newsfirstkannada.com

ಪಕ್ಕದಲ್ಲೇ ಪೊಲೀಸ್​ ಸ್ಟೇಷನ್​​ ಇದ್ರೂ ಕ್ಯಾರೇ ಎನ್ನಲಿಲ್ಲ; ಮೆಡಿಕಲ್​ ಶಾಪ್​ಗೆ ​ನುಗ್ಗಿ ಲಕ್ಷಗಟ್ಟಲೇ ಕಳ್ಳತನ ಮಾಡಿದ್ರು!

Share :

Published August 16, 2023 at 6:14am

Update August 16, 2023 at 6:28am

    ಬೆಂಗಳೂರು ಮೆಡಿಕಲ್​​ ಶಾಪ್​ ಮಾಲೀಕರೇ ಹುಷಾರ್​

    ಇನ್ಮುಂದೆ ಕ್ಯಾಶ್​ ಕೌಂಟರ್​​ನಲ್ಲಿ ಹಣ ಇಡಲೇಬೇಡಿ..!

    ಪೊಲೀಸ್​ ಸ್ಟೇಷನ್​ ಇದ್ರೂ ನುಗ್ಗಿ ಕಳ್ಳತನ ಮಾಡಿದ್ರು

ಬೆಂಗಳೂರು: ಅಬ್ಬಾಬ್ಬಾ! ಅದೇನ್​​ ಎಂಟ್ರಿ ಗುರು! ಹೈದರಾಲಿಯ ಸೈನ್ಯ ಚಿತ್ರದುರ್ಗದ ಕೋಟೆಯೊಳಗೆ ನುಗ್ಗಲು ಬಂದಿದ್ರಲ್ಲ, ಹಾಗೇ ಇವ್ರು ಮೆಡಿಕಲ್​ ಶಾಪ್​ ಒಳಗೆ ನುಗ್ಗುತ್ತಿದ್ದಾರೆ. ಕಳ್ಳ ಬೆಕ್ಕಿನಂತೆ ಮೊದಲು ಒಬ್ಬ ಎಂಟ್ರಿ ಕೊಟ್ಟ, ಬಳಿಕ ಮತ್ತೊಬ್ಬನ ಎಂಟ್ರಿ. ಕೊನೆಗೂ ಇಬ್ರು ಒಳಗೆ ಎಂಟ್ರಿ ಆದ್ಮೇಲೆ ಕಥೆ ಶುರು.

ಹೌದು, ನಗರದ ಹೊರವಲಯ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿರುವ ಎಸ್.ಕೆ ಫಾರ್ಮಾ ಮೆಡಿಕಲ್ ಶಾಪ್​​ನಲ್ಲಿ ಕಳ್ಳರು ಹೀಗೆ ಕೈಚಳಕ ತೋರಿಸಿದ್ದು. ಕೈಗೆ ಸಿಕ್ಕ ಹಣ, ಮೆಡಿಸಿನ್ ಹಾಗೂ ಹಾರ್ಲಿಕ್ಸ್, ಬೂಸ್ಟ್ ಪ್ಯಾಕೆಟ್​​ಗಳನ್ನು ಹೊತ್ತೊಯ್ದಿದ್ದಾರೆ.

ಸಂತೋಷ್ ರೆಡ್ಡಿ ಎಂಬುವವರಿಗೆ ಸೇರಿದ ಮೆಡಿಕಲ್​ ಶಾಪ್​ ಇದಾಗಿದ್ದು, ಸಿಸಿಟಿವಿ ಡಿವಿಆರ್ ಕೂಡ ಕಳ್ಳತನವಾಗಿದೆ. ಹೀಗಿದ್ದರೂ ಮಾಲೀಕರು ಸಿಸಿಟಿವಿ ಆಧರಿಸಿ ಸೂರ್ಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೊಲೀಸರ ಮೇಲೆ ಭಯವೇ ಇಲ್ಲ

ಸದ್ಯ ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಈ ಮೆಡಿಕಲ್​ ಶಾಪ್​ ಪೊಲೀಸ್​ ಠಾಣೆಯ ಕೂಗಳತೆ ದೂರದಲ್ಲೇ ಇದ್ರೂ ಕಳ್ಳರು ಕೈ ಚಳಕ ತೋರಿಸಿದ್ದಾರೆ. ಇದು ಕಳ್ಳರಿಗೆ ಪೊಲೀಸರ ಮೇಲೆ ಎಷ್ಟು ಭಯ ಇದೆ ಅನ್ನೋದನ್ನ ಪ್ರಶ್ನೆ ಮಾಡುವಂತಿದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಕ್ಕದಲ್ಲೇ ಪೊಲೀಸ್​ ಸ್ಟೇಷನ್​​ ಇದ್ರೂ ಕ್ಯಾರೇ ಎನ್ನಲಿಲ್ಲ; ಮೆಡಿಕಲ್​ ಶಾಪ್​ಗೆ ​ನುಗ್ಗಿ ಲಕ್ಷಗಟ್ಟಲೇ ಕಳ್ಳತನ ಮಾಡಿದ್ರು!

https://newsfirstlive.com/wp-content/uploads/2023/08/್ದ್_ದಬt.jpg

Load More