newsfirstkannada.com

‘ಫಸ್ಟ್ ಟೈಂ’ ಮನೆಗೆ ಕರೆಂಟ್ ಬಂದಾಗ.. 70 ವರ್ಷದ ಈ ಅಜ್ಜಿಯ ಸಂಭ್ರಮ ನೀವು ನೋಡಲೇಬೇಕು.. Video

Share :

28-06-2023

    ಅಜ್ಜಿಯ ಸಂತೋಷಕ್ಕೆ ಓರ್ವ ಮಹಿಳಾ ಅಧಿಕಾರಿ ಕಾರಣ

    ವಿಷಯ ಗೊತ್ತಾದ ಕೆಲವೇ ಗಂಟೆಯಲ್ಲಿ ಮನೆ ಬೆಳಗಿತು

    IPS ಅಧಿಕಾರಿ, ಅಜ್ಜಿ ಸಂಭ್ರಮದಲ್ಲಿ ಆನಂದಬಾಷ್ಪ

‘ಖುಷಿ ಮತ್ತು ಸಂತೋಷಗಳನ್ನು ಮಾಡುವ ಕೆಲಸದಲ್ಲಿ ಕಾಣಬೇಕು’ ಎಂಬ ಮಾತಿದೆ. ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕ ಬದುಕಿನಲ್ಲಿರೋರಿಗೆ ಈ ಮಾತು ಹೆಚ್ಚಾಗಿ ಅನ್ವಯಿಸುತ್ತದೆ. ಆಕೆಗೆ 70 ವರ್ಷ. ಬದುಕಿನ ಎಲ್ಲಾ ಏಳುಬೀಳುಗಳನ್ನು ಎದುರಿಸಿ, ಕೊನೆ ದಿನಗಳನ್ನು ಎದುರು ನೋಡುತ್ತಿರುವ ಅಜ್ಜಿಯ ಮುಖದಲ್ಲಿ ಯಾವತ್ತೂ ಅರಳಿರದ ಸಂತೋಷದ ನುಗುವೊಂದು ಮೂಡಿದೆ.

ಸ್ವಾಭಿಮಾನಿ ಅಜ್ಜಿ

ಉತ್ತರ ಪ್ರದೇಶದ ಬುಲಂದಶಹ್ರ ಜಿಲ್ಲೆಯಲ್ಲಿ ಅಗೊಟ ಎಂಬ ಚಿಕ್ಕ ಹಳ್ಳಿಯೊಂದು ಇದೆ. ಈ ಊರಲ್ಲಿ ನೂರ್ ಜಹಾನ್ ಎಂಬ ಮಹಿಳೆ 70 ವರ್ಷಗಳಿಂದ ವಾಸವಿದ್ದಾಳೆ. ಪತಿಯನ್ನು ಕಳೆದುಕೊಂಡ ಮೇಲೆ ಅನಾಥಳಾಗಿ, ಯಾರ ಹಂಗಿಲ್ಲದೇ ಸ್ವಾಭಿಮಾನಿ ಹೆಣ್ಣಾಗಿ, ಒಬ್ಬಂಟಿಯಾಗಿ ಬದುಕುತ್ತಿದ್ದಾಳೆ.

ಮಿಷನ್ ಶಕ್ತಿ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ, ‘ಮಿಷನ್ ಶಕ್ತಿ’ ಎಂಬ ಯೋಜನೆಯಡಿ ಮಹಿಳೆಯರ ರಕ್ಷಣೆಗೆ ನಿಂತಿದೆ. ಮಹಿಳೆಯರಿಗೆ ಉದ್ಯೋಗ, ಭದ್ರತೆ, ಘನತೆಗಾಗಿ ಕೆಲಸ ಮಾಡುತ್ತಿದೆ. ‘ಮಿಷನ್ ಶಕ್ತಿ’ ಯೋಜನೆ ಲಾಭ ರಾಜ್ಯದ ಪ್ರತಿ ಮನೆಯ ಮಹಿಳೆಗೂ ಸಿಗಬೇಕು ಅನ್ನೋದು ಯೋಗಿ ಆದಿತ್ಯನಾಥ್ ಸರ್ಕಾರದ ಉದ್ದೇಶ. ಅದರಂತೆ ಸರ್ಕಾರದ ಅಧಿಕಾರಿಗಳು ಗ್ರಾಮದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ತಿದ್ದಾರೆ.

ಅದರಂತೆ ಜೂನ್ 26, 2023 ರಂದು ಐಪಿಎಸ್​ ಅಧಿಕಾರಿ ಅನುಕೃತಿ ಶರ್ಮಾ ಖೇರಿ ಗ್ರಾಮದಲ್ಲಿ ಅದಾಲತ್ ರೀತಿಯಲ್ಲಿ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಹಲವು ಮಹಿಳೆಯರು ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದರು. ಅವರಲ್ಲಿ 70 ವರ್ಷದ ವೃದ್ಧೆ ನೂರ್ ಜಹಾನ್ ಕೂಡ ಒಬ್ಬರು ಇದ್ದರು. ಅಧಿಕಾರಿಯ ಬಳಿ ನೂರ್ ಜಹಾನ್, ತಮ್ಮ ಚಿಕ್ಕದಾದ ಗುಡಿಸಲು ಮತ್ತು ಕತ್ತಲೆಯಲ್ಲಿ ವಾಸಿಸುತ್ತಿರುವ ಬಗ್ಗೆ ಮನವಿ ಮಾಡಿಕೊಂಡಿದ್ದರು.

