newsfirstkannada.com

IND vs AUS T20 ಸರಣಿ.. 15 ಪ್ಲೇಯರ್ಸ್ ಹೆಸರು ಅನೌನ್ಸ್ ಮಾಡಿದ ಆಸಿಸ್​; ರೋಚಕ ಹಣಾಹಣಿ ನಡೆಯೋದು ಎಲ್ಲಿ?

Share :

28-10-2023

  ಮ್ಯಾಕ್ಸ್​ವೆಲ್,​ ಡೇವಿಡ್ ವಾರ್ನರ್, ಸ್ಟಿವ್ ಸ್ಮಿತ್ ತಂಡದಲ್ಲಿ ಇದ್ದಾರಾ?

  ವಿಶ್ವಕಪ್​ ಟೂರ್ನಿ ಮುಗಿದ ಬೆನ್ನಲ್ಲೇ ಭಾರತ-ಆಸ್ಟ್ರೇಲಿಯಾ ಸರಣಿ

  ಭಾರತ-ಆಸಿಸ್ ನಡುವಿನ ಮೊದಲ T20 ಪಂದ್ಯ ನಡೆಯುವುದೆಲ್ಲಿ?

ಸದ್ಯ ವಿಶ್ವಕಪ್​ ಪಂದ್ಯಗಳು ನಡೆಯುತ್ತಿದ್ದು ಭಾರತ ಸೇರಿ 10 ತಂಡಗಳು ವಿಶ್ವಕಪ್​ಗಾಗಿ ಸೆಣಸಾಟ ನಡೆಸುತ್ತಿವೆ. ಈ ವಿಶ್ವಕಪ್​ ಟೂರ್ನಿ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ತವರಿನಲ್ಲಿ ಆಸ್ಟ್ರೇಲಿಯಾ ಜೊತೆ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈಗಾಗಲೇ ಈ ಸರಣಿಗಾಗಿ ಆಸಿಸ್​ ತಂಡದ ಪ್ಲೇಯರ್ಸ್​ ಹೆಸರನ್ನು ಅನೌನ್ಸ್ ಮಾಡಲಾಗಿದೆ.

ಆಸ್ಟ್ರೇಲಿಯಾ ಒಟ್ಟು 15 ಆಟಗಾರರ ಹೆಸರನ್ನು ಟಿ20 ಸರಣಿಗೆ ಅನೌನ್ಸ್ ಮಾಡಿದ್ದು ಸದ್ಯ ಈಗ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ ತಂಡದಲ್ಲಿರುವ 8 ಪ್ಲೇಯರ್ಸ್ ಭಾರತದಲ್ಲೇ ಉಳಿದುಕೊಳ್ಳಲಿದ್ದಾರೆ. ಉಳಿದ ಆಟಗಾರರು ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳಸಲಿದ್ದಾರೆ. ಬ್ಯಾಟ್ಸ್​ಮನ್​ ಮ್ಯಾಥ್ಯೂ ವೇಡ್ ಅವರನ್ನು ಕ್ಯಾಪ್ಟನ್ ಆಗಿ ಘೋಷಣೆ ಮಾಡಲಾಗಿದ್ದು ಅನುಭವಿ ಆಟಗಾರರಾದ ಡೇವಿಡ್ ವಾರ್ನರ್, ಸ್ಮಿತ್, ಟ್ರಾವಿಸ್ ಹೆಡ್, ಮ್ಯಾಕ್ಸ್​ವೆಲ್,​ ಮಾರ್ಕಸ್​ ಸ್ಟೋನೀಸ್, ಜಂಪಾ, ಜೋಶ್ ಇಂಗ್ಲಿಷ್, ಸೀನ್ ಅಬಾಟ್ ಹಾಗೂ ತನ್ವೀರ್ ಇಲ್ಲೇ ಉಳಿದುಕೊಂಡು ಟಿ20 ಸರಣಿಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಹೇಳಲಾಗಿದೆ.

ಭಾರತ ಯಾವ ಪ್ಲೇಯರ್ಸ್ ಹೆಸರನ್ನ ಘೋಷಿಸಿಲ್ಲ..! 

ನವೆಂಬರ್ 19 ರಂದು ವಿಶ್ವಕಪ್ ಟೂರ್ನಿ ಮುಗಿದ ಬೆನ್ನಲ್ಲೇ ಅಂದರೆ ನವೆಂಬರ್ 23 ರಂದು 5 ಪಂದ್ಯಗಳ ಟಿ20 ಸರಣಿ ಪ್ರಾರಂಭವಾಗಲಿದೆ. ಮೊದಲ ಪಂದ್ಯ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆಯಲಿದೆ. ಆದರೆ ಈ ಬಗ್ಗೆ ಭಾರತ ಮಾತ್ರ ಇನ್ನು ಯಾವ ಪ್ಲೇಯರ್ಸ್ ಹೆಸರನ್ನು ಘೋಷಣೆ ಮಾಡಿಲ್ಲ. ಶೀಘ್ರದಲ್ಲೇ ಮಾಡುವ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ.

ಮ್ಯಾಥ್ಯೂ ವೇಡ್ ಟಿ20 ಸರಣಿಗೆ ಕ್ಯಾಪ್ಟನ್ ಆಗಿದ್ದು ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಅವರನ್ನು ತಂಡಕ್ಕೆ ಸೇರಿಕೊಳ್ಳಲಾಗಿದೆ. ಗಾಯದ ಕಾರಣ ಆಷ್ಟನ್ ಅಗರ್​ರನ್ನು ಪರಿಗಣಿಸಿಲ್ಲ. ಆಲ್ ರೌಂಡರ್‌ಗಳಾದ ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಮಾರ್ಷ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜೋಶ್ ಹಜಲ್‌ವುಡ್ ಆಸ್ಟ್ರೇಲಿಯಾದಲ್ಲಿ ನಡೆಯುವ ಟೆಸ್ಟ್​ಗೆ ಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.

T20I ಸರಣಿಗೆ ಆಸ್ಟ್ರೇಲಿಯಾ ತಂಡ

ಮ್ಯಾಥ್ಯೂ ವೇಡ್ (ಕ್ಯಾಪ್ಟನ್), ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೋನಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇಸನ್ ಬೆಹ್ರೆಂಡಾರ್ಫ್, ಸೀನ್ ಅಬಾಟ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಷ್, ಸ್ಪೆನ್ಸರ್ ಜಾನ್ಸನ್, ಆ್ಯಡಂ ಝಂಪಾ, ತನ್ವೀರ್, ಮ್ಯಾಟ್ ಶಾರ್ಟ್.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

IND vs AUS T20 ಸರಣಿ.. 15 ಪ್ಲೇಯರ್ಸ್ ಹೆಸರು ಅನೌನ್ಸ್ ಮಾಡಿದ ಆಸಿಸ್​; ರೋಚಕ ಹಣಾಹಣಿ ನಡೆಯೋದು ಎಲ್ಲಿ?

https://newsfirstlive.com/wp-content/uploads/2023/10/AUS_IND_T20.jpg

Load More