newsfirstkannada.com

ಮಾಡರ್ನ್​​​ಗೂ ಸೈ, ಟ್ರೆಡಿಷನಲ್​​ ಲುಕ್​​ಗೂ ಸೈ; ಈ ಇಬ್ಬರು ನಟಿಯರಿಗೆ ಎಷ್ಟು ಮಾರ್ಕ್ಸ್​​ ಕೊಡ್ತೀರಿ?

Share :

05-08-2023

    ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡಿದ ನಟಿ

    ಹೊಸ ಫೋಟೋಶೂಟ್​ ಮೂಲಕ ವೀಕ್ಷಕರ ಮನ ಕದ್ದ ಈ ಚೋರಿ!

    ಸೀರಿಯಲ್​ ಮುಗಿದ ಬಳಿಕ ವೀಕ್ಷಕರ ಮನ ಗೆದ್ದ ನಟಿ ಮೇಘಾ ಶೆಟ್ಟಿ

ಬೆಳ್ಳಿತೆರೆ ಬೆಳಗಲು ನಮ್ಮ ಸೀರಿಯಲ್​ ಲೋಕದ ಕೊಡುಗೆ ಅಪಾರ. ಅದೆಷ್ಟೋ ಪ್ರತಿಭೆಗಳನ್ನ ಬೆಳ್ಳಿತೆರೆಗೆ ಬಳುವಳಿಯಾಗಿ ನೀಡಿದ ಹೆಮ್ಮೆ ಕೂಡ ನಮ್ಮದೇ. ಕಿರುತೆರೆಯಲ್ಲಿ ಧಮಾಕ ಸೃಷ್ಟಿಸುತ್ತಿರುವ ಸೀರಿಯಲ್​ ಬೆಡಗಿಯರು ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಸೆನ್ಸೇಷನ್​ ಕ್ರಿಯೇಟ್​ ಮಾಡುತ್ತಿದ್ದಾರೆ. ರಾಮಾಚಾರಿ ಬೆಡಗಿ ನಟಿ ಮೌನ ವೀಕ್ಷಕರ ದಿಲ್​ ಕದ್ದ ಚೋರಿ ಆಗಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಸ್ನಿಗ್ಧ ಸುಂದರಿ. ರಾಮಾಚಾರಿ ಪ್ರೀತಿ ಚಾರು ಆಗಿ ವೀಕ್ಷಕರ ಹಾರ್ಟ್​ ಫೇವರಿಟ್​ ಆಗಿರೋ ಮೌನ ಇತ್ತೀಚೆಗೆ ಸ್ಲಿಮ್​ ಆ್ಯಂಡ್​ ಫಿಟ್​ ಆಗಿದ್ದಾರೆ. ಮಾಡಲ್​ ಆಗಿ ಜರ್ನಿ ಶುರು ಮಾಡಿದ ಮೌನ ಮಾಡಲಿಂಗ್ ಕಂಟಿನ್ಯೂ ಮಾಡಲಿಲ್ಲ. ಮುಂದೇನು? ಅಂತಾ ಯೋಚಿಸುತ್ತಿದ್ದಾಗ ಈ ಬೆಡಗಿಯನ್ನ ಅರಸಿ ಬಂದಿದ್ದು ರಾಮಾಚಾರಿಯ ಚಾರು ಪಾತ್ರ. ಬಣ್ಣದ ಲೋಕದಲ್ಲಿ ಯಶಸ್ಸು ಅನ್ನೋದು ಅಷ್ಟು ಸುಲಭಕ್ಕೆ ಸಿಗೋವಂತದ್ದಲ್ಲ.

