newsfirstkannada.com

ಅಭಿಮಾನಿಯ ಆಸೆಗೆ No ಎನ್ನಲಿಲ್ಲ ಕಿಂಗ್.. ಮೈ ತುಂಬಾ ಕೊಹ್ಲಿಯ ಟ್ಯಾಟೂ.. ಇದು ವಿರಾಟ್ ಫ್ಯಾನ್ಸ್ ಸ್ಟೋರಿ..! ​

Share :

Published June 24, 2023 at 10:21am

    ರನ್​ ಮಷಿನ್​ಗೆ ಇದೆಂಥಾ ಕ್ರೇಜಿ ಫ್ಯಾನ್ಸ್​​, ವಿರಾಟ್​ ಅಂದ್ರೆ ಪಂಚಪ್ರಾಣ

    ಫ್ಯಾನ್ಸ್​ ಹಾಕಿಸಿಕೊಂಡ ಟ್ಯಾಟೂ ನೋಡಿ ವಿರಾಟ್​ ಕೊಹ್ಲಿ ಫುಲ್​ ಫಿದಾ

    ವಿರಾಟ್​ ಕೊಹ್ಲಿರನ್ನು ನೋಡಿ ಅಭಿಮಾನಿ ಮುದ್ದಾಡಿಯೇ ಬಿಟ್ಟರು

ವಿರಾಟ್ ಕೊಹ್ಲಿ ರೂಲರ್​ ಆಫ್​ ಕ್ರಿಕೆಟ್​​​. 2ನೇ ಕ್ರಿಕೆಟ್ ದೇವರು. ಅಂದಹಾಗೇ ವಿರಾಟ್​​ರನ್ನು ಈ ಮಟ್ಟಕ್ಕೆ ಬೆಳೆಸಿದ್ದು, ಮೆರೆಸಿದ್ದು ಅಭಿಮಾನಿ ದೇವರುಗಳು. ಹಾಗಾಗಿ ಫ್ಯಾನ್ಸ್​ಗಳಿಲ್ಲದ ಕಿಂಗ್ ಕೊಹ್ಲಿ ಕ್ರಿಕೆಟ್​ ಚಾಪ್ಟರ್​ ಅಪೂರ್ಣ. ಈ ಮಹಾದಿಗ್ಗಜನಿಗೆ ಇರುವಂತ ಹಾರ್ಡ್​ ಕೋರ್ ಫ್ಯಾನ್ಸ್​ ಮತ್ಯಾರಿಗೂ ಇಲ್ಲ. ನಿಜಕ್ಕೂ ಕ್ರೇಜಿ ಫ್ಯಾನ್ಸ್​​​ ಅಂದ್ರು ತಪ್ಪಲ್ಲ!

ಭಾರತದಲ್ಲಿ ಕ್ರಿಕೆಟ್ ಅನ್ನೋದು ಬರೀ ಒಂದು ಗೇಮ್​ ಅಷ್ಟೇ ಅಲ್ಲ. ಅದೊಂದು ಧರ್ಮ. ಇಲ್ಲಿ ಕ್ರಿಕೆಟಿಗನರನ್ನು ದೇವರಂತೆ ಆರಾಧಿಸ್ತಾರೆ. ಸ್ಕೂಲಿಗೆ ಹೋಗುವ ಚಿಕ್ಕ ಮಗುವಿನಿಂದ ಹಿಡಿದು ಹರಳಿ ಕಟ್ಟೆಯಲ್ಲಿ ಕೂತು ಹರಟೆ ಹೊಡೆಯುವ ವಯಸ್ಕರಿಗೂ ಕ್ರಿಕೆಟ್ ಹುಚ್ಚಿದೆ. ಈ ಕ್ರೇಜ್​​ ಅನ್ನ ಡಬಲ್ ಮಾಡಿದ್ದು, ಕ್ರೇಜಿ ಸ್ಟಾರ್​ ವಿರಾಟ್​ ಕೊಹ್ಲಿ.

