ಆರೋಗ್ಯ ವಿಚಾರಿಸಿದ್ರು.. ಊಟ ಸರಿಯಾಗಿ ಮಾಡು ಅಂದ್ರು ಅಮ್ಮ!
22 ದಿನಗಳ ನಂತರ ತಾಯಿ ಮಗ ಭೇಟಿ, ಆ 28 ನಿಮಿಷ ಹೇಗಿದ್ದವು?
ಜೈಲಲ್ಲಿ ಬಳಲಿ ಬೆಂಡಾದರೂ ಬೇಲ್ ಮೊರೆ ಹೋಗಿಲ್ಲ ನಟ, ಯಾಕೆ?
ಉಪ್ಪಿಗಿಂತ ರುಚಿ ಇಲ್ಲ, ತಾಯಿಗಿಂತ ಬಂಧು ಇಲ್ಲ ಅನ್ನೋದು ಸರ್ವಕಾಲಕ್ಕೂ ಅನ್ವಯ. ಜಗತ್ತಿನಲ್ಲಿ ಯಾರು ಬೇಕಾದ್ರೂ ಮಧ್ಯ ದಾರಿಯಲ್ಲಿ ಕೈ ಬಿಟ್ಟು ಹೋಗಬಹುದು. ಆದ್ರೆ, ತಾಯಿ ಮಾತ್ರ ಯಾವತ್ತೂ ಮಗನ ಬಿಟ್ಟು ಹೋಗಲ್ಲ. ಮಗನಿಗೆ ಆಗೋ ಸಣ್ಣ ನೋವಿಗೂ ತಾಯಿ ದುಃಖಿಸ್ತಾಳೆ. ಅಂತಾದ್ರಲ್ಲಿ ಹೆತ್ತು ಹೊತ್ತು ಸಾಕಿದ ಮಗ ಜೈಲು ಸೇರಿದ್ರೆ ಯಾವ ತಾಯಿಗೆ ತಾನೇ ನೋವು ಸಹಿಸಿಕೊಳ್ಳಲು ಸಾಧ್ಯ?. ಅಷ್ಟಕ್ಕೂ ನಾವೇಕೆ ಈ ಮಾತನ್ನು ಹೇಳ್ತಿದ್ದೇವೆ ಅಂದ್ರೆ ಕಾರಣ ಜೈಲಲ್ಲಿರೋ ದರ್ಶನ್ ಭೇಟಿ ಮಾಡಿದ ಮೀನಮ್ಮ. ಹಾಗಾದ್ರೆ, 28 ನಿಮಿಷದಲ್ಲಿ ತಾಯಿ ಮಗನ ಸಂಭಾಷಣೆ ಏನಿತ್ತು? ಮೀನಮ್ಮ ಕಣ್ಣೀರು ಹಾಕಿದ್ದೇಕೆ?. ಮಗನನ್ನು ಯಾವ ರೀತಿಯಲ್ಲಿ ಸಂತೈಸಿ ಧೈರ್ಯ ತುಂಬಿದ್ರು?.
