34 ವರ್ಷಗಳ ಬಳಿಕ ಕಾಂಗ್ರೆಸ್‌ಗೆ ದಾಖಲೆಯ ವಿಜಯ
ಈ ಬಾರಿ ಕಾಂಗ್ರೆಸ್ ಬಹುಮತ ಸರ್ಕಾರದ ಗುಟ್ಟೇನು?
ಕಾಂಗ್ರೆಸ್ ಪಕ್ಷದ ಗೆಲುವಿಗೆ ಫೋಟೋಗಳ ಸಾಕ್ಷಿ
34 ವರ್ಷಗಳ ಬಳಿಕ ಕಾಂಗ್ರೆಸ್ ಕರ್ನಾಟಕ ಕುರುಕ್ಷೇತ್ರದಲ್ಲಿ ದಾಖಲೆಯ ದಿಗ್ವಿಜಯ ಸಾಧಿಸಿದೆ. 1989ರ ಚುನಾವಣೆಯಲ್ಲಿ 178 ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳು ಗೆದ್ದಿದ್ದರು. 2023ರಲ್ಲಿ 135 ಶಾಸಕರ ಗೆಲುವಿಗೆ ಕಾರಣವಾಗಿರುವ ಕಾಂಗ್ರೆಸ್, ಈ ಬಾರಿ ಬಹುಮತದ ಸರ್ಕಾರ ರಚಿಸಲು ರೆಡಿಯಾಗಿದೆ. 34 ವರ್ಷಗಳ ಬಳಿಕ ಈ ಮ್ಯಾಜಿಕ್ ನಡೆದಿರೋದು ಸುಮ್ಮನೆ ಮಾತಲ್ಲ. ಹಾಗಿದ್ರೆ ಕಾಂಗ್ರೆಸ್ ಪಕ್ಷದ ಗೆಲುವಿನ ಹಾದಿ ಹೇಗಿತ್ತು ಅನ್ನೋದನ್ನ ಫೋಟೋಗಳಲ್ಲಿ ತೋರಿಸ್ತೀವಿ ನೋಡಿ.
ಫೋಟೋ ನಂ.1
ಮೇಕೆದಾಟು ಪಾದಯಾತ್ರೆ
ಜನವರಿ 9, 2022ರಲ್ಲಿ ನೀರಿಗಾಗಿ ನಡಿಗೆ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಕಾಂಗ್ರೆಸ್ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದರು. ಕನಕಪುರ ತಾಲೂಕಿನ ಸಂಗಮದಲ್ಲಿ ಆರಂಭಗೊಂಡ ಪಾದಯಾತ್ರೆಗೆ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕೈ ನಾಯಕರು ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ್ದರು. ಎರಡು ಹಂತದಲ್ಲಿ ನಡೆದ ಈ ಪಾದಯಾತ್ರೆಯಲ್ಲಿ ಸುಮಾರು 170 ಕಿಮೀ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಮಾರ್ಚ್ 3, 2022ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೇಕೆದಾಟು ಪಾದಯಾತ್ರೆ ಸಮಾರೋಪಗೊಂಡಿತು.
ಫೋಟೋ ನಂ.2
ಸ್ವಾತಂತ್ರ್ಯದ ನಡಿಗೆ
ಆಗಸ್ಟ್ 15, 2022ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ನಡಿಗೆ ಹಮ್ಮಿಕೊಂಡಿತ್ತು. ರಾಜಧಾನಿ ಬೆಂಗಳೂರು ನಗರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ತ್ರಿವರ್ಣ ಧ್ವಜ ಹಿಡಿದು ಹೆಜ್ಜೆ ಹಾಕಿದರು. ಸುಮಾರು ಏಳೂವರೆ ಕಿಲೋ ಮೀಟರ್ ನಡೆದ ಕೈ ನಾಯಕರ ಮೆರವಣಿಗೆ ನೋಡುಗರ ಗಮನ ಸೆಳೆದಿತ್ತು.
ಫೋಟೋ ನಂ.3
PAYCM ಕ್ಯಾಂಪೇನ್
ವಿಧಾನಸಭಾ ಚುನಾವಣೆಗೂ ಮುನ್ನ ಹೆಚ್ಚು ಸದ್ದು ಮಾಡಿದ್ದು ಕಾಂಗ್ರೆಸ್ ಪಕ್ಷದ ಪೇ ಸಿಎಂ ಪೋಸ್ಟರ್ ಅಭಿಯಾನ. ರಾತ್ರೋರಾತ್ರಿ ಸಂಚಲನ ಸೃಷ್ಟಿಸಿದ ಈ ಪೇಸಿಎಂ ಪೋಸ್ಟರ್, ಬಿಜೆಪಿ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಇದಾದ ಮೇಲೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪೇಸಿಎಂ ಪೋಸ್ಟರ್ ಅಂಟಿಸಲು ಬೀದಿಗಿ ಇಳಿದಿದ್ದರು. ಆಗ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಫೋಟೋ ನಂ.4
ಬೆಲೆ ಏರಿಕೆ ವಿರುದ್ಧ ಹೋರಾಟ
ಅಡುಗೆ ಸಿಲಿಂಡರ್ ದರ 1000, ಪೆಟ್ರೋಲ್ ಲೀಟರ್‌ಗೆ 100 ರೂಪಾಯಿಗೂ ಹೆಚ್ಚು. ಈ ಬೆಲೆ ಏರಿಕೆಯ ಬಿಸಿ ವಿರುದ್ಧ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಹೋರಾಟ ನಡೆಸಿದ್ದರು. ಬಿಜೆಪಿ ನೇತೃತ್ವದ ರಾಜ್ಯ, ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ್ದಾರೆ. ಬೆಲೆ ಏರಿಕೆ ವಿಚಾರದ ಮೂಲಕ ಗಮನ ಸೆಳೆಯುವ ಜೊತೆ ಕಾಂಗ್ರೆಸ್ ನಾಯಕರು ಕೊಟ್ಟ ಭರವಸೆಗಳು ಕಾಂಗ್ರೆಸ್ ಪಕ್ಷದ ಕೈ ಹಿಡಿಯಲು ಸಹಕಾರಿಯಾಗಿದೆ.
ಫೋಟೋ ನಂ.5
ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ
ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗ್ತಿದ್ದಂತೆ ಕಾಂಗ್ರೆಸ್ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತಾಡಿದರು. ಪ್ರಮುಖವಾಗಿ ಪ್ರಜಾಧ್ವನಿಯ ಹೆಸರಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉತ್ತರ, ದಕ್ಷಿಣ ಕರ್ನಾಟಕದಲ್ಲಿ ಭರ್ಜರಿ ಮತಯಾಚನೆ ಮಾಡಿದ್ದಾರೆ.
ಫೋಟೋ ನಂ.6
‘ಕೈ’ ಹಿಡಿದ ಗ್ಯಾರಂಟಿ ಸ್ಕೀಮ್
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದು ಗ್ಯಾರಂಟಿ ಭರವಸೆಗಳು. 10 ಕೆಜಿ ಅಕ್ಕಿ, 200 ಯೂನಿಟ್ ಉಚಿತ ವಿದ್ಯುತ್, ಮನೆ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ, ನಿರುದ್ಯೋಗಿಗಳಿಗೆ 3000 ರೂಪಾಯಿ ಈ ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ನಾಯಕರು ಮತದಾರರನ್ನ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