ಕುಟುಂಬಸ್ಥರನ್ನು ಜೈಲಿನಲ್ಲಿ ಮಾತನಾಡಿಸಿರುವ ನಟ ದರ್ಶನ್
ಅಮ್ಮನನ್ನು ನೋಡಿದ ಮೇಲೆ ದಾಸನ ಸಂತೋಷ ಹೆಚ್ಚಾಯಿತು
ದರ್ಶನ್ರನ್ನ ನೋಡಲು ಜೈಲಿಗೆ ಯಾರು ಯಾರು ಬಂದಿದ್ದರು..?
ಬಳ್ಳಾರಿ: ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಹೋದ ಮೇಲೆ ಅವರ ಕುಟುಂಬಸ್ಥರು ಒಬ್ಬೊಬ್ಬರೇ ಹೋಗಿ ಭೇಟಿ ಮಾಡುತ್ತಿದ್ದಾರೆ. ಮೊದಲು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ ತೂಗುದೀಪ ಅವರು ದರ್ಶನ್ರನ್ನ ಭೇಟಿ ಮಾಡಿದ್ದರು. ಇದೀಗ ಬಳ್ಳಾರಿ ಜೈಲಿಗೆ ಮೀನಾ ತೂಗುದೀಪ ಅವರು ಭೇಟಿ ನಿಡಿದ್ದು ದರ್ಶನ್ ಮೊಗದಲ್ಲಿ ಹೊಸದೊಂದು ಕಳೆ, ನಗು ಬಂದಿದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ದರ್ಶನ್ರನ್ನು ಕಾಣಲು ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಆಗಮಿಸಿದ್ದರು. ಅಕ್ಕ, ಭಾವ ಮತ್ತು ಅವರ ಮಕ್ಕಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಮೀನಾ ತೂಗುದೀಪ ಅವರು ಬಂದಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ರನ್ನು ಕಾಣಲು ಮಗ ದಿನಕರ್ ತೂಗುದೀಪ ಜೊತೆ ಬಂದಿದ್ದರು. ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ. ಮಗನನ್ನು ಕಾಣುವ ತವಕದಲ್ಲಿ ತನ್ನ ಮಗಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು.
ಇದನ್ನೂ ಓದಿ: ದರ್ಶನ್ ವಿರುದ್ಧದ ಚಾರ್ಜ್ಶೀಟ್ಗೆ ಹೊಸ ಟ್ವಿಸ್ಟ್ ಕೊಡಲು ಮುಂದಾದ ದಾಸನ ಪರ ವಕೀಲರು..!
ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ ಮೇಲೆ ಯಾವತ್ತೂ ದರ್ಶನ್ ನಕ್ಕಿರಲಿಲ್ಲ. ಆದರೆ ಬಳ್ಳಾರಿ ಜೈಲಿಗೆ ಹೋದ ಮೇಲೆ ಅಮ್ಮ ನೋಡಲು ಬಂದಿದ್ದಾರೆಂದು ದರ್ಶನ್ ಜೈಲಿನ ಒಳಗಿಂದ ಬಂದರು. ಈ ವೇಳೆ ದರ್ಶನ್ ಅವರು ಬರುವಾಗ ಅಮ್ಮನನ್ನು ನೋಡಿ ಸ್ಮೈಲ್ ಮಾಡಿದ್ದಾರೆ. ಜೈಲಿಗೆ ಹೋದ ಮೇಲೆ ಅವರ ಮುಖದಲ್ಲಿ ಇಂಥಹದೊಂದು ನಗು ಯಾವತ್ತೂ ಕಂಡಿರಲಿಲ್ಲ. ಆದರೆ ಹೆತ್ತ ತಾಯಿ ನೋಡಲು ಬಂದಿದ್ದಾರೆ ಎಂದು ದರ್ಶನ್ ಮೊಗದಲ್ಲಿ ನಗುವಿನ ಜೊತೆಗೆ ಹೊಸದೊಂದು ಕಳೆ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