newsfirstkannada.com

ಕಾಂಗ್ರೆಸ್​​ಗೆ ಬಿಗ್​ ಶಾಕ್ ಕೊಟ್ಟ ಬಿಎಸ್​​ಪಿ​​; ಮಾಯಾವತಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಂತೆ ಪಟ್ಟು

Share :

09-07-2023

  ಲೋಕಸಭಾ ಚುನಾವಣೆ ಗೆಲ್ಲಲು ಮುಂದಾಗಿದ್ದ ಕಾಂಗ್ರೆಸ್​

  ಕಾಂಗ್ರೆಸ್​​ಗೆ ಬಿಗ್​ ಶಾಕ್​ ಕೊಟ್ಟ ಬಹುಜನ ಸಮಾಜ ಪಕ್ಷ..!

  ಮಾಯಾವತಿಯವರೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ

ಲಕ್ನೋ: ಇತ್ತೀಚೆಗೆ ನಡೆದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಂಡ ಗೆಲುವು ಸಾಧಿಸಿ ಕಾಂಗ್ರೆಸ್​​ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಮೇಲೆ ಚುನಾವಣೆಗೆ ಮುನ್ನ ನೀಡಿದ ಭರವಸೆ ಹಾಗೇ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾಗಿದೆ. ಇದೇ ಗ್ಯಾರಂಟಿಗಳನ್ನು ಮುಂದಿಟ್ಟು ಲೋಕಸಭಾ ಚುನಾವಣೆ ಗೆಲ್ಲಲು ಕಾಂಗ್ರೆಸ್​ ಪ್ಲಾನ್​ ಮಾಡಿಕೊಂಡಿದೆ. ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ವಿರುದ್ಧ ಕೇಂದ್ರದ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡುತ್ತಿದೆ. ಇದರ ಜವಾಬ್ದಾರಿ ಕಾಂಗ್ರೆಸ್​ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೆಗಲಿಗೆ ಕೊಟ್ಟಿದೆ. ಈ ಮಧ್ಯೆ ಕಾಂಗ್ರೆಸ್​ಗೆ ಬಿಎಸ್​​ಪಿ ಶಾಕ್​ ಕೊಟ್ಟಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗಬೇಕು ಎಂದು ಬಯಸಿವೆ. ಇದಕ್ಕೆ ಅಡಿಪಾಯ ಸಿದ್ಧಪಡಿಸಲು ಪ್ರತಿಪಕ್ಷಗಳ ನಾಯಕರು ವಿವಿಧ ರಾಜ್ಯಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಹಲವಾರು ಸುತ್ತಿನ ಸಭೆ ಬಳಿಕವೂ ವಿಪಕ್ಷಗಳ ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿ ಯಾರು? ಎಂದು ಅಂತಿಮವಾಗಿಲ್ಲ. ಹೀಗಾಗಿ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರೇ 2024ರ ಲೋಕಸಭೆ ಚುನಾವಣೆಗೆ ಪ್ರಧಾನಿ ಅಭ್ಯರ್ಥಿ ಆಗಬೇಕು ಎಂದು ಬಿಎಸ್‌ಪಿ ಹಿರಿಯ ನಾಯಕ ಭೀಮರಾವ್ ಅಂಬೇಡ್ಕರ್ ಹೇಳಿದ್ದಾರೆ.

ನಾವು ಇನ್ನೂ ಯಾರೊಂದಿಗೂ ಮೈತ್ರಿ ಮಾಡಿಕೊಂಡಿಲ್ಲ. ಬಿಎಸ್‌ಪಿ ಯಾವ ರಾಜಕೀಯ ಪಕ್ಷಗಳ ಅನುಯಾಯಿ ಅಲ್ಲ. ನಮಗೆ ನಮ್ಮದೇ ಸಿದ್ಧಾಂತ ಇದೆ, ಕೇಡರ್ ಬೇಸ್​ ಕೂಡ ಇದೆ. ಮಾಯಾವತಿ ಅವರು ರಾಷ್ಟ್ರೀಯ ನಾಯಕಿ, ಸಮರ್ಥ ಆಡಳಿತಗಾರ್ತಿ ಎಂದರು.

ಕಾಂಗ್ರೆಸ್​ಗೆ ಶಾಕ್​ ಕೊಟ್ಟ ಬಿಎಸ್​​ಪಿ

ಕಾಂಗ್ರೆಸ್​ ಜತೆಗೆ ಬಿಎಸ್‌ಪಿ ಕೈ ಜೋಡಿಸಬೇಕು ಎಂದರೆ ಮಾಯಾವತಿ ಅವರು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು. ಇಲ್ಲದೆ ಹೋದಲ್ಲಿ ನಾವು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿ ಹೋರಾಟ ಮಾಡಲಿದ್ದೇವೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಂಗ್ರೆಸ್​​ಗೆ ಬಿಗ್​ ಶಾಕ್ ಕೊಟ್ಟ ಬಿಎಸ್​​ಪಿ​​; ಮಾಯಾವತಿ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಂತೆ ಪಟ್ಟು

https://newsfirstlive.com/wp-content/uploads/2023/07/Mayawati_Sonia.jpg

Load More