ಜೋ ಜೋ ಜೋಲಾಲಿ.. ಹೆತ್ತವಳ ಎದೆಯಲಿ ನೀನೇ ತಂಗಾಳಿ.. ಕರುಳಿನ ಕಂದಮ್ಮಾ ದೊರೆಯಾಗುವರೆಗೂ ಕಾಯಬಲ್ಲೆ ನಾ.. ಜೀವ ತೇಯ ಬಲ್ಲೆ ನಾ.. ಇದು ಅಕ್ಷರಶಃ ಸತ್ಯ. ದರ್ಶನ್ ಅಭಿನಯದ ದಾಸ ಸಿನಿಮಾದ ಈ ಹಾಡು ತಾಯಿ ಮಗನ ಬಾಂಧವ್ಯ ಎಂಥಾದ್ದು ಅನ್ನೋದನ್ನು ತೆರೆಯ ಮೇಲೆ ಕಣ್ಣಿಗೆ ಕಟ್ಟುವಂತೆ ಭಾವನಾತ್ಮಕವಾಗಿ ತೆರೆದಿಟ್ಟಿದೆ. ಯಾವುದೇ ತಾಯಿಯಾದ್ರೂ ತಾನು ಹೆತ್ತು ಹೊತ್ತು ಸಾಕಿದ ಕರುಳು ಬಳ್ಳಿಗಾಗಿ ಯಾವ ತ್ಯಾಗಕ್ಕೆಬೇಕಾದ್ರೂ ಸಿದ್ಧ. ಮಗನಿಗಾಗಿ ಇಡೀ ಜಗತ್ತನ್ನೆ ಎದುರು ಹಾಕಿಕೊಳ್ಳಲು ರೆಡಿ. ಅಂತಾ ತಾಯಿಗೆ ಜೀವ ಮಾನದಲ್ಲಿ ಯಾವತ್ತೂ ಹೆತ್ತ ಕರುಳ ಮೇಲೆ ಪ್ರೀತಿ ಅನ್ನೋದ್ ಕಿಂಚಿತ್ತೂ ಕಡಿಮೆ ಆಗಲ್ಲ. ಆದ್ರೆ, ಏನಾದ್ರೂ ತನ್ನ ಮಗನಿಗೆ ನೋವಾದ್ರೆ ಸ್ವತಃ ತನಗೆ ನೋವಾಯ್ತು ಅನ್ನುವಷ್ಟು ಸಂಕಷ್ಟ ಪಡ್ತಾಳೆ. ಹೀಗಾಗಿಯೇ ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಅನ್ನೋದು. ಹೀಗಿದ್ದಾಗ ಕಷ್ಟದಲ್ಲಿ ಬೆಳೆಸಿದ ಮಗ ಬಾನೆತ್ತರಕ್ಕೆ ಬೆಳದು, ನೇಮು ಫೇಮು ಸಂಪಾದಿಸಿ, ಅನಂತರ ಯಾವುದಾದ್ರೂ ಆರೋಪದಲ್ಲಿ ಜೈಲು ಸೇರಿದ್ದಾಗ ತಾಯಿಗೆ ಖಂಡಿತವಾಗಿಯೂ ಉಂಟಾಗುವ ಸಂಕಟವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.
ಇದನ್ನೂ ಓದಿ: KL ರಾಹುಲ್ ಮೇಲೆ ಪತ್ನಿ ಅಥಿಯಾ ಶೆಟ್ಟಿಗೆ ದ್ವೇಷ.. ಇದಕ್ಕೆ ಅಸಲಿ ಕಾರಣವೇನು..?
ಹೆತ್ತ ಮಕ್ಕಳಿಗೆ ಹೆಗ್ಗಣವೂ ಮದ್ದು ಅನ್ನೋ ಮಾತು ಅಕ್ಷರಶಃ ಸತ್ಯ. ಮಗ ಹೇಗೆ ಇರ್ಲಿ, ಸಾಮಾಜ ಅವನ ವಿರುದ್ಧ ಏನೇ ಕಿಡಿ ಕಾರಲಿ, ಆರೋಪದಲ್ಲಿ ಆತ ಜೈಲು ಸೇರಿರಲಿ, ಆದ್ರೆ ತಾಯಿಗೆ ಆತ ಮುದ್ದಿನ ಮಗನೇ ಆಗಿರ್ತಾನೆ.
ಅಮ್ಮನ ಕಂಡು ದರ್ಶನ್ ಕಣ್ಣೀರು.. ಮಗನ ಅಪ್ಪಿದ ತಾಯಿ!