ನನ್ನ ಮನೆಯು ಕತ್ತಲೆಯಲ್ಲಿತ್ತು. ಇದರಿಂದ ರಾತ್ರಿ ಅಡುಗೆ ಮಾಡಲು ತುಂಬಾ ಕಷ್ಟ ಆಗುತ್ತಿತ್ತು. ಮನೆಯಲ್ಲಿ ಫ್ಯಾನ್ ಇಲ್ಲದಿದ್ದರಿಂದ ಬೇಸಿಗೆಯಲ್ಲಿ ಸಕೆಗೆ ತುಂಬಾ ಕಷ್ಟವಾಗುತ್ತಿತ್ತು. ಅಧಿಕಾರಿಗಳಿಗೆ ದೂರು, ಮನವಿ ಸಲ್ಲಿಸಲು ನನಗೆ ಅಕ್ಷರಗಳು ಗೊತ್ತಿಲ್ಲ. ಹೀಗಾಗಿ ನಾನು ಅನುಕೃತಿ ಶರ್ಮಾ ಮೇಡಂಗೆ ತಿಳಿಸಿದೆ. ಅವರು ನನ್ನ ಸಹಾಯಕ್ಕೆ ಬಂದು. ಮನೆಯಲ್ಲಿ ಬೆಳಕು ಬೆಳಗಿದೆ. ಖುಷಿಯಾಗಿದೆ.
ನೂರ್ ಜಹಾನ್, ವೃದ್ಧೆ

ಕಣ್ಣೀರಿಟ್ಟ ಕಣ್ಣಲ್ಲಿ ಆನಂದಬಾಷ್ಪ

ಮನೆಯ ಸುತ್ತುಮುತ್ತ ಇರುವ ನಿವಾಸಗಳಲ್ಲಿ 24×7 ಗಂಟೆಗಳ ಕಾಲ ಕರೆಂಟ್ ಇದೆ. ಆದರೆ ನನ್ನ ಮನೆಯಲ್ಲಿ ಈ ಭಾಗ್ಯವೇ ಇಲ್ಲ ಎಂದು ಕಣ್ಣೀರಿಟ್ಟಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿ ಶರ್ಮಾ, ದೂರು ನೀಡಿದ ಕೇಲವೇ ಗಂಟೆಗಳಲ್ಲಿ ಆಕೆಯ ಕಣ್ಣಲ್ಲಿ ಆನಂದಬಾಷ್ಪ ಬರುಬಂತೆ ಮಾಡಿದ್ದಾರೆ.

ಅಧಿಕಾರಿ ಅನುಕೃತಿ ಶರ್ಮಾ, ಅಜ್ಜಿಯ ಪೂರ್ವಪರವನ್ನು ತಿಳಿದುಕೊಂಡು, ಆಕೆಯ ಸಹಾಯಕ್ಕೆ ನಿಂತಿದ್ದಾರೆ. ನಿವಾಸಕ್ಕೆ ಕೊನೆಗೂ ವಿದ್ಯುತ್​ ಮೀಟರ್​ ಅಳವಡಿಸಿ ಅಜ್ಜಿಯ ಬಾಳಿಗೆ ಬೆಳಕಾಗಿದ್ದಾರೆ. ಮನೆಯಲ್ಲಿ ಕರೆಂಟ್ ಬರುತ್ತಿದ್ದಂತೆಯೇ ವೃದ್ಧೆ ಖುಷಿಯಿಂದ ಸಂಭ್ರಮಿಸಿದ್ದಾರೆ. ಮಾತ್ರವಲ್ಲ ಪೊಲೀಸ್ ಅಧಿಕಾರಿ ಕೂಡ ಸಖತ್ ಎಂಜಾಯ್ ಮಾಡಿದ್ದಾರೆ. ಇನ್ನು ಅಜ್ಜಿಗೆ ಒಂದು ಫ್ಯಾನ್ ಕೂಡ ಉಚಿತವಾಗಿ ನೀಡಿದ್ದಾರೆ. ಮನೆಗೆ ಕರೆಂಟ್ ಬರ್ತಿದ್ದಂತೆಯೇ ವೃದ್ಧೆಗೆ ಪೊಲೀಸ್ ಅಧಿಕಾರಿಗಳು ಸಿಹಿ ತಿನಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಫಸ್ಟ್ ಟೈಂ’ ಮನೆಗೆ ಕರೆಂಟ್ ಬಂದಾಗ.. 70 ವರ್ಷದ ಈ ಅಜ್ಜಿಯ ಸಂಭ್ರಮ ನೀವು ನೋಡಲೇಬೇಕು.. Video

https://newsfirstlive.com/wp-content/uploads/2023/06/current.jpg

Load More