ವಿರಾಟ್ ಕೊಹ್ಲಿ ಈ ದಿಗ್ಗಜನಿಗೆ ಬರೀ ಫ್ಯಾನ್ಸ್​ ಅಷ್ಟೇ ಅಲ್ಲ, ಕ್ರೇಜಿ ಫ್ಯಾನ್ಸ್​ಗಳಿದ್ದಾರೆ. ಅಭಿಮಾನಿಗಳ ಪಾಲಿಗೆ ಕೊಹ್ಲಿನೇ ದೇವರು, ಕೊಹ್ಲಿನೇ ಉಸಿರು. ಇವರು ತೋರಿಸುವ ಪ್ರೀತಿಗೆ ಬೆಲೆ ಕಟ್ಟಲಾಗದು. ಇಂತವರ ಪ್ರೀತಿ ಸಂಪಾದಿಸಿದ ಕೊಹ್ಲಿ ನಿಜಕ್ಕೂ ಪುಣ್ಯವಂತ.

ಅಭಿಮಾನಿಯ ಕೈಬೆರಳಲ್ಲಿ ಅರಳಿದ ಕೊಹ್ಲಿ ಭಾವಚಿತ್ರ ..!

ಕಿಂಗ್ ಕೊಹ್ಲಿಗೆ ಎಂತೆಂತ ಫ್ಯಾನ್ಸ್ ಇದ್ದಾರೆ ಅನ್ನೋದಕ್ಕೆ ಇದೊಂದು ಚಿತ್ರ ಸಾಕು. ಅಭಿಮಾನಿಯೊಬ್ಬ ಪೇಟಿಂಗ್​​​​​​​​​​​​​​​​​​ ಮೂಲಕ ತನ್ನ ದಿಲ್ ಕಾಸ್​ ಬಾಸ್​​​​​​​​​​ ಕಲಾಕೃತಿ ಸಿದ್ಧಪಡಿಸಿದ್ದಾನೆ. ಅವರ ಕೈ ಚಳಕವನ್ನ ಹೇಳೋದಕ್ಕಿಂತ ನೋಡೋದೇ ಲೇಸು.

ಮೈಪೂರ್ತಿ ವಿರಾಟ್ ಕೊಹ್ಲಿಯ ಟ್ಯಾಟೂ

ಅಭಿಮಾನಿಗಳು ಹೇಗೆಲ್ಲ ಪ್ರೀತಿ ವ್ಯಕ್ತಪಡಿಸಿದ್ದಾರೆ ಅನ್ನೋದನ್ನ ಜಡ್ಜ್​ ಮಾಡೋದು ಕಷ್ಟ. ಬಿಹಾರದ ಅಭಿಮಾನಿಯೊಬ್ಬ ಮೈಪೂರ್ತಿ ತನ್ನ ಹೀರೋ ಕೊಹ್ಲಿಯ ಟ್ಯಾಟೂಗಳನ್ನೇ ಹಾಕಿಸಿಕೊಂಡಿದ್ದಾನೆ. ಮೈತುಂಬಾ 15 ಟ್ಯಾಟೋಸ್​ಗಳಿವೆ. ಈತನ ಅಭಿಮಾನಕ್ಕೆ ಮರುಳಾಗಿದ್ದ ಕೊಹ್ಲಿ, ಪಿಂಟೋರನ್ನ ಭೇಟಿಯಾಗಿ ಪೋಟೋ ತೆಗೆಸಿಕೊಂಡಿದ್ರು.

ಕೊಹ್ಲಿ ಪ್ರತಿಮೆಗೆ ಕಿಸ್ ಕೊಟ್ಟ ಕ್ರೇಜಿ ಲೇಡಿ ಫ್ಯಾನ್​​

ಪ್ರತಿಯೊಬ್ಬ ತನ್ನ ನೆಚ್ಚಿನ ಕ್ರಿಕೆಟಿಗನನ್ನ ನೇರವಾಗಿ ಮೀಟ್​ ಮಾಡ್ಬೇಕು ಅಂತ ಬಯಸ್ತಾರೆ. ಆದ್ರೆ ಎಷ್ಟೋ ಜನರಿಗೆ ಅದು ಸಾಧ್ಯವಾಗಿರಲಿಲ್ಲ. ಆ ಲಿಸ್ಟ್​​​ನಲ್ಲಿ ಈ ಲೇಡಿ ಸೇರಿಕೊಳ್ತಾರೆ. ಲಂಡನ್​​ನಲ್ಲಿರುವ ಕೊಹ್ಲಿ ಸ್ಟ್ಯಾಚುವನ್ನು ತಬ್ಬಿಕೊಂಡು ತುಟಿಗೆ ಚುಂಬಿಸಿದ್ದಳು.

ನೀರಿನಲ್ಲಿ ಮುಳುಗಿ ಹೃದಯದ ರಾಜನಿಗೆ ಬರ್ತ್​ಡೇ ವಿಶಸ್​​​​..!

ಇನ್ನೂ ಇದಂತೂ ಇನ್ನೂ ಕ್ರೇಜಿ. ಕೊಹ್ಲಿ ಭಾವಚಿತ್ರವಿರುವ ಕೇಕನ್ನ ಹಿಡಿದುಕೊಂಡು ನೀರಿನೊಳಗೆ ಮುಳುಗಿ ವಿರಾಟ್​​​ರ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ರು. ಇವರ ಅಭಿಮಾನಕ್ಕೆ ಎಷ್ಟೇ ಥ್ಯಾಂಕ್ಸ್ ಹೇಳಿದ್ರು ಕಮ್ಮಿನೇ. ಇದಿಷ್ಟೇ ಅಲ್ಲ, ಅದೆಷ್ಟೋ ಬಾರಿ ಫ್ಯಾನ್ಸ್​ ಸೆಕ್ಯೂರಿಟಿ ಕಣ್ತಪ್ಪಿಸಿ ನೆಚ್ಚಿನ ಕ್ರಿಕೆಟಿಗನ ಪಾದಮುಟ್ಟಿ, ಸೆಲ್ಫಿ ತೆಗೆಸಿಕೊಂಡಿದ್ದಾರೆ.

ಕೊಹ್ಲಿಯನ್ನ ಮುದ್ದಾಡಿದ 87ರ ಅಜ್ಜಿ..!

ಅದು 2019ರ ಒನ್ಡೇ ವಿಶ್ವಕಪ್ ಸಮಯ. 87ರ ಅಜ್ಜಿಯೊಬ್ಬರು ವಿರಾಟ್ ಕೊಹ್ಲಿಯನ್ನ ಮುದ್ದಾಡಿ ಖುಷಿಪಟ್ಟಿದ್ರು. ಕೊಹ್ಲಿಯಂತೂ ಅಜ್ಜಿಯ ಪ್ರೀತಿಗೆ ಕಳೆದುಹೋಗಿದ್ರು. ರಿಯಲಿ ಇದನ್ನೆಲ್ಲ ನೋಡಿದ್ರೆ ಒಂದೇ ಮಾತು ಹೇಳಬಹುದು..ಇಂತಹ ಕ್ರೇಜಿ ಫ್ಯಾನ್ಸ್​​ಗಳನ್ನ ಸಂಪಾದಿಸಿದ ಕಿಂಗ್ ಕೊಹ್ಲಿ ನಿಜಕ್ಕೂ ಅದೃಷ್ಟವಂತ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಅಭಿಮಾನಿಯ ಆಸೆಗೆ No ಎನ್ನಲಿಲ್ಲ ಕಿಂಗ್.. ಮೈ ತುಂಬಾ ಕೊಹ್ಲಿಯ ಟ್ಯಾಟೂ.. ಇದು ವಿರಾಟ್ ಫ್ಯಾನ್ಸ್ ಸ್ಟೋರಿ..! ​

https://newsfirstlive.com/wp-content/uploads/2023/06/VIRAT_KOHLI_FAN_TATTO.jpg

Load More