ಗುರುವಾರ ಬಳ್ಳಾರಿ ಜೈಲಲ್ಲಿ ಕಾಣಿಸಿದ್ದು ಭಾವುಕ ಕ್ಷಣ. ಯಾರೂ ನಿರೀಕ್ಷೆ ಮಾಡಲಾಗದ ಕ್ಷಣ. ಅದು ಅಮ್ಮ ನಿನ್ನ ತೋಳಿನಲ್ಲಿ ಅಂತಾ ಮಗ ಕಣ್ಣೀರು ಹಾಕಿದ್ದು, ಮಗನ ಸ್ಥಿತಿ ನೋಡಿ ತಾಯಿ ಸಂಕಟ ಪಟ್ಟಿದ್ದು. ಇದೇ ನೂರು ದಿನದ ಹಿಂದೆ ರೇಣುಕಾಸ್ವಾಮಿಯ ಭೀಕರ ಹತ್ಯೆಯಾಗುತ್ತೆ, ಕೊಲೆ ಆರೋಪದಲ್ಲಿ ಸ್ಟಾರ್ ನಟ ದರ್ಶನ್ ಜೈಲು ಸೇರ್ತಾರೆ. ಜೈಲಲ್ಲಿರೋ ದರ್ಶನ್ ನೋಡೋದಕ್ಕೆ ಮೀನಮ್ಮ ಬರ್ತಾರೆ ಅನ್ನೋ ಸಣ್ಣ ಕಲ್ಪನೆಯೂ ಯಾರಲ್ಲೂ ಇರ್ಲಿಲ್ಲ. ಆದ್ರೆ, ನಿರೀಕ್ಷೆ ಇಲ್ಲದ, ಊಹಿಸಲಾಗದ ಘಟನೆಗಳು ನಡೆದು ಹೋಗಿವೆ.
ಸೆಲ್ ನಂ.15 ರಿಂದ ಸಂದರ್ಶಕರ ಕೊಠಡಿಗೆ ದರ್ಶನ್ ಎಂಟ್ರಿ
ದರ್ಶನ್ ಬೆಂಗಳೂರು ಜೈಲಲ್ಲಿರುವಾಗ ಮೀನಮ್ಮ ಹೋಗಿ ಭೇಟಿ ಮಾಡಿ ಬಂದಿದ್ರು. ಆ ಸಂದರ್ಭದಲ್ಲಿ ದರ್ಶನ್ ನೋಡ್ತಾನೇ ಮೀನಮ್ಮ ಕಣ್ಣೀರು ಹಾಕಿದ್ರು. ಅಮ್ಮನ್ನು ನೋಡ್ತಾನೇ ದರ್ಶನ್ ಕೂಡ ಭಾವುಕರಾಗಿದ್ರು. ತನ್ಗೆ ಎಂಥಾ ಸ್ಥಿತಿ ಬಂತು ಅಂತಾ ಸ್ವತಃ ದರ್ಶನ್ ಪಶ್ಚಾತಾಪ ಪಟ್ಟಿದ್ರು. ಇದೀಗ ದರ್ಶನ್ ಬಳ್ಳಾರಿ ಜೈಲು ಸೇರಿ 22 ದಿನಗಳ ಬಳಿಕ ಮೀನಮ್ಮ ಮಗನನ್ನು ನೋಡುವ ಉದ್ದೇಶಕ್ಕೆ ಬಳ್ಳಾರಿ ಜೈಲಿಗೆ ಹೋಗಿದ್ದಾರೆ. ಮೀನಮ್ಮನ ಜೊತೆ ದರ್ಶನ್ ಸಹೋದರಿ ದಿವ್ಯಾ, ದಿವ್ಯಾ ಪತಿ ಮತ್ತು ಮಕ್ಕಳು ಹೋಗಿದ್ರು. ಈ ಸಂದರ್ಭದಲ್ಲಿ ತಮ್ಮನ್ನು ನೋಡಲು ಅಮ್ಮ ಬಂದಿದ್ದಾರೆ, ಸಹೋದರಿ ಬಂದಿದ್ದಾರೆ ಅಂತಾ ದರ್ಶನ್ ಸಂತೋಷದಿಂದ ಸೆಲ್ ನಂಬರ್ 15 ರಿಂದ ಸಂದರ್ಶಕರ ಕೊಠಡಿಗೆ ಎಂಟ್ರಿಯಾಗಿದ್ದಾರೆ. ಆ ಮೇಲೆ ಆಗಿದ್ದು ಅಕ್ಷರಶಃ ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ಅನ್ನೋ ಗೀತೆಯನ್ನು ನೆನಪಿಸೋ ಭಾವನಾತ್ಮಕ ಕ್ಷಣ.