ಮೌನ ಅವರ ವಿಷಯದಲ್ಲೂ ಇದೇ ಆಗಿದ್ದು, ರಾಮಾಚಾರಿ ಮೊದಲ​ ಸಂಚಿಕೆಗಳಲ್ಲಿ ​ಮೌನ ಅಭಿನಯದ ಬಗ್ಗೆ ನೀರಸ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಆದರೆ ಇದನ್ನೆಲ್ಲಾ ಚಾಲೆಂಜ್​ ಆಗಿ ಸ್ವೀಕರಿಸಿದ ನಟಿ, ಮನರಂಜನೆ ಲೋಕದಲ್ಲಿ ಭರವಸೆಯ ನಟಿಯಾಗಿ ಬೆಳೆಯುತ್ತಿದ್ದಾರೆ. ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಸೀರಿಯಲ್​ನಲ್ಲಿ ಹೆಚ್ಚು ಮಾಡರ್ನ್‌​ ಲುಕ್​ನಲ್ಲೇ ಕಾಣಿಸಿಕೊಳ್ಳುತ್ತಿದ್ದ ನಟಿ, ರೀಲ್‌ ಮದುವೆ ನಂತರದ ಸಂಚಿಕೆಗಳಲ್ಲಿ ಸೀರೆ ಉಟ್ಟು ಮತ್ತಷ್ಟು ವೀಕ್ಷಕರಿಗೆ ಹತ್ತಿರವಾಗಿದ್ದಾರೆ. ಅಂತಹದ್ದೇ ಒಂದು ಲುಕ್​ನಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ. ಆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪೋಸ್ಟ್​ ಮಾಡಿರೋ ಫೋಟೋದಲ್ಲಿ ನಟಿ ಮೌನ ಥೇಟ್​​ ಅಪ್ಸರೆಯಂತೆ ಝಗಮಗಿಸುತ್ತಿದ್ದಾರೆ.

ಜೊತೆ ಜೊತೆಯಲಿ ಸೀರಿಯಲ್​ ಮೂಲಕ ಜನಪ್ರಿಯತೆ ಪಡೆದವರು ನಟಿ ಮೇಘಾ ಶೆಟ್ಟಿ. ಸೀರಿಯಲ್​ ವೈಂಡಪ್​ ಆದ್ರೂ ಜನ ಇವತ್ತಿಗೂ ಅವರನ್ನು ಅನು ಸಿರಿಮನೆ ಅಂತಾನೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರಿಗೆ ಹತ್ತಿರವಾಗಿತ್ತು. ಸದ್ಯ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಆಗಾಗ ಭಿನ್ನ ವಿಭಿನ್ನ ಫೋಟೋಶೂಟ್ ಮಾಡಿಸುವ​ ಮೂಲಕ ಸುದ್ದಿಯಲ್ಲಿರುವ ಮೇಘಾ ಮತ್ತೊಂದು ಹೊಸ ಬಗೆಯ ಶೂಟ್​ ಪೋಟೋಶೂಟ್​​ ಮಾಡಿಸಿದ್ದಾರೆ.

ಆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ನಟಿ ಅಂದ್ಮೇಲೆ ಎಲ್ಲಾ ಗೆಟಪ್‌ನಲ್ಲೂ ಪರ್ಫೆಕ್ಟ್‌ ಆಗಿ ಕಾಣಿಸಬೇಕು. ಆಗ ಮಾತ್ರ ಅವರು ಪರಿಪೂರ್ಣ ಕಲಾವಿದರಾಗಿದ್ದಾರೆ. ಆ ದೃಷ್ಟಿಕೋನದಲ್ಲಿ ನೋಡಿದರೆ ಇವರಿಬ್ಬರಿಗೆ ಎಲ್ಲಾ ಕಾಸ್ಟ್ಯೂಮ್‌ ಸೂಟ್​ ಆಗುತ್ತೆ.

View this post on Instagram

A post shared by Mouna Guddemane (@mouna_guddemane)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮಾಡರ್ನ್​​​ಗೂ ಸೈ, ಟ್ರೆಡಿಷನಲ್​​ ಲುಕ್​​ಗೂ ಸೈ; ಈ ಇಬ್ಬರು ನಟಿಯರಿಗೆ ಎಷ್ಟು ಮಾರ್ಕ್ಸ್​​ ಕೊಡ್ತೀರಿ?

https://newsfirstlive.com/wp-content/uploads/2023/08/jothe-jotheyali.jpg

Load More