newsfirstkannada.com

‘ಬಾಂಬೆ ಟೀಂ’ ಕಾಂಗ್ರೆಸ್​ಗೆ ವಾಪಸ್ಸಾದ್ರೆ ಸಾಹುಕಾರನ ನಿರ್ಧಾರವೇನು..? ಇಲ್ಲಿದೆ ಮಾಹಿತಿ

Share :

17-08-2023

  ರಾಜ್ಯ ರಾಜಕಾರಣದಲ್ಲಿ ‘ಬಾಂಬೆ ಟೀಂ’ ಮತ್ತೆ ಸುದ್ದಿ

  ಜಾರಕಿಹೊಳಿ ಬಿಜೆಪಿಯಲ್ಲಿರ್ತಾರಾ? ಕಾಂಗ್ರೆಸ್​ಗೆ ಹೋಗ್ತಾರಾ?

  ಸಾಹುಕಾರ-ಬಿ.ಎಲ್.ಸಂತೋಷ್​​ ಭೇಟಿ ಹಿಂದಿನ ರಹಸ್ಯವೇನು?

ರಾಜ್ಯ ರಾಜಕಾರಣದಲ್ಲಿ ‘ಬಾಂಬೆ ಟೀಂ’ ಮತ್ತೆ ಸುದ್ದಿಯಲ್ಲಿದೆ. ಈ ಹಿಂದೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಅವಧಿಯಲ್ಲಿ ಕೈಕೊಟ್ಟು ಬಿಜೆಪಿ ಸೇರಿದ್ದ ಕೆಲವು ನಾಯಕರು ವಾಪಸ್ ಕಾಂಗ್ರೆಸ್​ ಸೇರುತ್ತಾರೆ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ.

ಈ ಚರ್ಚೆ ಶುರುವಾದ ಬೆನ್ನಲ್ಲೇ, ಅಂದು ಮೈತ್ರಿ ಸರ್ಕಾರ ಬೀಳಲು ಪ್ರಮುಖ ಪಾತ್ರವಹಿಸಿದ್ದ ಬೆಳಗಾವಿಯ ಸಾಹುಕಾರ ರಮೇಶ್ ಜಾರಕಿಹೊಳಿಯೂ ಕಾಂಗ್ರೆಸ್​ಗೆ ವಾಪಸ್ ಹೋಗ್ತಾರಾ ಎಂಬ ಚರ್ಚೆ ಎದ್ದಿದೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ನಿರ್ಧಾರವೇನು? ಬಿಜೆಪಿಯಲ್ಲೇ ಇರುತ್ತಾರಾ? ಅಥವಾ ಘರ್​ ವಾಪ್ಸಿ ಆಗ್ತಾರಾ ಎಂಬ ಪ್ರಶ್ನೆಗಳು ಎದ್ದಿವೆ.

ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಸೇರ್ಪಡೆಯನ್ನ ತಳ್ಳಿಹಾಕಿದ್ದಾರೆ. ಬಿಜೆಪಿಯಲ್ಲಿದ್ದು ಪಕ್ಷ ಸಂಘಟನೆ ಮಾಡಿ ಮತ್ತೆ ಅಧಿಕಾರಕ್ಕೆ ತರೋದು ಅವರ ಗುರಿಯಾಗಿದೆ, ಬಿಜೆಪಿಯನ್ನ ಮತ್ತೆ ಅಧಿಕಾರಕ್ಕೆ ತರುವುದಕ್ಕೆ ತಯಾರಿ ನಡೆಸಿದ್ದಾರಂತೆ. ಇದರ ಮುಂದುವರಿದ ತಯಾರಿಯಾಗಿ ಇತ್ತೀಚಿಗೆ ಬಿಜೆಪಿ ಸಂಘಟನಾ ಪ್ರಧಾನಕಾರ್ಯದರ್ಶಿ ಬಿ.ಎಲ್. ಸಂತೋಷ್​ರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಜಾರಕಿಹೊಳಿ ಬಿಜೆಪಿಯಲ್ಲೇ ಉಳಿಯಲು ಕಾರಣಗಳು

 • ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಂತರ ಉತ್ತಮ ಸ್ಥಾನಮಾನ, ಗೌರವ
 • ಪಕ್ಷ ನಿಷ್ಠೆಯಿಂದ ಸಂಘಟನೆ ಮಾಡಿದ್ರೆ ಬಿಜೆಪಿಯಲ್ಲೇ ಉತ್ತಮ ಭವಿಷ್ಯ
 • ಬಿಟ್ಟು ಬಂದ ಕಾಂಗ್ರೆಸ್ ಪಕ್ಷವನ್ನೇ ಮತ್ತೆ ಸೇರಿದರೆ ಗೌರವವೂ ಸಿಗೋದಿಲ್ಲ
 • ರಾಜಕೀಯ ವಿರೋಧಿಗಳಾದ ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಕೆ. ಶಿವಕುಮಾರ್ ಪ್ರಾಬಲ್ಯ
 • ರಾಜಕೀಯ ಕಡು ವಿರೋಧಿಗಳನ್ನ ಎದುರಿಸಲು ಬಿಜೆಪಿ ಸೂಕ್ತವೆಂಬ ತೀರ್ಮಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಬಾಂಬೆ ಟೀಂ’ ಕಾಂಗ್ರೆಸ್​ಗೆ ವಾಪಸ್ಸಾದ್ರೆ ಸಾಹುಕಾರನ ನಿರ್ಧಾರವೇನು..? ಇಲ್ಲಿದೆ ಮಾಹಿತಿ

https://newsfirstlive.com/wp-content/uploads/2023/08/RAMESH.jpg

Load More