newsfirstkannada.com

ಜನಸಮ್ಮುಖದಲ್ಲಿ ಅಲಿಗೇಟರನ್ನು ವಿವಾಹವಾದ ಮೇಯರ್​.. ಇದು ಲವ್​​ ಅಂತೆ!

Share :

02-07-2023

    ಅಯ್ಯೋ.. ಸಾಂಪ್ರದಾಯಿಕವಾಗಿ ಅಲಿಗೇಟರನ್ನು ವರಿಸಿದ ಮೇಯರ್​

    ಎಲ್ಲರ ಸಮ್ಮುಖದಲ್ಲಿ ಅಲಿಗೇಟರ್​ ಜೊತೆಗೆ ಮೇಯರ್​ ವಿವಾಹ

    ಮದುಮಗಳಂತೆ ಸಿಂಗರಿಸಿದ ಅಲಿಗೇಟರ್​ ಜತೆ ಮೇಯರ್​ ಮದುವೆ

ಒಂದೊಂದು ದೇಶವು ಒಂದೊಂದು ಸಂಸ್ಕೃತಿ, ಸಂಪ್ರದಾಯವನ್ನು ಹೊಂದಿರುತ್ತದೆ. ಅದರಂತೆಯೇ ಭಾರತದಲ್ಲಿ ಕಪ್ಪೆಗಳಿಗೆ ಮದುವೆ, ಕತ್ತೆಗಳಿಗೆ ಮದುವೆ, ಶ್ವಾನಗಳಿಗೆ ಮದುವೆ ಮಾಡಿರುವ ಸಂಗತಿಯನ್ನ ಕೇಳಿರಬಹುದು. ಅಷ್ಟೇ ಏಕೆ ಮನುಷ್ಯನಿಗೆ ಪ್ರಾಣಿ ಜತೆ ಮದುವೆ ಮಾಡಿರುವ ಸಂಗತಿಯನ್ನು ನೋಡಿರಬಹುದು. ವಿದೇಶಗಳಲ್ಲಿಯೂ ಇಂತಹ ಸಂಸ್ಕೃತಿ ಇದೆ. ಮೆಕ್ಸಿಕೋದಲ್ಲಿ ಮೇಯರ್​ವೊಬ್ಬರು ಅಲಿಗೇಟರ್​​ ಅನ್ನು ವಿವಾಹವಾಗಿರುವ ಘಟನೆ ಬೆಳಕಿಗೆ ಬಂದಿದೆ.

ಮೆಕ್ಸಿಕೋದ ಸ್ಯಾನ್​ ಪೆಟ್ರೋ ಹುವಾಮೆಲುಲಾದಲ್ಲಿ ಮೇಯರ್​ ವಿಕ್ಟರ್​ ಹ್ಯೂಗೋ ಸೋಸಾ ಎಂಬವರು ಅಲಿಗೇಟರ್​ ಅನ್ನು ವಿವಾಹವಾಗಿದ್ದಾರೆ. ಇದೊಂದು ಸಾಂಪ್ರದಾಯಿಕ ವಿಧಾನವಾಗಿದ್ದು, ಹಾಗಾಗಿ ಜನರ ಸಮ್ಮುಖದಲ್ಲಿ ಅಲಿಗೇಟರ್​ ಅನ್ನು ಮದುಮಗಳಂತೆ ಸಿಂಗರಿಸಿ ವಿವಾಹವಾಗಿದ್ದಾರೆ.

ಅಂದಹಾಗೆಯೇ ಮೇಯರ್​ ವಿಕ್ಟರ್​ ಹ್ಯೂಗೋ ಸೋಸಾ ಅಲಿಗೇಟರ್​ ಅನ್ನು ವಿವಾಹವಾಗಲು ಕಾರಣವೊಂದಿದೆ. ಜನರಿಗೆ ಅದೃಷ್ಟವನ್ನು ತಂದುಕೊಡುತ್ತದೆ ಎಂಬ ನಂಬಿಕೆಯ ಆಧಾರದ ಮೇಲೆ ಮೇಯರ್​ ಅಲಿಗೇಟನ್ನು ವಿವಾಹವಾಗಿದ್ದಾರೆ.

ಅಲಿಗೇಟರ್​ ಅನ್ನು ವಿವಾಹವಾದ ಬಳಿಕ ಮೇಯರ್​ ವಿಕ್ಟರ್​ ಹ್ಯೂಗೋ ಸೋಸಾ ಮಾತನಾಡಿದ್ದು, ‘‘ನಾವು ಒಬ್ಬರನ್ನೊಬ್ಬರು ಪ್ರೀತಿಸುವ ಕಾರಣ ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದೇನೆ. ನಾನು ರಾಜಕುಮಾರಿಯನ್ನು ವಿವಾಹವಾಗುತ್ತಿದ್ದೇನೆ’’ ಎಂದು ಹೇಳಿದ್ದಾರೆ.

ಸದ್ಯ ಮೇಯರ್​ ವಿಕ್ಟರ್​ ಹ್ಯೂಗೋ ಸೋಸಾ ಅವರು ಮದುಮಗಳಂತೆಯೇ ಸಿಂಗರಿಸಿದ ಅಲಿಗೇಟರ್​ ಅನ್ನು ವಿವಾಹವಾದ ದೃಶ್ಯ ಮತ್ತು ಅದಕ್ಕೆ ಮುತ್ತಿಕ್ಕುವ ದೃಶ್ಯ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜನಸಮ್ಮುಖದಲ್ಲಿ ಅಲಿಗೇಟರನ್ನು ವಿವಾಹವಾದ ಮೇಯರ್​.. ಇದು ಲವ್​​ ಅಂತೆ!

https://newsfirstlive.com/wp-content/uploads/2023/07/Alligator-Marriage.jpg

Load More