newsfirstkannada.com

VIDEO: ಚಲಿಸುತ್ತಿದ್ದ ಕಾರುಗಳ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ.. ಗ್ಯಾಂಗ್​ನಿಂದ ಪುಂಡಾಟ

Share :

15-11-2023

    ಚಲಿಸುತ್ತಿದ್ದ ಕಾರಿನ ಮೇಲ್ಛಾವಣಿ ಮೇಲೆ ಪಟಾಕಿ ಸಿಡಿಸಿದ ಪುಂಡರು

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ಪಟಾಕಿ ವಿಡಿಯೋ

    ದೀಪಾವಳಿ ಹಬ್ಬವನ್ನು ಈ ರೀತಿ ಆಚರಣೆ ಮಾಡಿದ ಯುವಕರು

ಚಂಡೀಗಢ: ಚಲಿಸುತ್ತಿದ್ದ ಕಾರಿನ ಮೇಲ್ಛಾವಣಿ ಮೇಲೆ ಪಟಾಕಿ ಸಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗುತ್ತಿದೆ. ಮೂರು ಕಾರುಗಳನ್ನು ರಸ್ತೆಯಲ್ಲಿ ಚಲಿಸಿಕೊಂಡು ಅದರ ಮೇಲ್ಛಾವಣಿಯಿಂದ ಪಟಾಕಿಗಳನ್ನು ಸಿಡಿಸಿ ದೀಪಾವಳಿಯನ್ನು ಆಚರಿಸಿದ್ದಾರೆ.

ಬಳಿಕ ಪೊಲೀಸರಿಗೆ ಕಾರಿನ ಗುರುತು ಕಾಣದಂತೆ ನಂಬರ್​ ಪ್ಲೇಟ್ ಅನ್ನು ಕಿತ್ತು ಹಾಕಿದ್ದಾರೆ. ಈ ಘಟನೆ ನಡೆದಿದ್ದು ಗುರುಗ್ರಾಮ್‌ನ ಸೆಕ್ಟರ್ 70ರ ಮಾಲ್‌ನ ಮುಂಭಾಗದಲ್ಲಿ. ವೈರಲ್​ ಆದ ವಿಡಿಯೋದಲ್ಲಿ ಅತಿ ವೇಗವಾಗಿ ಬಂದ ಕಾರಿನಲ್ಲಿ ಕೆಲ ಯುವಕರಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ.

ಮತ್ತೊಂದು ಕಾರಿನ ಮೇಲ್ಛಾವಣಿಯ ಕಿಟಕಿಯಿಂದ ಒಬ್ಬ ವ್ಯಕ್ತಿ ಕೂಗುತ್ತಾ ಮತ್ತು ಪಟಾಕಿಯನ್ನು ಎಸೆಯುತ್ತಿರುವುದನ್ನು ಕಾಣಬಹುದು. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದಂತೆ ಗುರುಗ್ರಾಮ್ ಪೊಲೀಸ್​ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೀಗೆ ಮಾಡಿದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಚಲಿಸುತ್ತಿದ್ದ ಕಾರುಗಳ ಮೇಲೆ ಪಟಾಕಿ ಸಿಡಿಸಿ ಹುಚ್ಚಾಟ.. ಗ್ಯಾಂಗ್​ನಿಂದ ಪುಂಡಾಟ

https://newsfirstlive.com/wp-content/uploads/2023/11/pataki.jpg

Load More