newsfirstkannada.com

ನಟ ಜಗ್ಗೇಶ್‌ಗೂ ತಟ್ಟಿದ ಭಾರೀ ಮಳೆಯ ರಗಳೆ; ಮನೆಗೆ ನೀರು ನುಗ್ಗಿ BMW ಕಾರು ಮುಳುಗಡೆ

Share :

22-05-2023

    ನಟ ಜಗ್ಗೇಶ್‌ಗೂ ತಟ್ಟಿದ ಅಕಾಲಿಕ ಮಳೆಯ ಶಾಕ್

    ನವರಸ ನಾಯಕನ BMW ಕಾರು ಮುಳುಗಡೆ

    ಪಾರ್ಕಿಂಗ್‌ಗೆ ನುಗ್ಗಿದ ಆಲಿಕಲ್ಲಿನ ಭಾರೀ ಮಳೆ

ಬೆಂಗಳೂರು: ನಿನ್ನೆ ಸಂಜೆ ಸುರಿದ ಭಾರೀ ವರ್ಷಧಾರೆ ಸಿಲಿಕಾನ್ ಸಿಟಿಯಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಮಳೆ ತಂದ ಅವಾಂತರದ ಮಧ್ಯೆ ಜನರು ಪರದಾಟ ನಡೆಸಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ, ನಟ ನವರಸ ನಾಯಕ ಜಗ್ಗೇಶ್‌ಗೂ ಅಕಾಲಿಕ ಮಳೆಯ ಬಿಸಿ ತಟ್ಟಿದೆ.

ನಿನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ಜಗ್ಗೇಶ್ ಅವರ BMW ಕಾರು ಮುಳುಗಡೆ ಆಗಿದೆ. ತಮ್ಮ ಮನೆಯ ರಿಪೇರಿ ಕಾರ್ಯ ಹಿನ್ನೆಲೆಯಲ್ಲಿ ಜಗ್ಗೇಶ್ ಅವರು ತಮ್ಮ ಕಾರನ್ನು ಸ್ನೇಹಿತ ಮುರುಳಿ ಎಂಬುವರ ಮನೆ ಬಳಿ ನಿಲ್ಲಿಸಿದ್ದರು.

ನಿನ್ನೆ ಸುರಿದ ಭಾರೀ ಮಳೆಯಿಂದ ಮುರುಳಿ ಅವರ ಮನೆ ಹಾಗೂ ಪಾರ್ಕಿಂಗ್‌ಗೆ ನೀರು ನುಗ್ಗಿದೆ. ಮಳೆ ನೀರು ನುಗ್ಗಿ ಜಗ್ಗೇಶ್ ಅವರ ಕಾರು ಮುಳುಗಡೆಯಾಗಿದೆ. ಕೊನೆಗೆ ಜಗ್ಗೇಶ್ ಸ್ನೇಹಿತ ಮುರುಳಿ ಅವರು ಪಂಪ್ ಬಳಸಿ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರೋ ಜಗ್ಗೇಶ್ ಅವರು ಇಂಥ ಆಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದಿದ್ದು ಆಶ್ಚರ್ಯ ತಂದಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ  

ನಟ ಜಗ್ಗೇಶ್‌ಗೂ ತಟ್ಟಿದ ಭಾರೀ ಮಳೆಯ ರಗಳೆ; ಮನೆಗೆ ನೀರು ನುಗ್ಗಿ BMW ಕಾರು ಮುಳುಗಡೆ

https://newsfirstlive.com/wp-content/uploads/2023/05/Jaggesh.jpg

Load More