ಪುಟಿನ್ ಸೇನೆ ವಿರುದ್ಧ ದಂಗೆದ್ದ ‘ವ್ಯಾಗ್ನರ್ ಗ್ರೂಪ್’
ರಷ್ಯಾದಲ್ಲಿ ಮಿಲಿಟರಿ ಪಡೆಗಳ ಮಧ್ಯೆ ಆಂತರಿಕ ಯುದ್ಧ
ವ್ಯಾಗ್ನರ್ ಗ್ರೂಪ್ಗೆ ಪುಟಿನ್ ಹಾಕಿದ ಚಾಲೇಂಜ್ ಏನು..?
ರಷ್ಯಾದಲ್ಲಿ ವ್ಯಾಗ್ನರ್ ಗುಂಪು ಮತ್ತು ಸೇನೆ ನಡುವೆ ನಡೆಯುತ್ತಿದ್ದ ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಧ್ಯಕ್ಷ ಪುಟಿನ್ ಸೇನೆ ವಿರುದ್ಧ ‘ವ್ಯಾಗ್ನರ್ ಗ್ರೂಪ್’ ದಂಗೆದ್ದ ಬೆನ್ನಲ್ಲೇ, ಮಾಸ್ಕೋ ಪರಿಸ್ಥಿತಿ ಬಿಗಡಾಯಿಸಿದೆ.
ದೇಶ ದ್ರೋಹಿಗಳ ವಿರುದ್ಧ ಹೋರಾಟ
ಪರಿಸ್ಥಿತಿ ಉದ್ವಿಗ್ನಗೊಳ್ತಿದ್ದಂತೆಯೇ ರಾಷ್ಟ್ರವನ್ನು ಉದ್ದೇಶಿಸಿ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಭಾಷಣ ಮಾಡಿದ್ದಾರೆ. ವ್ಯಾಗ್ನೆರ್ ಖಾಸಗಿ ಸೇನೆಯ ಬಂಡಾಯವು ಬೆನ್ನಿಗೆ ಚೂರಿ ಇರಿದಂತಾಗಿದೆ. ನಾವು ಒಗ್ಗಟ್ಟಾಗಿದ್ದು, ದೇಶವನ್ನು ರಕ್ಷಣೆ ಮಾಡುತ್ತೇವೆ. ಬಂಡಾಯ ಎದ್ದವರನ್ನು ಕಠಿಣವಾಗಿ ಶಿಕ್ಷಿಸುತ್ತೇವೆ. ದೇಶದ್ರೋಹಿಗಳ ವಿರುದ್ಧ ಹೋರಾಡುತ್ತೇವೆ ಎಂದು ಕಿಡಿಕಾರಿದ್ದಾರೆ.
ನಮ್ಮ ಉತ್ತರ ಕಠೋರಕ್ಕಿಂತ ಕಠೋರ..!
ನಾವು ನಮ್ಮ ಜನರ ಜೀವ, ರಕ್ಷಣೆಗಾಗಿ ಹೋರಾಡುತ್ತಿದ್ದೇವೆ. ಈಗ ನಮ್ಮ ಉತ್ತರ ಕಠೋರಕ್ಕಿಂತ ಕಠೋರವಾಗಿರಬೇಕು. ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಎಲ್ಲ ಶಕ್ತಿಗಳೂ ಒಗ್ಗೂಡಬೇಕು. ರಷ್ಯಾದ ಹಣೆ ಬರಹವನ್ನು ಈಗಲೇ ನಿರ್ಧರಿಸಬೇಕು ಅಂತಾ ಕರೆ ಕೊಟ್ಟಿದ್ದಾರೆ. ನಮ್ಮದೇ ಸೇನೆಯು ವಿಶ್ವಾಸಘಾತಕ ಪ್ರದರ್ಶನ ಮಾಡಿದೆ. ವ್ಯಾಗ್ನೆರ್ ಸೇನೆಯು ರಷ್ಯಾದ ಜನರಿಗೆ ವಂಚನೆ ಮಾಡಿದೆ. ರಷ್ಯಾ ತನ್ನ ಭವಿಷ್ಯಕ್ಕಾಗಿ ಹೋರಾಡುತ್ತಿದೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