newsfirstkannada.com

Black Tiger.. ಈಗಲೇ ನೋಡಿ ಬಿಡಿ ಮತ್ತೆ ಈ ಹುಲಿ ಕಾಣುತ್ತೋ, ಇಲ್ವೋ! ಕರಿವ್ಯಾಘ್ರನ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Share :

06-08-2023

    ದೇಶದಲ್ಲೇ ಅಪರೂಪಕ್ಕೊಮ್ಮೆ ಮಾತ್ರ ಕಾಣುವ ಕಪ್ಪು ಹುಲಿ ಇದು

    ಕಳಿಂಗಾದಲ್ಲಿ ಕರಿವ್ಯಾಘ್ರನ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ..!

    ನೀವು ಎಲ್ಲೂ ನೋಡಿರದ ಅಪರೂಪದ ಹುಲಿ ಕಾಣಿಸಿದ್ದು ಎಲ್ಲಿ?

ಭುವನೇಶ್ವರ: ನಾವೆಲ್ಲ ಹುಲಿಗಳನ್ನು ನೋಡಿರುತ್ತೇವೆ. ಇದು ನಮ್ಮ ರಾಷ್ಟ್ರೀಯ ಪ್ರಾಣಿಯೂ ಹೌದು. ಸಾಮಾನ್ಯವಾಗಿ ಈ ಹುಲಿಗಳ ದೇಹದ ಮೇಲೆ ಕಪ್ಪು ಪಟ್ಟಿಗಳಿರುತ್ತವೆ. ಕೊನೆಗೆ ಬಿಳಿ ಹುಲಿ ಮೈಮೇಲೂ ಕಪ್ಪು ಪಟ್ಟಿಗಳಿರುತ್ತವೆ. ಆದರೆ ಇಲ್ಲೊಂದು ಅತಿ ಅಪರೂಪದ ಟೈಗರ್​ ಕ್ಯಾಮೆರಾ ಕಣ್ಣಿಗೂ ಕಾಣಿಸಿದ್ದು ನೋಡಲು ಭಯಾನಕವಾಗಿದೆ.

ಒಡಿಶಾದ ಮಯೂರ್ ಬಂಜ್ ಜಿಲ್ಲೆಯಲ್ಲಿನ ಸಿಮ್ಲಿಪಾಲ್ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಮೆಲಾನಿಸ್ಟಿಕ್ (Melanistic Tiger) ಹುಲಿಯೊಂದು ಅಪರೂಪಕ್ಕೆ ಕಾಣಿಸಿಕೊಂಡಿದೆ. ನೋಡಲು ಭಯಾನಕವಾಗಿರುವ ಈ ಹುಲಿಯು ಕ್ಯಾಮೆರಾ ಕಣ್ಣಿಗೆ ಸೆರೆ ಸಿಕ್ಕಿರೋದು ಅಪರೂಪ. ನೋಡಲು ಭಯಾನಕವಾಗಿ ಕಾಣಿಸುವ ಈ ಹುಲಿ ದೇಹವೆಲ್ಲ ಕಪ್ಪು ಬಣ್ಣದಿಂದ ಕೂಡಿದೆ. ಬೇಟೆಯಾಡಲು ಮರದ ಬುಡದಲ್ಲಿ ತಡಬಡಿಸಿ ಬಳಿಕ ಅಲ್ಲಿಂದ ಹೋಗಿದೆ.

ಇನ್ನು ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ರಮೇಶ್ ಪಾಂಡೆ ಅವರು ತಮ್ಮ ಟ್ವಿಟರ್​ ಅಕೌಂಟ್​ನಲ್ಲಿ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಬ್ಲ್ಯಾಕ್​ ಟೈಗರ್ ಮರದ ಬುಡದಲ್ಲಿ ಬೇಟೆಯಾಡಲು ಹವಣಿಸುತ್ತಿರುತ್ತೆ. ಆದರೆ ಬೇಟೆ ಸಿಗದಿದ್ದಕ್ಕೆ ಅಲ್ಲಿಂದ ಹೊರಟು ಹೋಗಿದೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Black Tiger.. ಈಗಲೇ ನೋಡಿ ಬಿಡಿ ಮತ್ತೆ ಈ ಹುಲಿ ಕಾಣುತ್ತೋ, ಇಲ್ವೋ! ಕರಿವ್ಯಾಘ್ರನ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆ

https://newsfirstlive.com/wp-content/uploads/2023/08/BLACK_TIGER.jpg

Load More