newsfirstkannada.com

ಮೆಡಿಕಲ್​ ಸ್ಟೋರ್​ಗಳೇ ಈ ಕಳ್ಳರ ಟಾರ್ಗೆಟ್​​.. ಜನ ಓದಲೇಬೇಕಾದ ಪ್ರಮುಖ ಸ್ಟೋರಿ ಇದು!

Share :

07-09-2023

    ಒಂದು ಕೈನಲ್ಲಿ ಟಾರ್ಚ್​.. ಮುಖಕ್ಕೆ ಮಂಕಿ ಕ್ಯಾಪ್..!

    ತಲೆಗೊಂದು ಟೋಪಿ! ಜೊತೆಗೊಂದು ಕೈಯಲ್ಲಿ ಬ್ಯಾಗ್

    ಮಿಂಚಿನಂತೆ ಕಳ್ಳತನ.. ಯಾಮಾರಿಸಿ, ಹೆದರಿಸಿ ರಾಬರಿ!

ಬೆಂಗಳೂರು: ಒಂದು ಕೈನಲ್ಲಿ ಟಾರ್ಚ್​.. ಮುಖಕ್ಕೆ ಮಂಕಿ ಕ್ಯಾಪ್.. ತಲೆಗೊಂದು ಟೋಪಿ.. ಜೊತೆಗೊಂದು ಬ್ಯಾಗ್.. ಇವನನ್ನ ನೋಡ್ತಾಯಿದ್ರೆ ಈಸೀಯಾಗಿ ಗೊತ್ತಾಗಲ್ವಾ.. ಇವನು ಇಷ್ಟೋತ್ತಲ್ಲಿ ಮೆಡಿಕಲ್ ಶಾಪ್​​ಗೆ ಯಾಕೆ ಬಂದಿದ್ದಾನೆ ಅಂತಾ..? ಈ ವಿಚಿತ್ರ ಮಂಕಿ ಕ್ಯಾಪ್ ಕಳ್ಳರ ಕಳ್ಳಾಟದ ಕಥೆ ಹೇಳ್ತೀವಿ ಕೇಳಿ..!

ಮೆಡಿಕಲ್ ಶಾಪ್​ಗಳೇ ಮಂಕಿಕ್ಯಾಪ್​​ ಕಳ್ಳರ ಟಾರ್ಗೆಟ್!

ಹೌದು.. ನಗರದಲ್ಲಿರುವ ಮೆಡಿಕಲ್ ಶಾಪ್​ಗಳೇ ಈ ಐನಾತಿ ಗ್ಯಾಂಗ್​ನ ಟಾರ್ಗೆಟ್.. ರಾತ್ರೋರಾತ್ರಿ ಟೂಲ್ಸ್ ಕಿಟ್​ ಜೊತೆಗೆ​ ಫೀಲ್ಡ್​​ಗೆ ಇಳಿಯುತ್ತೆ… ಒಂದೇ ರಾಡ್​ನಿಂದ ಶೆಟರ್​ ಮುರಿದು ಮೆಡಿಕಲ್ ಶಾಪ್​​ನೊಳಗೆ ಎಂಟ್ರೊಕೊಟ್ಟು, ಕ್ಷರ್ಣಾಧದಲ್ಲೇ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತೆ..

ಈ ಘಟನೆ ನಡೆದಿರೋದು ಕಳೆದ ಆಗಸ್ಟ್ 31.. ವಿಜಯನಗರದ ಮೆಡಿಕಲ್ ಶಾಪ್​ಯೊಂದರಲ್ಲಿ.. ಮೊದಲು ಕಳ್ಳರು ಶೆಟರ್​ ಮುರಿದು ಸುಲಭವಾಗಿ ಶಾಪ್​ ಒಳಗೆ ನುಗ್ಗಿದ್ರು.. ಕಾಸ್ಟ್​ಲೀ ಐಟಮ್ಸ್​ಗಳನ್ನ ಒಂದು ಕಡೆ ಗುಡ್ಡೇ ಹಾಕಿದ್ರು. ಇನ್ನೇನಿದ್ರೂ ಕದ್ದ ವಸ್ತುಗಳ ಜೊತೆ ಎಸ್ಕೇಪ್​ ಆಗೋದೊಂದೇ ಬಾಕಿ.. ಬಟ್.. ಇಲ್ನೋಡಿ ಶಾಪ್​ ಸಿಬ್ಬಂದಿ ಅಂಗಡಿಯೊಳಗೆ ಇದ್ದಾರೆ.. ಇವ್ರರನ್ನ ಕಂಡ ಕಳ್ಳರು ಖದ್ದ ವಸ್ತುಗಳನ್ನ ಅಲ್ಲೇ ಬಿಟ್ಟು ಓಡಿದ್ದಾರೆ.. ಇಂಟ್ರೆಸ್ಟಿಂಗ್ ಅಂದ್ರೆ, ಟೂಲ್​ಗಾಗಿ ಮತ್ತೆ ಮೆಡಿಕಲ್ ಶಾಪ್​ ಬಳಿಗೆ ಬಂದಿದ್ದಾರೆ.. ಇನ್ನು, ಈ ಬಗ್ಗೆ ಗೋವಿಂದರಾಜನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಅಪೋಲೋ ಫಾರ್ಮಸಿಗಳ ರಾಬರಿ ಸ್ಟೋರಿ ನೋಡಿ..!

