newsfirstkannada.com

ಇನ್ಮುಂದೆ ಸೈಬರ್ ದಾಳಿ ತಡೆಗೆ ‘ಮಾಯಾ OS’ ಚಕ್ರವ್ಯೂಹ; ಭಾರತದ ರಕ್ಷಣಾ ಇಲಾಖೆಯ ಮಾಸ್ಟರ್‌ ಪ್ಲಾನ್ ಏನು?

Share :

10-08-2023

    ಸೈಬರ್ ದಾಳಿ‌ ತಡೆಗಟ್ಟಲು ಭಾರತದ ಡಿಫೆನ್ಸ್‌ನಿಂದ ದಿಟ್ಟ ಕ್ರಮ

    ಮೈಕ್ರೋಸಾಫ್ಟ್ ವಿಂಡೋಸ್ ಬದಲಾಯಿಸಿ‌ ಸ್ವದೇಶಿ ಮಾಯಾ OS

    ಚೀನಾ ಹ್ಯಾಕರ್‌ ದಾಳಿ ತಡೆಗಟ್ಟಲು ರಕ್ಷಣಾ ಇಲಾಖೆ ಚಕ್ರವ್ಯೂಹ

ನವದೆಹಲಿ: ಭಾರತದ ರಕ್ಷಣಾ ಇಲಾಖೆಯಲ್ಲಿ ಸೈಬರ್ ದಾಳಿ‌ಯನ್ನು ತಡೆಗಟ್ಟಲು ದಿಟ್ಟ ಕ್ರಮ ಕೈಗೊಳ್ಳಲಾಗ್ತಿದೆ. ವಿದೇಶದ ಮೈಕ್ರೋಸಾಫ್ಟ್ ವಿಂಡೋಸ್ ಬದಲಾಯಿಸಿ‌ ಸ್ವದೇಶಿ ಮಾಯಾ OS ಆಪರೇಟಿಂಗ್ ಸಿಸ್ಟಮ್ ಅಳವಡಿಸಲಾಗುತ್ತಿದೆ. ಈ ಮಾಯಾ ಓಎಸ್‌ನಿಂದ ಸೈಬರ್ ದಾಳಿಯ ವಿರುದ್ಧ ಮಹತ್ವದ ರಕ್ಷಣೆ ಸಿಗಲಿದ್ದು, ಸದ್ಯದಲ್ಲೇ ಭಾರತದ ಸಶಸ್ತ್ರ ಪಡೆಗಳ ಕಂಪ್ಯೂಟರ್‌ಗಳಲ್ಲಿ ಮಾಯಾ ಓಎಸ್ ಅಳವಡಿಸಲಾಗುತ್ತಿದೆ.

ಇಲ್ಲಿಯವರೆಗೂ ಭಾರತದ ರಕ್ಷಣಾ ಸಚಿವಾಲಯದ ಸಿಸ್ಟಮ್‌ಗಳನ್ನು ಹ್ಯಾಕ್ ಮಾಡುವ ಭೀತಿ ಇತ್ತು. ಸೈಬರ್‌ ಹ್ಯಾಕರ್‌ಗಳು ರಕ್ಷಣಾ ಸಚಿವಾಲಯದ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡುವ ಸಮಸ್ಯೆಯನ್ನು ಎದುರಿಸಲು ರಕ್ಷಣಾ ಸಚಿವಾಲಯ ಮುಂದಾಗಿದೆ. ಹೀಗಾಗಿ ವಿದೇಶದ ಮೈಕ್ರೋಸಾಫ್ಟ್‌ ಆಪರೇಟಿಂಗ್ ಸಿಸ್ಟಮ್ ಅನ್ನೇ ಕೈ ಬಿಡಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಾಯಾ ಎಂಬ ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಅನ್ನೇ ಅಳವಡಿಸಲು ತೀರ್ಮಾನಿಸಲಾಗಿದೆ.

‘ಆಗಸ್ಟ್ 15ರ ಒಳಗೆ ಮಾಯಾ ಪ್ರಯೋಗ’

ಇತ್ತೀಚೆಗೆ ಸೈಬರ್ ಹ್ಯಾಕರ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಭಾರತದ ರಕ್ಷಣಾ ವಲಯದ ಮೇಲೆ ಚೀನಾ ಹ್ಯಾಕರ್‌ಗಳ ಕಣ್ಗಾವಲು ಇರುವ ಸಂಶಯ ವ್ಯಕ್ತವಾಗಿತ್ತು. ಮಾಯಾ OSನಲ್ಲಿ ಭಾರತದ ಪುರಾತನ ಕಾಲದ ಚಕ್ರವ್ಯೂಹ ಮಾದರಿಯನ್ನು ಅಳವಡಿಸಲಾಗುತ್ತಿದೆ. ಇದು ಸೈಬರ್ ದಾಳಿ ತಡೆಗೆ ಹೆಣೆಯುವ ಬಲೆಯಾಗಿದೆ. ಅಂದ್ರೆ ಚಕ್ರವ್ಯೂಹದ ಮಾದರಿಯಲ್ಲಿ ಮಾಯಾ ಒಎಸ್ ಕಾರ್ಯ ನಿರ್ವಹಣೆ ಮಾಡಲಿದೆ. ಇದೇ ಆಗಸ್ಟ್ 15ರ ಒಳಗೆ ಮಾಯಾ ಒಎಸ್ ಅನ್ನು ಪ್ರಾಯೋಗಿಕವಾಗಿ ಬಳಸಿಕೊಂಡು ಈ ವರ್ಷದ ಅಂತ್ಯದೊಳಗೆ ಭಾರತದ ಸೇನೆ, ನೌಕಾಪಡೆ, ವಾಯುಪಡೆ ಈ ಮಾಯಾ ಓಎಸ್ ಅನ್ನು ಅಳವಡಿಸಿಕೊಳ್ಳುತ್ತಿದೆ. ಇದರಿಂದ ಸೈಬರ್ ದಾಳಿಯಿಂದ ತಪ್ಪಿಸಿಕೊಳ್ಳಲು ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಮುಂದೆ ಸೈಬರ್ ದಾಳಿ ತಡೆಗೆ ‘ಮಾಯಾ OS’ ಚಕ್ರವ್ಯೂಹ; ಭಾರತದ ರಕ್ಷಣಾ ಇಲಾಖೆಯ ಮಾಸ್ಟರ್‌ ಪ್ಲಾನ್ ಏನು?

https://newsfirstlive.com/wp-content/uploads/2023/08/MAYA-OS.jpg

Load More