ಇದನ್ನೂ ಓದಿ: ದರ್ಶನ್ ವಿರುದ್ಧದ ಚಾರ್ಜ್ಶೀಟ್ಗೆ ಹೊಸ ಟ್ವಿಸ್ಟ್ ಕೊಡಲು ಮುಂದಾದ ದಾಸನ ಪರ ವಕೀಲರು..!
ಮೀನಮ್ಮ ಕಷ್ಟು ಪಟ್ಟು ತಮ್ಮ ಮಕ್ಕಳ ಲಾಲನೆ ಪಾಲನೆ ಮಾಡಿದ್ರು. ಕಣ್ಣೀರು ಸುರಿಸುತ್ತಲೇ ಸಂಸರಾದ ಬಂಡಿಯನ್ನು ಸಾಗಿಸಿದ್ರು. ಅಂತಿಮವಾಗಿ ಮಕ್ಕಳನ್ನು ದೊಡ್ಡ ಸ್ಥಾನದಲ್ಲಿ ತಂದು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ರು. ಆದ್ರೆ, ಇಂದು ದರ್ಶನ್ ಅನ್ನು ಇಂತಾ ಸ್ಥಿತಿಯಲ್ಲಿ ನೋಡಲು ಮೀನಮ್ಮನಿಗೆ ಸಾಧ್ಯವಾಗಿಲ್ಲ. ಯಾವ ತಾಯಿಗೆ ತಾನೇ ಜೈಲಲ್ಲಿ ಮಗನನ್ನು ನೋಡಲು ಸಾಧ್ಯ ಹೇಳಿ?. ಖಂಡಿತವಾಗಿಯೂ ಯಾರಿಗೂ ಸಾಧ್ಯವಿಲ್ಲ. ಹೀಗಾಗಿಯೇ ಮಗ ಜೈಲಲ್ಲಿ ನಡ್ಕೊಂಡ್ ಬರ್ತಾ ಇದ್ದಾಗಲೇ ಮೀನಮ್ಮನ ಕಣ್ಣನಲ್ಲಿ ನೀರು ಜಿನುಗಿದೆ. ಮಗ ಬರ್ತಾ ಇದ್ದಂತೆ ತಬ್ಬಿ ಕಣ್ಣೀರು ಹಾಕಿದ್ದಾರೆ.
ಮೀನಮ್ಮನ ಕಣ್ಣಲ್ಲಿ ನೀರು ಜಾರಲು ಶುರುವಾಯ್ತೋ? ಅವಾಗ್ಲೇ ದರ್ಶನ್ ಕಣ್ಣಲ್ಲಿಯೂ ನೀರು ಬರಲು ಶುರುವಾಗಿದೆ. ಇಬ್ಬರು ತಬ್ಬಿಕೊಂಡು ಸ್ವಲ್ಪ ಹೊತ್ತು ಕಣ್ಣೀರು ಹಾಕಿದ್ದಾರೆ. ಏನೂ ಮಾತಾಡದೇ ಮೌನವಾಗಿದ್ದಾರೆ. ಆವಾಗ ಮೀನಮ್ಮನ ಜೊತೆ ಹೋಗಿದ್ದ ದರ್ಶನ್ ಸೋದರಿ ಮತ್ತು ಮಕ್ಕಳು ಸಂತೈಸಿದ್ದಾರೆ.
