Advertisment

ಮೇಘಾ ಶೆಟ್ಟಿ ಫುಲ್ ಬ್ಯುಸಿ! ಒಂದಲ್ಲಾ.. ಎರಡಲ್ಲಾ ‘ಕೈವ’ ನಟಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಗೊತ್ತಾ?

author-image
AS Harshith
Updated On
ಮೇಘಾ ಶೆಟ್ಟಿ ಫುಲ್ ಬ್ಯುಸಿ! ಒಂದಲ್ಲಾ.. ಎರಡಲ್ಲಾ ‘ಕೈವ’ ನಟಿ ಕೈಯಲ್ಲಿ ಎಷ್ಟು ಸಿನಿಮಾಗಳಿವೆ ಗೊತ್ತಾ?
Advertisment
  • ಚಾಲೆಂಜಿಂಗ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರೋ ಮೇಘಾ ಶೆಟ್ಟಿ
  • ಮೇಘಾ ಶೆಟ್ಟಿ ನಟನೆಯ ಹೊಸ ಸಿನಿಮಾಗಳ ಲುಕ್ ರಿವೀಲ್
  • ಆಪರೇಷನ್ ಲಂಡನ್ ಕೆಫೆಯಲ್ಲಿ ನಟಿಸುತ್ತಿದ್ದಾರೆ ಕರಾವಳಿ ಕುವರಿ

‘ಕೈವ’ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ.

Advertisment

ನಿನ್ನೆಯಷ್ಟೇ ಮೇಘಾ ಶೆಟ್ಟಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾಗಳ ಲುಕ್ ರಿವೀಲ್ ಆಗಿದೆ. ಅದರಂತೆಯೇ ವಿಜಯ್ ರಾಜ್‍ಕುಮಾರ್ ನಟನೆಯ ಗ್ರಾಮಾಯಣ, ಪ್ರಜ್ವಲ್ ದೇವರಾಜ್ ನಟನೆಯ ಚೀತಾ ಹಾಗೂ ಆಪರೇಷನ್ ಲಂಡನ್ ಕೆಫೆ ಸಿನಿಮಾಗಳ ಫಸ್ಟ್ ಲುಕ್ ಗಮನ ಸೆಳೆಯುತ್ತಿವೆ.

publive-image

ಮೇಘಾ ಶೆಟ್ಟಿ 2019ರಲ್ಲಿ ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಜನರ ಮನಗೆದ್ದಿದ್ದರು. ಬಳಿಕ ಟ್ರಿಪಲ್​ ರೈಡಿಂಗ್​, ದಿಲ್ಪಸಂದ್​ ನಂತರ ಕೈವ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಮೇಘಾ ಶೆಟ್ಟಿ ಕೈಯಲ್ಲಿ ಮೂರು ಸಿನಿಮಾಗಳಿವೆ.

publive-image

ಇನ್ನು ಮೇಘಾ ಶೆಟ್ಟಿ ಮಂಗಳೂರು ಮೂಲದವರು. ಬಂಟ್ಸ್​ ಕುಟುಂಬದಲ್ಲಿ ಜನಿಸಿದ ಇವರು ಮಾಸ್ಟರ್​ ಆಫ್​ ಬ್ಯುಸಿನೆಸ್​ ಅಡ್ಮಿನ್​ಸ್ಟ್ರೇಷನ್​ನಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಸದ್ಯ ಸಿನಿಮಾದಲ್ಲಿ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment