ದೇಶಪಾಂಡೆಯವರು ಸುಮ್ಮನೆ ಮಾತಾಡಿದ್ದಾರೆ- MB ಪಾಟೀಲ್
ಹೈಕೋರ್ಟ್ನಲ್ಲಿ ಸಿಎಂಗೆ ಹಿನ್ನಡೆಯಾಗುವ ಪ್ರಶ್ನೆಯೇ ಇಲ್ಲ
ಸಿದ್ದರಾಮಯ್ಯ ಅನುಮತಿ ಕೊಟ್ಟರೆ CM ಆಗುತ್ತೇನೆ ಎಂದಿದ್ದ ದೇಶಪಾಂಡೆ
ಬೆಂಗಳೂರು: ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಅಂತ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದರು. ಈ ಬೆನ್ನಲ್ಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಕುರಿತು ಚರ್ಚೆ ಶುರುವಾಗಿದೆ.
ಈ ಸಂಬಂಧ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಎಂಬಿ ಪಾಟೀಲ್.. ದೇಶಪಾಂಡೆ ಅವರು ಸುಮ್ಮನೇ ಮಾತನ್ನಾಡಿದ್ದಾರೆ. ಪಕ್ಷದ ಹಿರಿಯರು ನಾನ್ಯಾಕೆ ಸಿಎಂ ಆಗಬಾರದು ಎಂದು ಕೇಳಿದ್ದಾರೆ ಅಷ್ಟೇ. ಅವರು ಹೇಳಿರೋದು ಸುಮ್ಮನೆ. ಅದನ್ನು ಅಲ್ಲಿಗೆ ಬಿಟ್ಟುಬಿಡಿ ಎಂದು ಎಂಬಿ ಪಾಟೀಲ್ ಮನವಿ ಮಾಡಿಕೊಂಡರು.
ಇನ್ನು ಹೈಕೋರ್ಟ್ನಲ್ಲಿ ಸಿಎಂಗೆ ಹಿನ್ನಡೆ ಆಗುವ ಪ್ರಶ್ನೆಯೇ ಇಲ್ಲ. ಮುಡಾದಲ್ಲಿ ಅವರು ಬಾಗಿಯಾಗಿಲ್ಲ, ಅವರು ದೋಷ ಮುಕ್ತರಾಗಿ ಸಿಎಂ ಹೊರ ಬರ್ತಾರೆ. ಇನ್ನಷ್ಟು ಶಕ್ತಿಶಾಲಿ ಆಗಿ ಹೊರಹೊಮ್ಮುತ್ತಾರೆ. ಸತೀಶ್ ಜಾರಕಿಹೊಳಿ, ಪರಮೇಶ್ವರ್ ಭೇಟಿ ಮಾಡಿದ್ರೆ ಏನು ತಪ್ಪು? ಎರಡು ತಿಂಗಳ ಹಿಂದೆ ಪರಮೇಶ್ವರ್ ನಮ್ಮ ಮನೆಗೂ ಬಂದಿದ್ದರು. ಮೊನ್ನೆ ನಾನು ಪರಮೇಶ್ವರ್ ಮನೆಗೆ ಹೋಗಿದ್ದೆ, ಕ್ಷೇತ್ರದ ವಿಚಾರವಾಗಿ ಹೋಗಿದ್ದೆ. ಪಕ್ಷದ ವಿಚಾರ ಚರ್ಚೆ ಮಾಡಬಾರದಾ? ಅದರಲ್ಲಿ ತಪ್ಪೇನು? ರಾಜಕೀಯವಾಗಿ ಚರ್ಚೆ ಮಾಡೇ ಮಾಡ್ತೇವೆ ಎಂದರು.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ದ್ರಾವಿಡ್ ಪುತ್ರ; ಏನಾಯ್ತು?
ಪಕ್ಷದ ಬೆಳವಣಿಗೆಗಳು ಚರ್ಚೆ ಮಾಡ್ತೇವೆ ಅದರಲ್ಲಿ ತಪ್ಪೇನು? ಖರ್ಗೆ ಹಿರಿಯರು, ಎಐಸಿಸಿ ಅಧ್ಯಕ್ಷರಿದ್ದಾರೆ. ಅಂಥದ್ದೇನೂ ಇಲ್ಲ. ನಮಗೆ ಎಷ್ಟು ವಯಸ್ಸು ಆಗಿದೆಯೋ ಅಷ್ಟು ಅವರಿಗೆ ಅನುಭವ ಇದೆ ಎಂದರು. ಇದೇ ವೇಳೆ ಕೋರ್ಟ್ ನಲ್ಲಿ ಸಿಎಂ ವಿರುದ್ಧ ವ್ಯತಿರಿಕ್ತ ತೀರ್ಪು ಎಂಬ ಪ್ರಶ್ನೆಗೆ ಉತ್ತರಿಸಿದ ಎಂಬಿ ಪಾಟೀಲ್ ಸಿಎಂ ಆಗೋ ಹಗಲು ಕನಸು ಕಾಣೋಕೆ ಹೋಗಬೇಡಿ ಎಂದಿದ್ದಾರೆ.
ಆರ್.ವಿ. ದೇಶಪಾಂಡೆ ಹೇಳಿದ್ದೇನು?
ನಾನು ಸಿದ್ದರಾಮಯ್ಯಗಿಂತ ಎರಡು ವರ್ಷ ದೊಡ್ಡವನು. ಸಚಿವ ಆಗಿ ದಣಿದಿದ್ದೇನೆ. ಇನ್ನೇನಿದ್ದರೂ ಮುಖ್ಯಮಂತ್ರಿ ಆಗಬೇಕಷ್ಟೇ. ಎಲ್ಲರಂತೆಯೇ ನನಗೂ ಆಸೆ ಇದೆ. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆಯಾಗಿಲ್ಲ. ನನಗೆ ಗೊತ್ತಿಲ್ಲದೇ ಅಂಥ ಯಾವ ಚರ್ಚೆಯೂ ನಡೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅನುಮತಿ ಕೊಟ್ಟರೆ ನಾನು ಮುಖ್ಯಮಂತ್ರಿ ಆಗುತ್ತೇನೆ ಅಂತ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