ಸೊರಗಿದ ದೇಹವನ್ನು ನೋಡಿ ಮೀನಮ್ಮ ಕಣ್ಣೀರು
ಮಗು ಚಿಕ್ಕದಾಗಿದಾಗ ಸ್ವಲ್ಪ ಅನಾರೋಗ್ಯ ಕಾಣಿಸಿದ್ರೂ ಸಾಕು ತಾಯಿ ಕಣ್ಣೀರು ಹಾಕಿ ಬಿಡ್ತಾಳೆ. ಹಾಗೇ ಮಗ ಬೆಳೆದು ದೊಡ್ಡನಾದಾಗ್ಲೂ ಆತನ ಆರೋಗ್ಯದಲ್ಲಿ ಏನಾದ್ರೂ ಏರುಪೇರಾಯ್ತು ಅಂತಾದ್ರೆ ಮೊದಲು ದುಃಖ ಪಡುವವಳೇ ಅಮ್ಮ. ಬಳ್ಳಾರಿ ಜೈಲಿಗೆ ದರ್ಶನ್ ಭೇಟಿಗೆ ಮೀನಮ್ಮ ಹೋಗ್ತಾ ಇದ್ದಂತೆ ಮೊದಲು ಹೇಳಿದ್ದು ಮಗ ಹೇಗಿದ್ದೀಯಾ? ಆರೋಗ್ಯ ಹೇಗಿದೆ ಅಂತಾ? ಬಿಳಿ ಗಡ್ಡ. ಸೊರಗಿದ ದೇಹವನ್ನು ನೋಡಿ ಮೀನಮ್ಮ ಕಣ್ಣೀರು ಸುರಿಸುತ್ತಾ ಇಂತಾವೊಂದ್ ಪ್ರಶ್ನೆ ಕೇಳಿದ್ದಾರೆ. ನಾನು ಚೆನ್ನಾಗಿದ್ದೀನಿ ಅಮ್ಮಾ. ನೀವು ಆರೋಗ್ಯವಾಗಿರಿ ಅಂತಾ ದರ್ಶನ್ ಹೇಳಿದ್ದಾರೆ. ಹಾಗೇ ದರ್ಶನ್ ಬೆನ್ನು ನೋವು, ಕೈ ನೋವು ಅಂತಾ ಬಳಲುತ್ತಿದ್ದಾರೆ ಅನ್ನೋದ ಮೀನಮ್ಮನಿಗೆ ಗೊತ್ತು. ಹೀಗಾಗಿ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೋ ಅಂತಾ ಮೀನಮ್ಮ ಸಲಹೆ ನೀಡಿದ್ದಾರೆ.
ದರ್ಶನ್ ಜೈಲು ಸೇರಿ 100 ದಿನ ದಾಟಿದೆ. ಆದ್ರೂ ದರ್ಶನ್‌ಗೆ ಇಂದಿಗೂ ಜೈಲೂಟಕ್ಕೆ ಒಗ್ಗಿಕೊಳ್ಳಲು ಸಾಧ್ಯವಾಗ್ತಿಲ್ಲ. ಅದ್ಕೆ ಕಾರಣ, ಇಷ್ಟು ವರ್ಷಗಳ ಕಾಲ ದರ್ಶನ್ ರುಚಿಕಟ್ಟಾದ ಊಟವನ್ನೇ ಮಾಡ್ತಿದ್ರು. ಪ್ರತಿ ನಿತ್ಯ ನಾನ್ ವೆಜ್ ಊಟವೇ ಸೇವನೆ ಮಾಡ್ತಿದ್ರು. ಹೀಗಾಗಿಯೇ ಬೆಂಗಳೂರು ಜೈಲಲ್ಲಿ ಇದ್ದಾಗ ತಮ್ಗೆ ಮನೆ ಊಟ ಬೇಕು ಅಂತಾ ದರ್ಶನ್ ಕೋರ್ಟ್ ಮೊರೆ ಹೋಗಿದ್ದು ಇದೆ. ಆದ್ರೆ, ಕೋರ್ಟ್ ಒಪ್ಪಿಗೆ ಕೊಟ್ಟಿಲ್ಲ. ಇದೆಲ್ಲವೂ ಗೊತ್ತಿರೋ ಮೀನಮ್ಮ ದರ್ಶನ್ ನೋಡ್ತಾ ಇದ್ದಂತೆ ಕೇಳಿದ್ದು ಊಟ ಸೇರ್ತಾ ಇದೆಯಾ ಮಗ ಅಂತಾ? ಆ ಪ್ರಶ್ನೆಗೆ ಹೌದು ಅಮ್ಮ ಅಂದಿದ್ದಾರೆ ದರ್ಶನ್. ಆವಾಗ ಯಾವುದೇ ಕಾರಣಕ್ಕೂ ಊಟ ಬಿಡ್ಬೇಡ ಅಂತಾ ಸಲಹೆ ನೀಡಿದ್ದಾರೆ ಮೀನಮ್ಮ.
ಇದನ್ನೂ ಓದಿ: ಮೊದಲ ಮಗುವಿಗೆ ವೆಲ್ಕಮ್ ಹೇಳಿದ ನಟಿ ಕವಿತಾ ಗೌಡ- ಚಂದನ್ ಕುಮಾರ್.. ಗಂಡಾ, ಹೆಣ್ಣಾ..?
ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡ
ಮೀನಮ್ಮನ ಜೊತೆ ದರ್ಶನ್ ಪಶ್ಚಾತಾಪ ತೋಡಿಕೊಂಡಿದ್ದಾರೆ. ತನ್ಗೆ ಎಂಥಾ ಸ್ಥಿತಿ ಬಂತು ಅಂತಾ ಅಮ್ಮನ ಬಳಿ ನೋವು ತೋಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಗ ಪಶ್ಚಾತಾಪದಲ್ಲಿದ್ದಾನೆ, ಆತಂಕದಲ್ಲಿದ್ದಾನೆ ಅನ್ನೋದ ಮೀನಮ್ಮನಿಗೆ ಗೊತ್ತಾಗಿದೆ. ಹೀಗಾಗಿ ಧೈರ್ವಾಗಿರು ಮಗ ನಾವು ವಕೀಲರ ಜೊತೆ ಸಂಪರ್ಕದಲ್ಲಿ ಇದ್ದೇವೆ. ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ ಅಂತಾ ಹೇಳಿದ್ದಾರೆ.
ದರ್ಶನ್ ಮತ್ತು ಮೀನಮ್ಮ ಭೇಟಿಯಾಗಿದ್ದು ಮಾತುಕಥೆ ನಡ್ಸಿದ್ದು 28 ನಿಮಿಷ. ಈ ಸಂದರ್ಭದಲ್ಲಿ ಮಗನ ಬಿಳಿ ಗಡ್ಡ, ಸೊರಗಿದ ಮುಖ, ಬಾಡಿದ ಹೇದ ನೋಡಿ ಮೀನಮ್ಮ ಕಣ್ಣೀರು ಹಾಕಿದ್ದಾರೆ. ಮೀನಮ್ಮ ಕಣ್ಣೀರು ಹಾಕೋದನ್ನು ನೋಡಿ ದರ್ಶನ್ ಕೆನ್ನೆಯಲ್ಲಿ ನೀರು ಜಾರಿವೆ. ಇನ್ನು ಮಗನಿಗಾಗಿ ಮೀನಮ್ಮ ಕೆಲವು ಬೇಕರಿ ತಿನಿಸು ಮತ್ತು ಡ್ರೈಫ್ರೂಟ್ ದರ್ಶನ್ ತಂದು ಕೊಟ್ಟಿದ್ದಾರೆ. ಬಟ್, ದರ್ಶನ್ ಜೈಲು ಸೇರಿ 100 ದಿನ ಆಯ್ತು? ಹಾಗಾದ್ರೆ, ಈ 100 ದಿನದಲ್ಲಿ ದರ್ಶನ್ ಹೇಗಿದ್ದವರು ಹೇಗಾದ್ರೂ? ಅವರಲ್ಲಿರೋ ಆತಂಕ ಏನು? ಅನ್ನೋದ್ ವೇರಿ ವೇರಿ ಇನ್‌ಟ್ರೆಸ್ಟಿಂಗ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