newsfirstkannada.com

BL ಸಂತೋಷ್ ಬುಟ್ಟಿಯಲ್ಲಿ ಚೇಳುಗಳೇ ಜಾಸ್ತಿ ಇವೆ; ಪ್ರತಾಪ್​ ಸಿಂಹರನ್ನು ಚೇಲಾಗೆ ಹೋಲಿಸಿದ M B ಪಾಟೀಲ್​

Share :

20-06-2023

    ಸಿದ್ದರಾಮಯ್ಯರಿಗಿಂತಲೂ ಮೊದಲೇ ನಾವು ಕಾಂಗ್ರೆಸ್​ನಲ್ಲಿ ಇರೋರು

    ನಾನು ಕಾಂಗ್ರೆಸ್ ‌ಪಕ್ಷದ ಚೇಲಾ ಎಂದ ಸಚಿವ ಎಂ ಬಿ ಪಾಟೀಲ್​

    ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ಗೊತ್ತಿರಬೇಕು ಎಂದ ಸಚಿವ

ಪ್ರತಾಪ್ ಸಿಂಹಗೆ ಚೇಲಾಗಿರಿ ಮಾಡಿ ಗೊತ್ತಿರಬೇಕು. ಇವರು ಚೇಲಾ ಅಂತಾರೆ, ಬಿ. ಎಲ್ ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ಇಂಥಾ ಚೇಳುಗಳೇ ಬಹಳ ಇರಬೇಕು. ಇವತ್ತು ಅವರಿಗೆ ಕಡಿಯಿರಿ, ನಾಳೆ ಇವರಿಗೆ ಕಡಿಯಿರಿ ಅಂತ ಸಂತೋಷ್ ಚೇಳು ಬಿಡ್ತಾರೆ ಅನಿಸುತ್ತದೆ. ಪ್ರತಾಪ್ ಸಿಂಹ ಅವರಿಗೆ ಸದ್ಬುದ್ಧಿ ಕೊಡಲಿ ಎಂದು ಬೃಹತ್​ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.​

‘ಹೊಡೆಯೋದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ’

ಸಂಸದ ಪ್ರತಾಪ್​ ಸಿಂಹ ಅವರು ಎಂಬಿ ಪಾಟೀಲ್ ಸಿದ್ದರಾಮಯ್ಯ ಚೇಲಾ ಎಂದು ಹೇಳಿರುವ ಹೇಳಿಕೆಯ ವಿಚಾರವಾಗಿ ಎಂ.ಬಿ ಪಾಟೀಲ್ ಮಾತನಾಡಿದ್ದು, ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು. ನಮ್ಮ ಜನಪ್ರಿಯ ನಾಯಕರು. ಇಡೀ ರಾಜ್ಯದಲ್ಲಿ ಪ್ರಮುಖ ನಾಯಕರು. ಸಿದ್ದರಾಮಯ್ಯರಿಗಿಂತಲೂ ಮೊದಲೇ ನಾವು ಕಾಂಗ್ರೆಸ್ ನಲ್ಲಿ ಇರೋರು. ಇನ್ನೊಬ್ಬರ ಮೇಲೆ ಬಂದೂಕು ಇಟ್ಟು ಹೊಡೆಯುವಂತದ್ದು ಏನೂ ಇಲ್ಲ. ಹೊಡೆಯೋದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ. ನಾವು ಬಿಜಾಪುರದವರು. ನಮಗೆ ಆ ತಾಕತ್ ಇದೆ. ಎಂದು ಹೇಳುವ ಮೂಲಕ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಪ್ರತಾಪ್ ಸಿಂಹ ಅಕ್ಕಿ ಕೊಡಿಸುವ ಕೆಲಸ ಮಾಡಲಿ

ನಂತರ ಮಾತನಾಡಿದ ಎಂ.ಬಿ ಪಾಟೀಲ್​ ಪ್ರತಾಪ್ ಸಿಂಹ ಇದನ್ನೆಲ್ಲ ನಿಲ್ಲಿಸಿ ಅಕ್ಕಿ ಕೊಡಿಸುವ ಕೆಲಸ ಮಾಡಲಿ. ಪ್ರತಾಪ್ ಸಿಂಹ ಮುತುವರ್ಜಿ ವಹಿಸಿ ಅಕ್ಕಿ ಕೊಡಿಸುವ ಪ್ರಯತ್ನ ಮಾಡಲಿ ಎಂದು ಹೇಳಿದ್ದಾರೆ.

ನಾನು ಕಾಂಗ್ರೆಸ್ ‌ಪಕ್ಷದ ಚೇಲಾ

ನಾನು ಕಾಂಗ್ರೆಸ್ ‌ಪಕ್ಷದ ಚೇಲಾ. ನಾನು ಸಿದ್ದರಾಮಯ್ಯ ಅವರಿಗಿಂತ ಮೊದಲೇ ಕಾಂಗ್ರೆಸ್ ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿದ್ದೇನೆ. ನಾನು ಯಾರಿಗೂ ಚೇಲಾ ಅಲ್ಲ. ಪ್ರತಾಪ್ ಸಿಂಹಗೆ ಚೇಲಾ ಕೆಲಸ ಮಾಡಿದ ಅನುಭವ ಇರಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BL ಸಂತೋಷ್ ಬುಟ್ಟಿಯಲ್ಲಿ ಚೇಳುಗಳೇ ಜಾಸ್ತಿ ಇವೆ; ಪ್ರತಾಪ್​ ಸಿಂಹರನ್ನು ಚೇಲಾಗೆ ಹೋಲಿಸಿದ M B ಪಾಟೀಲ್​

https://newsfirstlive.com/wp-content/uploads/2023/06/M-B-Patil.jpg

Load More