/newsfirstlive-kannada/media/post_attachments/wp-content/uploads/2024/11/BELLARY-BANANTIYARU.jpg)
ಬಳ್ಳಾರಿ ಜಿಲ್ಲೆಯಲ್ಲಿ ಆಗುತ್ತಿರುವ ಬಾಣಂತಿಯರ ಸಾವು ಈಗ ದೊಡ್ಡ ಸುದ್ದಿಯಾಗಿದೆ. ಇದೇ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರು ಇಂದು ಸಭೆ ಕೂಡ ನಡೆಸಿ ಮಾಹಿತಿಯನ್ನು ಪಡೆಯುವವರಿದ್ದಾರೆ. ಬಳ್ಳಾರಿಯ ಜಿಲ್ಲಾಸ್ಪತ್ರೆಯಲ್ಲಿಯೇ ಕೇವಲ 15 ದಿನಗಳಲ್ಲಿ ಐವರು ಬಾಣಂತಿಯರು ಸಾವನ್ನಪ್ಪಿದ್ದು ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಹೀಗೆಯೇ ಜೀವ ಕಳೆದುಕೊಂಡ ಮೃತ ಬಾಣಂತಿ ಮುಸ್ಕಾನ್ ಕುಟುಂಬ ನ್ಯೂಸ್​ಫಸ್ಟ್ ಎದುರು ತನ್ನ ಅಳಲು ತೋಡಿಕೊಂಡಿದೆ.
ಇವತ್ತೇ ನನ್ನ ಮದುವೆ ವಾರ್ಷಿಕೋತ್ಸವ ಇತ್ತು, ಜಗತ್ತು ಅರಿಯದ ನನ್ನ ಕಂದನಿಗೆ ನಾಳೆ ಏನೇಂದು ಉತ್ತರ ಹೇಳಲಿ, ವೈದ್ಯರು ನೋಡಿದ್ರೆ ಮುಸ್ಕಾನ್​ಗೆ ಕಿಡ್ನಿ ಸಮಸ್ಯೆಯಿತ್ತು, ಹೀಗಾಗಿಯೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳುತ್ತಾರೆ. ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಚೆಕಪ್​ ಮಾಡಿಸಿದ್ದಾಗ ಯಾವ ಸಮಸ್ಯೆಯೂ ಇಲ್ಲವೆಂದು ಹೇಳಿದ್ದರು. ಇವರು ಈಗ ಹೀಗೆ ಹೇಳುತ್ತಿದ್ದಾರೆ ಎಂದು ಮುಸ್ಕಾನ್ ಪತಿ ದಾದಾಪೀರ್ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ವಿಚಿತ್ರ ಪ್ರಕರಣ.. ಬೆಕ್ಕಿಗೆ ಮುಖ, ಮೂತಿ ನೋಡದೇ ಹೊಡೆದ ರೂಮ್‌ಮೇಟ್; ಆಮೇಲೇನಾಯ್ತು?
ಸಿಜೆರಿಯನ್ ಮೂಲಕ ಮುಸ್ಕಾನ್​ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಏಕಾಏಕಿ ಆರರೋಗ್ಯದಲ್ಲಿ ಏರುಪೇರು ಅಂತ ವೈದ್ಯರು ಹೇಳಿದ್ದಾರೆ. ನಾವು ಖಾಸಗಿ ಆಸ್ಪತ್ರೆಗೆ ಶಿರ್ಫಟ್ ಮಾಡಿ ಅಂತ ಮನವಿ ಮಾಡಿದ್ವಿ. ಮುಸ್ಕಾನ್​ಗೆ ವಿಮ್ಸ್​ಗೆ ಕಳಿಸಿದ್ರು ಡಯಾಲಿಸಿಸ್ ಸಮಸ್ಯೆ ಇತ್ತು ಎಂದು ಹೇಳಿದ್ರು ಅಂತ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/11/BELLARY-BANANTIYARU-1.jpg)
ನವೆಂಬರ್​ 10 ರಂದು ಮುಸ್ಕಾನ್​ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. 11ನೇ ತಾರೀಖು ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಮುಸ್ಕಾನ್. ವಿಮ್ಸ್​​ಗೆ ಹೋದ ಬಳಿಕ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ವಿ. ಸಾಲ ಸೋಲ ಮಾಡಿ 6.5 ಲಕ್ಷ ರೂಪಾಯಿ ಬಿಲ್​ ಕಟ್ಟಿದ್ದೇವೆ. ಇನ್ನೂ ಒಂದೂವರೆ ಲಕ್ಷ ರೂಪಾಯಿ ಕಟ್ಟುವುದು ಬಾಕಿ ಇದೆ. ನವೆಂಬರ್ 26 ರಂದು ಮುಸ್ಕಾನ್ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾಳೆ. ಮುಸ್ಕಾನ್ ಸಾವಿಗೆ ನ್ಯಾಯ ಸಿಗಬೇಕು. ಮುಂದೆ ಯಾರಿಗೂ ಕೂಡ ಇಂತಹ ನೋವು ಉಂಟಾಗಬಾರದು ಎಂದು ಮುಸ್ಕಾನ್ ಕುಟುಂಬಸ್ಥರು ಆಗ್ರಹಿಸಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us