರ ಮಾಡುವಂತೆ ಹೇಳಿದ್ದು. ಒಂದು ಕಮಿಟಿ ರಚನೆ ಮಾಡುತ್ತೇವೆ. ಬಳ್ಳಾರಿ ಜಿಲ್ಲಾ ಸರ್ಜನ್​ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ರವಾನಿಸಿದ್ದೇವೆ. ಸರ್ಜರಿ ಮಾಡಿದ್ದ ವೈದ್ಯರ ತಪ್ಪಿಲ್ಲ ಎಂದು ತಿಳಿದು ಬಂದಿದೆ. ಅವರಿಗೂ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆವಹಿಸಲು ಸೂಚನೆ ಕೊಟ್ಟಿದ್ದೇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment