newsfirstkannada.com

Video: ಈತ ಹನುಮಂತನ ಭಕ್ತ.. ಪವಾಡ ತೋರಿಸುತ್ತೇನೆಂದು ಮರವೇರಿದಾತ 30 ಅಡಿ ಎತ್ತರದಿಂದ ಬಿದ್ದ! ಮುಂದೇನಾಯ್ತು? 

Share :

14-08-2023

    ಆಂಜನೇಯ ಭಕ್ತ ಚಮತ್ಕಾರ ಮಾಡಲು ಹೋಗಿ ಏನಾದ ಗೊತ್ತಾ?

    30 ಅಡಿ ಎತ್ತರದ ಮರವೇರಿದವನ ದೃಶ್ಯ ನೋಡಿದ್ರೆ ಭಯವಾಗುತ್ತೆ

    ಹನುಮಂತನಿಂದ ವಿಶೇಷ ಶಕ್ತಿ ಸಿಕ್ಕಿದೆ ಎಂದು ಮರವೇರಿದ ಭಕ್ತ

ದೇಗುಲದ ಪೂಜಾರಿಯೊಬ್ಬ ನಾನು ಹನುಮಂತನ ಭಕ್ತ. ನೋಡಿ ಈಗ ಚಮತ್ಕಾರ ಮಾಡ್ತೀನಿ ಎಂದು ಹೇಳುತ್ತಾ ಮರ ಹತ್ತಿ ಬರೋಬ್ಬರಿ 30 ಅಡಿ ಎತ್ತರದಿಂದ ಬಿದ್ದ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ.

ಚಮತ್ಕಾರ ಮಾಡಲು ಹೋಗಿ ಕೊಂಬೆ ಮುರಿದ ಕಾರಣ ದೇಗುಲದ ಪೂಜಾರಿ ಅಜಯ್‌  ಎತ್ತರದಿಂದ ಕೆಲಕ್ಕೆ ಬಿದ್ದಿದ್ದಾನೆ. ತಾನು ಹನುಮಂತನ ಪರಮ ಭಕ್ತ, ನನಗೆ ಹನುಮಂತನಿಂದ ವಿಶೇಷ ಶಕ್ತಿ ಸಿಕ್ಕಿದೆ ಅಂತ ಹೇಳ್ತಿದ್ದ ಪೂಜಾರಿ ಅಜಯ್‌ ಅದನ್ನ ನಿಮ್ಗೆಲ್ಲಾ ತೋರಿಸ್ತೀನಿ ಅಂತ ಮರವನ್ನ ಹತ್ತಿಬಿಟ್ಟಿದ್ದ. ಆದರೆ ಪವಾಡ ತೋರಿಸೋಕೆ ಹೋಗಿ ಮರ ಹತ್ತಿದ್ದಾಗ ಮರದ ಕೊಂಬೆ ಮುರಿದುಬಿಟ್ಟಿದೆ. ಇದರಿಂದ ಏಕಾಏಕಿ ಕೆಳಕ್ಕೆ ಬಿದ್ದ ಪೂಜಾರಿ, ಮೈ-ಕೈಗೆಲ್ಲಾ ಗಾಯ ಮಾಡ್ಕೊಂಡಿದ್ದಾನೆ. ಸದ್ಯ ಆತನನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇನ್ನು ಮರದ ಕೊಂಬೆ ಮುರಿದ ರಭಸಕ್ಕೆ ಅಜಯ್​ ಅಂಗಡಿಯೊಂದರ ಬ್ಯಾನರ್​ ಮೇಲೆ ಬಿದ್ದು, ಬಳಿಕ ರಸ್ತೆ ಬದಿಗೆ ಬಂದು ಬಿದ್ದಿದ್ದಾನೆ. ಕೂಡಲೇ ಅಲ್ಲಿದ್ದ ವ್ಯಕ್ತಿಯೊಬ್ಬ ಆತನನ್ನು ಕೈಯಲ್ಲಿ ಎತ್ತಿಕೊಂಡು ಆಸ್ಪತ್ರೆ ಸಾಗಿಸಲು ವಾಹನಕ್ಕಾಗಿ ಗೋಗರೆದಿದ್ದಾನೆ.

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಈತ ಹನುಮಂತನ ಭಕ್ತ.. ಪವಾಡ ತೋರಿಸುತ್ತೇನೆಂದು ಮರವೇರಿದಾತ 30 ಅಡಿ ಎತ್ತರದಿಂದ ಬಿದ್ದ! ಮುಂದೇನಾಯ್ತು? 

https://newsfirstlive.com/wp-content/uploads/2023/08/Ajay.jpg

Load More