ಮೊದಲು ಹೆಲ್ಮಟ್ ಧರಿಸಿದ ವ್ಯಕ್ತಿಯೊಬ್ಬ ಶಾಪ್​ಗೆ ಬಂದು ಹಿಟ್​ ಸ್ಪ್ರೇ ಖರೀದಿ ಮಾಡ್ತಾನೆ.. ಹತ್ತು ನಿಮಿಷ ಆದ್ಮೇಲೆ ಮತ್ತೆ ಬಂದು ಹಿಟ್​ ಸ್ಪ್ರೇ ವಾಪಾಸ್​ ಕೊಟ್ಟು ಹಣ ಕೇಳ್ತಾನೆ. ಸಿಬ್ಬಂದಿ ಹಣ ವಾಪಾಸ್​ ಕೊಟ್ಟು ಬಿಲ್ ಮಾಡೋವಾಗ ಏಕಾಏಕಿ ಶಾಪ್​ ಒಳಗೆ ನುಗ್ತಾನೆ.. ಫಾರ್ಮಸಿಯಲ್ಲಿದ್ದ ಸಿಬ್ಬಂದಿಯನ್ನ ಹೆದರಿಸಿ ಅಂಗಡಿಯಲ್ಲಿದ್ದ 16 ಸಾವಿರ ಹಣ ಹೆಗರಿಸಿ ಪರಾರಿಯಾಗಿದ್ದಾನೆ.. ಇನ್ನು, ಈ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಮತ್ತೊಂದು ಕೇಸ್​ ಹೀಗಿದೆ ಓದಿ!

ಶಾಪ್​ ಓಪನ್​ ಆಗಿ ಜಸ್ಟ್ ಅರ್ಧ ಗಂಟೆ ಆಗಿತ್ತು.. ಒಬ್ಬ ಬರ್ತಾನೆ.. 10 ರೂಪಾಯಿ ಕೊಟ್ಟು ಮಾತ್ರೆ ತಗೋತಾನೆ.. ಹೋಗ್ತಾನೆ.. ಬಳಿಕ ಹತ್ತು ನಿಮಿಷ ಆದ್ಮೇಲೆ ಅದೇ ವ್ಯಕ್ತಿ ಬಂದು ಟ್ಯಾಬ್ಲೆಟ್​ ವಾಪಾಸ್​ ಕೊಟ್ಟು ಹಣ ಕೇಳ್ತಾನೆ.. ಹಣ ಕೊಡೋಕೆ ಹೋಗಿದ್ದೇ ತಡ, ಏಕಾಏಕಿ ಒಳನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಡ್ರಾಯರ್​ನಲ್ಲಿದ್ದ ಅಷ್ಟು ಹಣ ಖದ್ದು ಎಸ್ಕೇಪ್ ಆಗಿದ್ದಾನೆ.. ಇನ್ನು, ಈ ಬಗ್ಗೆ ಮಾರತ್ತಹಳ್ಳಿ ಪೊಲೀಸ್​ ಸ್ಟೇಷನ್​ನಲ್ಲಿ ಪ್ರಕರಣ ದಾಖಲಾಗಿದೆ..

ಸೆಕೆಂಡ್​ಗಳಲ್ಲೇ ಶೆಟರ್ ಬ್ರೇಕ್, ಮಿಂಚಿನಂತೆ ಕಳ್ಳತನ!

ಇನ್ನು, ಇದೇ ರೀತಿ HSR ಲೇಔಟ್​ನಲ್ಲೂ ಸಿನಿಮೀಯ ರೀತಿಯಲ್ಲಿ ಬಂದ ಕಳ್ಳರು ರಾಬರಿ ಮಾಡಿ ಪರಾರಿಯಾಗಿದ್ದಾರೆ..
ಒಟ್ನಲ್ಲಿ, ಇತ್ತೀಚೆಗೆ ಮೆಡಿಕಲ್​ ಶಾಪ್​​ಗಳು ರಾಬರಿ ಮಾಡೋರಿಗೆ ಸುಲಭ ಟಾರ್ಗೆಟ್​ ಆಗ್ತಿವೆ. ಈ ಶಾಪ್​ಗಳಲ್ಲಿ ಬಹುತೇಕ ಸಮಯ ಹೆಚ್ಚಿನ ಗ್ರಾಹಕರು ಇರುವುದಿಲ್ಲ. ಜೊತೆಗೆ ಹಣವನ್ನು ಸಂಗ್ರಹಿಸುವ ಗಲ್ಲಾ ಪೆಟ್ಟಿಗೆಗಳು ಗ್ರಾಹಕರಿಗೆ ಕೈಗೆಟುವ ರೀತಿಯಲ್ಲಿ ಇರುತ್ತವೆ. ಇವುಗಳ ಲಾಭ ಪಡೆದುಕೊಳ್ಳುತ್ತಿರುವ ದರೋಡೆಕೋರರು, ಈ ರೀತಿ ದೋಚುತ್ತಿದ್ದಾರೆ. ಶಾಪ್​ ಮಾಲೀಕರು ಸುರಕ್ಷತಾ ಕ್ರಮಗಳನ್ನು ವಹಿಸದ ಹೊರತು ಇವುಗಳ ನಿಯಂತ್ರಣ ಸ್ವಲ್ಪ ಕಷ್ಟವೇ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಡಿಕಲ್​ ಸ್ಟೋರ್​ಗಳೇ ಈ ಕಳ್ಳರ ಟಾರ್ಗೆಟ್​​.. ಜನ ಓದಲೇಬೇಕಾದ ಪ್ರಮುಖ ಸ್ಟೋರಿ ಇದು!

https://newsfirstlive.com/wp-content/uploads/2023/09/Medical-Store.jpg

Load More